Karnataka Times
Trending Stories, Viral News, Gossips & Everything in Kannada

Arjun Tendulkar: ಅರ್ಜುನ್ ತೆಂಡೂಲ್ಕರ್ ಈ ಬಾರಿ ಯಾಕೆ IPL ನಲ್ಲಿ ಒಂದೂ ಪಂದ್ಯ ಆಡಿಲ್ಲ ಗೊತ್ತಾ?

advertisement

ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ತಮ್ಮ ಅದ್ಭುತ ಫೇಸ್ ಬೌಲಿಂಗ್ ಪ್ರದರ್ಶನದ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಗೋಳದಾಗುತ್ತಲೇ ಇದ್ದವರು. ಇವರ ಸಾಕಷ್ಟು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದನ್ನು ಕಂಡಂತಹ ಕ್ರಿಕೆಟ್ ಅಭಿಮಾನಿಗಳು ಸಚಿನ್ ತೆಂಡೂಲ್ಕರ್ (Sachin Tendulkar) ಅವರಂತಹ ಮತ್ತೊಬ್ಬ ಕ್ರಿಕೆಟ್ ಈಗ ನಮ್ಮ ಭಾರತ ತಂಡಕ್ಕೆ ಸಿಕ್ಕ ಎಂದು ಖುಷಿ ಪಟ್ಟಿದ್ದರು.

ಕಳೆದ ವರ್ಷ ಐಪಿಎಲ್ ಗೆ ಅರ್ಜುನ್ ಪಾದಾರ್ಪಣೆ

ಆದರೆ ಐಪಿಎಲ್ ಆಕ್ಷನ್ ನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ತಮ್ಮ ಫ್ರಾಂಚೈಸಿಗೆ ಖರೀದಿ ಮಾಡಿ ಒಂದು ಆಟದಲ್ಲಿಯೂ ಅವಕಾಶ ನೀಡಿಲ್ಲ. 2023 ರಂದು ಇಂಡಿಯನ್ ಪ್ರೀಮಿಯರ್ ಲೀಗ್ಗೆ ಪಾದಾರ್ಪಣೆ ಮಾಡಿದ ಅರ್ಜುನ್ ತೆಂಡೂಲ್ಕರ್ (Arjun Tendulkar) ತೀರ ಕಳಪೆ ಪ್ರದರ್ಶನ ತೋರಿದ ಕಾರಣ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಮ್ಯಾನೇಜ್ಮೆಂಟ್ ಅವರಿಗೆ ಆಟವಾಡಲು ಅವಕಾಶ ನೀಡುತ್ತಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.

ಅರ್ಜುನ್ ಬೌಲಿಂಗ್ಗೂ ಸೈ ಬ್ಯಾಟಿಂಗ್ಗೂ ಸೈ:

 

advertisement

Image Source: Hindustan Times

 

ಚಿಕ್ಕಂದಿನಿಂದಲೂ ತಂದೆಯಂತೆ ಬಹು ದೊಡ್ಡ ಕ್ರಿಕೆಟಿಗನಾಗಬೇಕೆಂಬ ಆಸೆಯನ್ನು ಹೊಂದಿದ್ದ ಅರ್ಜುನ್ ತೆಂಡೂಲ್ಕರ್ ಅತ್ಯುತ್ತಮ ಔಟ್ ಸ್ವಿಂಗ್ ಬೌಲರ್ (Out Swing Bowler). ವೇಗದ ಸ್ಪೀಡ್ ನಲ್ಲಿ ಬೌಲಿಂಗ್ ಮಾಡುವ ಮೂಲಕ ವಿಕೆಟ್ ಕಬಳಿಸುವ ಸಾಮರ್ಥ್ಯವನ್ನು ಹೊಂದಿರುವ ಅರ್ಜುನ್ ತೆಂಡೂಲ್ಕರ್ (Arjun Tendulkar) ಒತ್ತಡದ ಸಮಯದಲ್ಲಿ ಬ್ಯಾಟ್ ಹಿಡಿದು ರನ್ಗಳನ್ನು ಸಿಡಿಸುವ ಆಲ್ರೌಂಡರ್ (All Rounder) ಕೂಡ ಹೌದು. ಹೀಗಾಗಿ ಕಳೆದ ವರ್ಷ ಕೊಲ್ಕತ್ತಾ ನೈಟ್ ರೈಡರ್ಸ್ ಅರ್ಜುನ್ ತೆಂಡೂಲ್ಕರ್ ಅವರನ್ನು ಆಕ್ಷನ್ ನಲ್ಲಿ ಕೇವಲ 15 ಲಕ್ಷಕ್ಕೆ ಬಿಡ್ ಮಾಡಿದರು.

MI ಪರ ಒಂದು ಪಂದ್ಯದಲ್ಲೂ ಅರ್ಜುನ್ ಕಾಣಿಸಿಕೊಂಡಿಲ್ಲ!

17ನೇ ಸೀಸನ್ನ ಐಪಿಎಲ್ನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತ್ತು ಐಪಿಎಲ್ ಪ್ರಾರಂಭವಾಗುವ ಆರಂಭಿಕ ದಿನಗಳಲ್ಲಿ ಅರ್ಜುನ್ ತೆಂಡೂಲ್ಕರ್ (Arjun Tendulkar) MI ಕ್ರಿಕೆಟಿಗರೊಂದಿಗೆ ನೆಟ್ ಅಭ್ಯಾಸ ಮಾಡುವ ವೇಳೆ ಅತ್ಯದ್ಭುತ ಯಾರ್ಕರ್ ಬೌಲಿಂಗ್ (Amazing Yorker Bowling) ಮಾಡುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು ಆದರೀಗ ಐಪಿಎಲ್ ಮುಗಿಯುತ್ತ ಬಂದರೂ ಕೂಡ ಮುಂಬೈ ಇಂಡಿಯನ್ಸ್ ತಂಡದ ಒಂದು ಪಂದ್ಯದಲ್ಲಿಯೂ ಅರ್ಜುನ್ ತೆಂಡೂಲ್ಕರ್ ಕಾಣಿಸಿಕೊಂಡಿಲ್ಲ.‌ ಈ ಬಾರಿ ಮುಂಬೈ ಆರಂಭಿಕವಾಗಿಯೇ ಆಘಾತ ಅನುಭವಿಸಿದ್ದರಿಂದ ಅರ್ಜುನ್ ಗೆ ಚಾನ್ಸ್ ಸಿಕ್ಕಿಲ್ಲ .

ಇದರಿಂದಾಗಿ ಅಭಿಮಾನಿಗಳು ಸಚಿನ್ ಪುತ್ರನು ಮತ್ತೆ ಯಾವಾಗ ಐಪಿಎಲ್ ನಲ್ಲಿ ಆಡಲಿದ್ದಾರೆ? ಯಾವ ಪಂದ್ಯದಲ್ಲಿ ತಮ್ಮ ಚಮತ್ಕಾರಿಕ ಬೌಲಿಂಗ್ ಪ್ರದರ್ಶನ ತೋರುತ್ತಾರೆ? ಈಗಾಗಲೇ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗ ಬಹಳ ದುರ್ಬಲವಾಗಿದೆ ಈ ಸಮಯದಲ್ಲಾದರೂ ಅವರಿಗೆ ಅವಕಾಶ ಕೊಡಿ ಎಂಬ ದನಿಯೆತ್ತಿದ್ದಾರೆ.

advertisement

Leave A Reply

Your email address will not be published.