Karnataka Times
Trending Stories, Viral News, Gossips & Everything in Kannada

Nokia: ವಿವೋ ಮತ್ತು Oppo ಫೋನ್ ಗಳಿಗೆ ಅಘಾತ! ಬರಲಿದೆ ನೋಕಿಯಾದ ಈ ಸ್ಮಾರ್ಟ್ಫೋನ್! ಬೆಲೆ ಇಷ್ಟೇ

advertisement

ಹಲವು ವರ್ಷಗಳ ಬಳಿಕ ನೋಕಿಯಾ ಕಂಪನಿ ಮತ್ತೆ ಸ್ಮಾರ್ಟ್ ಫೋನ್ ಗಳ ಜಗತ್ತಿಗೆ ಕಾಲಿಡಲು ಸಜ್ಜಾಗುತ್ತಿದ್ದು, ಆಧುನಿಕ ವೈಶಿಷ್ಟ್ಯತೆಗಳನ್ನು ಅಳವಡಿಸಿ ಮತ್ತೆ ಲೆಜೆಂಡರಿ ನೋಕಿಯಾ ಫೋನನ್ನು (Legendary Nokia Phone) ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಂಪನಿ ತಯಾರಾಗುತ್ತಿದೆ.

ಅತ್ಯುತ್ತಮ ಕ್ಯಾಮೆರಾ ಕ್ವಾಲಿಟಿ ಹಾಗೂ ಫೀಚರ್ಸ್ಗಳಿರುವ ಫೋನ್ ಗ್ರಾಹಕರ ವಲಯದಲ್ಲಿ ಹೆಚ್ಚು ಮನ್ನಣೆ ಗಳಿಸುತ್ತದೆ ಎಂಬ ಭರವಸೆಯನ್ನು ಕಂಪನಿ ಹೊಂದಿದ್ದು, ನೋಕಿಯಾ ಸ್ಮಾರ್ಟ್ ಫೋನ್ (Nokia Smartphone) ಲಾಂಚ್ ಆದರೆ ವಿವೋ ಹಾಗೂ ಒಪ್ಪೋ ಫೋನ್ ಗಳಿಗೆ ಉಳಿಗಾಲವಿಲ್ಲ ಎಂಬ ಗಾಳಿ ಸುದ್ದಿ ಕೂಡ ಹರಿದಾಡುತ್ತಿದೆ.

Nokia Play 2 Max  Features:

 

Image Source: Bestmobile24.com

 

advertisement

20 ವರ್ಷಗಳ ಹಿಂದೆ ಭಾರತೀಯ ಗ್ರಾಹಕರ ಮನಸ್ಸಿನ್ನು ಗೆದ್ದಿದಂತಹ ನೋಕಿಯಾ ಫೋನ್ ಕಾಲಕ್ರಮೇಣ ಸಂಪೂರ್ಣ ಸ್ಥಗಿತಗೊಂಡಿತ್ತು ಇದೀಗ ಮತ್ತೆ ಹೊಸ ವೈಶಿಷ್ಟ್ಯಗಳನ್ನು (New Features) ಒಳಗೊಂಡು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

ನೋಕಿಯಾ ಸ್ಮಾರ್ಟ್ಫೋನಿನಲ್ಲಿ A 4K 6.7 ಇಂಚಿನ ಸೂಪರ್ ಅಮೋಲ್ಡ್ ಡಿಸ್ಪ್ಲೇ ಇದೆ. ಇದರೊಂದಿಗೆ ಫೋನಿನ ಸುರಕ್ಷತೆ ದೃಷ್ಟಿಯಿಂದ ಕಂಪನಿ ಗೊರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್ (Gorilla Glass 6 Protection) ಅನ್ನು ಅಳವಡಿಕೆ ಮಾಡಿ ಗ್ರಾಹಕರಿಗೆ ಒದಗಿಸುತ್ತಾರೆ. ಲೇಟೆಸ್ಟ್ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಹಾಗೂ ಕ್ವಾಲ್ಕಮಂ ಸ್ನಾಪ್ ಡ್ರ್ಯಾಗನ್ 865 ಪ್ರೊಸೆಸರ್ ಇದೆ.

Nokia Play 2 Max Camera Quality:

ನೋಕಿಯಾ ಬಿಡುಗಡೆ ಮಾಡ ಹೊರಟಿರುವಂತಹ ನೂತನ ಸ್ಮಾರ್ಟ್ ಫೋನ್ ನಲ್ಲಿ 64 MP ಮುಖ್ಯ ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 16 MP ಮೆಗಾಪಿಕ್ಸೆಲ್ ಕ್ಯಾಮೆರಾ, 8 MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2 MP ಮೆಗಾ ಪಿಕ್ಸೆಲ್ ಡೆಪ್ತ್ ಕ್ಯಾಮೆರಾಗಳೊಂದಿಗೆ 32 MP ಫ್ರಂಟ್ ಕ್ಯಾಮೆರಾ ಇದ್ದು, ಇದರಿಂದ ನಿಮ್ಮ ಎಲ್ಲಾ ಫೋಟೋಗಳು ಅತ್ಯುತ್ತಮವಾಗಿ ಮೂಡಿ ಬರಲಿದೆ.

ಹೀಗೆ ಅತ್ಯುತ್ತಮ ವೈಶಿಷ್ಟತೆಗಳು ಹಾಗೂ ಡೆಪ್ತ್ ಕ್ಯಾಮೆರಾ (Depth Camera) ಕ್ವಾಲಿಟಿಯನ್ನು ಹೊಂದಿರುವ ನೋಕಿಯಾ ಸ್ಮಾರ್ಟ್ ಫೋನ್ ಕೂಲ್ ಬ್ಲೂ ಬಣ್ಣದಲ್ಲಿ ಲಭ್ಯವಿದ್ದು, ಕೇವಲ ಹತ್ತು ಸಾವಿರ ರೂಪಾಯಿಗಳಿಗೆ ಲಭ್ಯವಿದೆ. ಕಡಿಮೆ ಬೆಲೆಯಲ್ಲಿ ನೋಕಿಯಾ ಕಂಪನಿ ಅತ್ಯುತ್ತಮ ಮೊಬೈಲನ್ನು ಗ್ರಾಹಕರಿಗೆ ಒದಗಿಸುತ್ತಿರುವುದರಿಂದ ವಿವೋ ಹಾಗೂ ಒಪ್ಪೋ ಕಂಪನಿಯ ಮೇಲೆ ನೇರ ಪ್ರಭಾವ ಬೀಳಲಿದೆ.

advertisement

Leave A Reply

Your email address will not be published.