Karnataka Times
Trending Stories, Viral News, Gossips & Everything in Kannada

Arecanut Plantation: ಮಳೆಗಾಲ ಆರಂಭ ಆದ ಮೇಲೆ ಅಡಿಕೆ ತೋಟ ಇದ್ದವರು ಕೂಡಲೇ ಈ ಕೆಲಸ ಮಾಡಿ

advertisement

ಕೃಷಿ ರೈತರ ಮುಖ್ಯ ಭಾಗವಾಗಿದ್ದು ಕೃಷಿ ಮಾಡಿ ಬದುಕು ಕಟ್ಟಿ ಕೊಂಡ ರೈತರು ಬಹುತೇಕ ಜನರು ಇದ್ದಾರೆ. ಕೃಷಿ ಅಂದಾಗ ಅಡಿಕೆ,ಬಾಳೆ ಇತ್ಯಾದಿಗಳ ತೋಟವನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಅದರಲ್ಲೂ ಮಲೆನಾಡು ,ಕರಾವಳಿ ಭಾಗದಲ್ಲಿ ಈ ಅಡಿಕೆ ಕೃಷಿ ಹೆಚ್ಚಾಗಿದೆ.ಅದರಲ್ಲೂ ಈ ಭಾರಿ ಮಳೆಯ ಸಮಸ್ಯೆ ಯಿಂದಾಗಿ ಬರ ಪರಿಸ್ಥಿತಿ ಉಂಟಾಗಿದೆ.

ನೀರಿನ ಸಮಸ್ಯೆ ‌ಇಂದಾಗಿ ಬೆಳೆ ಹಾನಿ ಉಂಟಾಗಿದೆ. ರೈತರು ಮಳೆ ಆಗಮನಕ್ಕಾಗಿ ಕಾಯುತ್ತಿದ್ದಾರೆ.ಇನ್ನೇನು ಮಳೆಗಾಲ‌ ಆರಂಭ ವಾಗಲಿದ್ದು ರೈತರು ಮಳೆಗಾಲದಲ್ಲಿ ಅಡಿಕೆ ತೋಟ (Arecanut Plantation) ವನ್ನು ಯಾವ ರೀತಿ ಸಂರಕ್ಷಣೆ ‌ಮಾಡಬೇಕು, ತೋಟವನ್ನು ಯಾವ ರೀತಿ‌ ಕಾಯ್ದು ‌ಕೊಳ್ಳಬೇಕು‌ ಎಂಬ ಮಾಹಿತಿ ಈ‌ ಲೇಖನದಲ್ಲಿ ಇದೆ.

ಮಳೆಗಾಲದಲ್ಲಿ ಏನು ಮಾಡಬೇಕು?

 

advertisement

Image Source: Fatimachurchpernal.in

 

  • ರೈತರು ಮಳೆಗಾಲದಲ್ಲಿಯು ಅಡಿಕೆ (Arecanut) ಗಿಡಗಳ ಪೋಷಣೆ ‌ಯನ್ನು ಸರಿಯಾಗಿ ಮಾಡಬೇಕು. ಮಳೆಗಾಲದ ಆರಂಭದಲ್ಲಿ ಮಳೆ ಬಂತು ಎಂದು ನೀವು ಗಿಡಗಳಿಗೆ ನೀರು ಬಿಡದೇ ಇರಬಾರದು.ಈ ಸಂದರ್ಭದಲ್ಲಿಯು ತೋಟಕ್ಕೆ ಸರಿಯಾದ ಪ್ರಮಾಣದಲ್ಲಿ ‌ನೀರು ಬೀಡಬೇಕು. ಇದು‌ ಮಳೆಗಾಲದ ಆರಂಭ ವಾಗಿರುವುದರಿಂದ ನೀರಿನ‌ ಅವಶ್ಯಕ ತೋಟಗಳಿಗೆ ಹೆಚ್ಚು ಇರಲಿದೆ.
  • ಇನ್ನು ಮಳೆಗಾಲದ ಸಂದರ್ಭದಲ್ಲಿ ನೀವು ತೋಟವನ್ನು ಕಲ್ಟಿವೇಷನ್ ಮಾಡಬಾರದು. ಯಾಕಂದ್ರೆ ಆ ಸಂದರ್ಭದಲ್ಲಿ ಬೇರುಗಳು ಹೆಚ್ಚು ಬೆಳೆದಿರುತ್ತದೆ. ನೀವು ತೋಟವನ್ನು ಕಲ್ಟಿವೇಷನ್ (Arecanut Cultivation) ಮಾಡಿದ್ದಲ್ಲಿ ಬೇರುಗಳು ತುಂಡಾಗಿ ಪೋಷಣೆ ಕಳೆದುಕೊಳ್ಳಲಿದೆ.
  • ಮಳೆಗಾಲದ ಸಂದರ್ಭದಲ್ಲಿ ತೋಟಕ್ಕೆ ಗೊಬ್ಬರ ನೀಡುವುದು ಸಹ ಬಹಳ ಮುಖ್ಯವಾಗುತ್ತದೆ. ಹಸಿರು ಗೊಬ್ಬರಗಳನ್ನು, ಎರೆಹುಳು ಗೊಬ್ಬರ ವನ್ನು ಸರಿಯಾದ ಪ್ರಮಾಣದಲ್ಲಿ ನೀಡಿ.
  • ಎಷ್ಟೇ ಮಳೆ ಬಂದರೂ ತೋಟದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ನಿಲ್ಲಲು ಬಿಡಬೇಡಿ. ಗಿಡಗಳು ಕೊಳೆತು ಹೋಗಲಿದೆ ಹಾಗಾಗಿ ಈ ಬಗ್ಗೆಯು ಎಚ್ಚರವಹಿಸಿ.
  • ಮಳೆಗಾಲದಲ್ಲಿ ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಮಾಡಿ ನೀರು ಸರಾಗವಾಗಿ ಹರಿದು ಹೋಗಲು ತೋಟದಲ್ಲಿ ಸರಿಯಾದ ವ್ಯವಸ್ಥೆ ಮಾಡಬೇಕು.
  • ಇನ್ನು ಅಡಿಕೆ ಮರದ ಕೆಳಗೆ ಬಿದ್ದಿರುವ ರೋಗ ಪೀಡಿತ ಅಡಿಕೆ ಕಾಯಿ ಹಾಗೂ ಒಣಗಿದ ಹಿಂಗಾರ, ಸೋಗೆ ಇತ್ಯಾದಿಯನ್ನು ಆರಿಸಿ ಮಣ್ಣಿನಿಂದ ಮುಚ್ಚಬೇಕು. ತೋಟದಲ್ಲಿ ಗಿಡಗಳಿಗೆ ಇದನ್ನೆ ಗೊಬ್ಬರ ವಾಗಿ ಬಳಕೆ ಮಾಡಬಹುದು.
  • ಕೀಟನಾಶಕ ಸಿಂಪಡಣೆ ಅಗತ್ಯ ಇದ್ದರೆ ಮಾತ್ರ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಕೀಟ ನಾಶಕ ಸಿಂಪಡಣೆ ಮಾಡಬಾರದು.

ರಸಾಯನಿಕ ಗೊಬ್ಬರ ಬಳಸಬೇಡಿ:

ಅಡಿಕೆಯಲ್ಲಿರಸಾಯನಿಕ ಗೊಬ್ಬರ ಬಳಕೇ ಮಾಡದೇ ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡಿ. ಡಾ ಸಾಯಿಲ್ (Dr. Soil) ಬಳಕೆಗೆ ಮೊದಲ ಆದ್ಯತೆಯನ್ನು ‌ನೀವು ನೀಡಿದರೆ ಅಡಿಕೆಯಲ್ಲಿ ಹೆಚ್ಚಿನ ಪ್ರಮಾಣದ ಇಳುವರಿ ಯನ್ನು‌ ನೀವು ಕಾಣಬಹುದಾಗಿದೆ. ಇನ್ನು‌ ಮಣ್ಣಿನ ಪರೀಕ್ಷೆ ಮಾಡಿಸಿ ಮಣ್ಣಿನ ಗುಣಮಟ್ಟ ವನ್ನು‌ ಕೂಡ ತಿಳಿಯುದು ಬಹಳ ಮುಖ್ಯವಾಗುತ್ತದೆ

advertisement

Leave A Reply

Your email address will not be published.