Bank of Baroda: ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್! ಹೆಸರು ಸೇರಿಸುತ್ತಿರುವ ಜನ
ಪ್ರತಿಯೊಬ್ಬರಿಗೂ ದುಡಿದಂತಹ ಹಣವನ್ನು ಕೂಡಿಸಿಟ್ಟು ಅದನ್ನು ಅತ್ಯುತ್ತಮ ಲಾಭ ಬರುವ ಕಡೆ ಹೂಡಿಕೆ ಮಾಡಬೇಕೆಂಬ ಯೋಜನೆ ಇದ್ದೇ ಇರುತ್ತದೆ. ಈ ಕಾರಣದಿಂದಾಗಿ ಸಾಕಷ್ಟು ಬ್ಯಾಂಕುಗಳು ಹಾಗೂ ಪೋಸ್ಟ್ ಆಫೀಸ್ಗಳು ಜನರ ಅನುಕೂಲಕ್ಕೆ ತಕ್ಕನಾದ ಎಫ್ ಡಿ ಯೋಜನೆ (FD Schemes) ಗಳನ್ನು ಜಾರಿಗೆ ತರುತ್ತಿರುತ್ತಾರೆ. ಹೀಗಿರುವಾಗ ನಾವಿವತ್ತು ಬ್ಯಾಂಕ್ ಆಫ್ ಬರೋಡಾದಲ್ಲಿ (Bank of Baroda) 5 ಲಕ್ಷ ಹಣವನ್ನು 399 ದಿನಗಳವರೆಗೂ ಎಫ್ ಡಿ ಮಾಡಿ ಇಟ್ಟರೆ ಮೆಚುರಿಟಿ ಪಿರಿಯಡ್ ನಲ್ಲಿ ನಮಗೆ ದೊರಕುವ ಲಾಭವೆಷ್ಟು ಎಂಬ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ.
ದೊಡ್ಡ ಮೊತ್ತದ ಹಣವನ್ನು ಅಲ್ಪಾವಧಿಯವರೆಗೂ ಹೂಡಿಕೆ ಮಾಡಿ ನಿಮ್ಮ ಹಣಕ್ಕೆ ಸಂಪೂರ್ಣ ಸುರಕ್ಷತೆ ಹಾಗೂ ಅತ್ಯುತ್ತಮ ರಿಟರ್ನ್ಸ್ (Complete Security And Amazing Returns) ಅನ್ನು ಎದುರು ನೋಡುತ್ತಿದ್ದರೆ ಬ್ಯಾಂಕ್ ಆಫ್ ಬರೋಡ ಗ್ರಾಹಕರಿಗೆ ಕಲ್ಪಿಸಿ ಕೊಡುತ್ತಿರುವ ಈ ಎಫ್ ಡಿ ಸ್ಕೀಮ್ ಅತ್ಯುತ್ತಮ ಆಯ್ಕೆ. ಹೌದು ಸ್ನೇಹಿತರೆ ಬ್ಯಾಂಕ್ ಆಫ್ ಬರೋಡ ತಮ್ಮ ಎಫ್ಡಿ ಯೋಜನೆಗೆ ತಿರಂಗ ಪ್ಲಸ್ (Tiranga Plus) ಎಂಬ ಹೆಸರಿಟ್ಟಿದ್ದು, ಈ ಯೋಜನೆಯ ಅಡಿ 399 ದಿನಗಳ ಕಾಲ 5 ಲಕ್ಷ ರೂಪಾಯಿ ಹಣವನ್ನು ಹೂಡಿಗೆ ಮಾಡಿದರೆ ಅತ್ಯುತ್ತಮ ರಿಟರ್ನ್ಸ್ ದೊರಕುತ್ತದೆ.
5 ಲಕ್ಷ ಹೂಡಿಕೆಗೆ 7.15% ಬಡ್ಡಿ:
ಬ್ಯಾಂಕ್ ಆಫ್ ಬರೋಡದ (Bank of Baroda) ತಿರಂಗ ಯೋಜನೆಯಲ್ಲಿ ಅಲ್ಪಾವಧಿಯ ಕಾಲ ಹೂಡಿಕೆ ಮಾಡಿದರೆ ಸಾಮಾನ್ಯ ನಾಗರಿಕರ ಹಣಕ್ಕೆ 7.15% ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ವ್ಯಕ್ತಿಯು 5 ಲಕ್ಷ ರೂಪಾಯಿ ಹಣವನ್ನು 399 ದಿನಗಳ ಕಾಲ ತಿರಂಗ ಪ್ಲಸ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮೆಚುರಿಟಿ ಪಿರಿಯಾಡ್ (Maturity Period) ನಲ್ಲಿ ಆತ ₹5,40,347 ಹಣವನ್ನು ಹಿಂಪಡೆಯಬಹುದು, ಅಂದರೆ ಹೂಡಿಕೆದಾರನಿಗೆ 7.15% ಬಡ್ಡಿ ಆಧಾರದ ಮೇಲೆ ₹40,347 ಹಣವನ್ನು ಬಡ್ಡಿ ರೂಪದಲ್ಲಿ ನೀಡಲಾಗುತ್ತದೆ.
ಹಿರಿಯ ನಾಗರಿಕರಿಯ ಹೂಡಿಕೆಯ ಮೇಲೆ 7.65% ಇಂಟರೆಸ್ಟ್ ಮೊತ್ತವನ್ನು ನೀಡಲಾಗುತ್ತದೆ. ಅಂದರೆ ಹಿರಿಯ ನಾಗರಿಕರು (Senior Citizens) 5 ಲಕ್ಷ ರೂಪಾಯಿ ಹಣವನ್ನು 399 ದಿನಗಳ ಕಾಲ ಬ್ಯಾಂಕ್ ಆಫ್ ಬರೋಡ ಎಫ್ಡಿಯಲ್ಲಿ ಹೂಡಿಕೆ ಮಾಡಿದರೆ ಮೆಚುರಿಟಿ ಪಿರಿಯಡ್ ನಲ್ಲಿ ಒಟ್ಟು ₹5,43,261 ಹಣವನ್ನು ಹಿಂಪಡೆಯಬಹುದು ಅಂದರೆ ಬಡ್ಡಿ ದರದ ಮೇಲೆ ₹43,261 ಹಣವನ್ನು ನೀಡಲಾಗುತ್ತದೆ.
ನಾನ್-ಕಾಲಿಂಗ್ ತಿರಂಗ ಪ್ಲಸ್ ಯೋಜನೆಯಲ್ಲಿ 15% ಹೆಚ್ಚಿನ ಬಡ್ಡಿದರ!
ನಾನ್ ಕಾಲಿಂಗ್ ಆಯ್ಕೆಯಲ್ಲಿ (Non Calling Option) ಹೂಡಿಕೆ ಮಾಡಿದರೆ ಸಾಮಾನ್ಯಕ್ಕಿಂತ ಹೆಚ್ಚಿನ ಬಡ್ಡಿ ಅಂದರೆ ಮೆಚುರಿಟಿ ಪಿರಿಯಡ್ ಗಿಂತ ಮುಂಗಡವಾಗಿ ಹಣವನ್ನು ಹಿಂಪಡೆಯಲು ಸಾಧ್ಯವಾಗದ ಯೋಜನೆಯಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿದರೆ ಮತ್ತಷ್ಟು ಹೆಚ್ಚಿನ ಬಡ್ಡಿ ಹಣ ದೊರಕುತ್ತದೆ. ಬ್ಯಾಂಕ್ ಆಫ್ ಬರೋಡದ ತಿರಂಗ ಪ್ಲಸ್ ಹೂಡಿಕೆ ಯೋಜನೆಯಲ್ಲಿ ಈ ಆಯ್ಕೆ ಕೂಡಾ ಲಭ್ಯವಿದ್ದು, ಸಾಮಾನ್ಯ ನಾಗರಿಕರ ಹೂಡಿಕೆಗೆ 7.30% ಹಾಗೂ ಹಿರಿಯ ನಾಗರಿಕರ ಹೂಡಿಕೆಗೆ 7.80% ಬಡ್ಡಿ ದರವನ್ನು ನಿಗದಿಪಡಿಸಿದ್ದಾರೆ.