Karnataka Times
Trending Stories, Viral News, Gossips & Everything in Kannada

Crop Insurance: ಬೆಳೆ ವಿಮೆ ಹಣಕ್ಕೆ ಕ್ಷಣಗಣನೆ! ಸರ್ಕಾರದಿಂದ ಹೊಸ ಅಪ್ಡೇಟ್, ಇಲ್ಲಿದೆ ಲಿಂಕ್

advertisement

ಈ ಭಾರಿ ಮಳೆ ಬಾರದೇ ನೀರಿನ ಸಮಸ್ಯೆ ಉಂಟಾಗಿ ರೈತರು ಬಹಳಷ್ಟು ಕಷ್ಟ ಅನುಭವಿಸಿದ್ದಾರೆ. ಈಗಾಗಲೇ‌ ಕೆಲವೆಡೆ ಬಹಳಷ್ಟು ಬೆಳೆ ಹಾನಿ‌ಯಾಗಿದ್ದು ರೈತರು ಬಹಳಷ್ಟು ತೊಂದರೆಯಲ್ಲಿ ಇದ್ದಾರೆ. ಇದಕ್ಕಾಗಿ ಬೆಳೆ ಪರಿಹಾರ ನೀಡಬೇಕೆಂದು ರೈತರು ಪಟ್ಟು ಹಿಡಿದಿದ್ದು ಬೆಳೆ ಪರಿಹಾರ ಮೊತ್ತದ ಮೊದಲ ಕಂತಿನ ಪರಿಹಾರ ಮೊತ್ತ ವನ್ನು ಸರಕಾರ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

ವಿಮಾ ಮೊತ್ತ:

ರೈತರು ಬಿತ್ತನೆ ಮಾಡಿದ ಸಂದರ್ಭದಲ್ಲಿ ಬೆಳೆ ಹಾನಿಯಾದರೆ ಅಂದರೆ ಶೇಕಡಾ 75ಕ್ಕಿಂತ ಹೆಚ್ಚಿನ ‌ ಪ್ರದೇಶದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ (Crop Insurance) ಮೊತ್ತದ ಗರಿಷ್ಠ 25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ನೀಡಲಿದೆ. ಹಾಗಾಗಿ ಈ ಸಂದರ್ಭದಲ್ಲಿ ಬರದಿಂದ ಬೆಳೆ ಹಾನಿ ಯಾಗಿದ್ದು ವಿವಿಧ ಜಿಲ್ಲೆಗಳಲ್ಲಿ ಬೆಳೆ ವಿಮೆ ಹಣ ಬಿಡುಗಡೆ ಮಾಡಿದೆ.

ನೋಂದಣಿ ಮಾಡಿರಬೇಕು:

ಪ್ರತಿ ವರ್ಷ ಕೂಡ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (Pradhan Mantri Fasal Bima Yojana) ಯಡಿಯಲ್ಲಿ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗುತ್ತದೆ. ಈ‌ ಬೆಳೆ ವಿಮೆ (Crop Insurance) ಯು ಹವಾಮಾನ, ನೈಸರ್ಗಿಕ ವಿಕೋಪದ ಅತೀವ ಮಳೆ, ಬರಗಾಲ‌ ಸಂದರ್ಭದಲ್ಲಿ ನಷ್ಟ ಉಂಟಾದರೆ ಬೆಳೆ ಪರಿಹಾರ ನೀಡಲಾಗುತ್ತದೆ. ರೈತರು ನೋಂದಣಿಗಾಗಿ ತಮ್ಮ ಹತ್ತಿರದ ಬ್ಯಾಂಕುಗಳಿಗೆ ಅಥವಾ ಪ್ರಾಥಮಿಕ ಸಹಕಾರ ಸಂಘಗಳಿಗೆ ಸಂಪರ್ಕಿಸಿ ಬೆಳೆವಿಮೆ (Crop Insurance) ಮಾಡಬಹುದು.

advertisement

ಬೆಳೆ ವಿಮೆ ವಿತರಣೆ, ಚೆಕ್ ಮಾಡಿ ತಿಳಿದುಕೊಳ್ಳಿ‌:

 

Image Source: IndiaFilings

 

ಬೆಳೆ ವಿಮೆ (Crop Insurance) ವಿತರಣೆಯು ಕೆಲವೊಂದು ಜಿಲ್ಲೆಗಳಲ್ಲಿ ಪ್ರಾರಂಭವಾಗಲಿದ್ದು ನೀವು ಈ ಬಗ್ಗೆ ತಾಲೂಕುವಾರು ಪಟ್ಟಿಯನ್ನು ನೋಡಿ ಚೆಕ್ ಮಾಡಬಹುದಾಗಿದೆ.ಈ ಬಗ್ಗೆ ಪರಿಶೀಲನೆ ‌ಮಾಡಲು ಮೊದಲಿಗೆ ಬೆಳೆ ವಿಮಾ ವೆಬ್‌ಸೈಟ್ https://pmfby.gov.in/ ಗೆ ಹೋಗಬೇಕು. ನಂತರ ನಿಮ್ಮ ಅಪ್ಲಿಕೇಶನ್ ಸ್ಥಿತಿಯ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.ಇದರಲ್ಲಿ ನಿಮ್ಮ ರಶೀದಿ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ನಂತರ ಚೆಕ್ ಸ್ಟೇಟಸ್ ಬಟನ್ ಅನ್ನು ಆಯ್ಕೆ ಮಾಡಿದರೆ ಹಣ ಬಂದಿರುವ ಬಗ್ಗೆ ತಿಳಿಯಲಿದೆ.

ಇಷ್ಟು ಹಣ ಬಿಡುಗಡೆ?

ರಾಜ್ಯ ಸರ್ಕಾರವು ಈಗಾಗಲೇ ‌ ಸುಮಾರು 19 ಲಕ್ಷ ರೈತರಿಗೆ 14 ಕೋಟಿ ರೂಪಾಯಿ ಬೆಳೆ ವಿಮೆಯ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದೆ. ಈಗಾಗಲೇ 25 ಲಕ್ಷ ರೈತರು ತಮ್ಮ ಹೆಸರನ್ನು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (Pradhan Mantri Fasal Bima Yojana) ಯಲ್ಲಿ ನೊಂದಣಿ ‌ಮಾಡಿದ್ದು ಈಗಾಗಲೇ 25% ಮಧ್ಯಂತರ ಬೆಳೆವಿಮೆ ಹಣ (Crop Insurance Money) ಬಿಡುಗಡೆಯಾಗಿದ್ದು, ಸದ್ಯದಲ್ಲೇ ಉಳಿದ 75% ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

advertisement

Leave A Reply

Your email address will not be published.