Karnataka Times
Trending Stories, Viral News, Gossips & Everything in Kannada

Ration Shop: ನ್ಯಾಯ ಬೆಲೆ ಅಂಗಡಿ ಇಡಲು ಅರ್ಹತೆ ಏನು? ದಾಖಲೆ ಏನೆಲ್ಲಾ ಬೇಕು, ಇಲ್ಲಿದೆ ಸಿಹಿಸುದ್ದಿ

advertisement

ಇಂದು ಆಹಾರ ಇಲಾಖೆಯು ಬಡ ವರ್ಗದ ಜನತೆಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಿದೆ.ಇದರಿಂದ ಬಡ ವರ್ಗದ ಜನತೆಗೆ ಬಹಳಷ್ಟು ಸಹಕಾರಿ ಯಾಗಿದ್ದು ಇಂದು ಆಹಾರ ಧಾನ್ಯಗಳ ಜೊತೆಗೆ ಹಣವೂ ಕೂಡ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಅದೇ ರೀತಿ ಗ್ರಾಹಕರು ಉಚಿತವಾಗಿ ರೇಷನ್ ಪಡೆಯಲು ನ್ಯಾಯಬೆಲೆ ಅಂಗಡಿ (Ration Shop) ಗೆ ತೆರಳಲೇಬೇಕು. ಹಾಗಾಗಿ ಈ ರೇಷನ್ ಕಾರ್ಡ್ (Ration Card) ಅಂಗಡಿ ಕೂಡ ಬಹಳ ಮುಖ್ಯವಾಗುತ್ತದೆ.

ಅರ್ಜಿ ಹಾಕಬಹುದು:

ಸರ್ಕಾರವು ಹೊಸ ನ್ಯಾಯಬೆಲೆ ಅಂಗಡಿ (New Ration Shop) ಗಳನ್ನು ತೆರೆಯಲು ಅರ್ಜಿ ಆಹ್ವಾನ ಮಾಡುತ್ತದೆ. ನೀವು ಆ ಸ್ಥಳದ ಸ್ಥಳೀಯರಾಗಿದ್ದರೆ ಅರ್ಜಿ ಸಲ್ಲಿಸಿ ನ್ಯಾಯಬೆಲೆ ಅಂಗಡಿಯನ್ನು ಆರಂಭಿಸಬಹುದು, ಇದಕ್ಕೆ ಬೇಕಾದ ಆರಂಭಿಕ ಮೊತ್ತವನ್ನು ನೀವು ವ್ಯಯ ಮಾಡಿದರೆ ತದನಂತರ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯ ಸಿಗಲಿದೆ.

ಅರ್ಹತೆ ಏನು?

  • ಇದಕ್ಕೆ ಅರ್ಜಿ ಹಾಕಲು ಭಾರತದ ಪ್ರಜೆ ಯಾಗಿರಬೇಕು.
  • ಕನಿಷ್ಠ ಪಕ್ಷ ಎಸ್ ಎಸ್ ಎಲ್ ಸಿ ಶಿಕ್ಷಣ ಕಡ್ಡಾಯ ವಾಗಿರುತ್ತದೆ‌
  • ಆರ್ಥಿಕವಾಗಿ ದೃಢವಾಗಿರವೇಕು.
  • ಕನಿಷ್ಠ 50,000ವಾದರೂ ಹಣ ಖಾತೆಯಲ್ಲಿ ಇರಬೇಕು.
  • ಪೊಲೀಸ್ ಕೆಸ್ ದಾಖಲು ಆಗಿದ್ರೆ ಅಂತವರಿಗೆ ಈ ಅವಕಾಶ ಇಲ್ಲ.
  • ಎರಡನೇ ಬಾರಿಗೆ ರೇಷನ್ ಡೀಲರ್ ಸಿಗುವುದಿಲ್ಲ.
  • 21-35 ವರ್ಷದವರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
  • ಕಂಪ್ಯೂಟರ್ ಶಿಕ್ಷಣ ಪಡೆದಿರಬೇಕು.
  • ಆಯ್ದು ‌ಕೊಳ್ಳುವ ಜಾಗದ ಬಗ್ಗೆ ‌ಮಾಹಿತಿ ನೀಡಬೇಕು.

ಹೀಗೆ ಅರ್ಜಿ ಸಲ್ಲಿಸಿ:

advertisement

ಆಸಕ್ತರು ಈ ಬಗ್ಗೆ ಸಂಬಂಧ ಪಟ್ಟ ಅರ್ಜಿ ನಮೂನೆ ಎ ಹಾಗೂ ‌ ದೃಢೀಕೃತ ದಾಖಲೆಗಳನ್ನು ಪಡೆದು ನಿಮ್ಮ ಹತ್ತಿರದ ಆಹಾರ ಇಲಾಖೆ ಕಚೇರಿಗೆ ತೆರಳಿ ಮಾಹಿತಿ ಪಡೆದು ನಾಗರಿಕ ಸರಬರಾಜು ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳ ಜಂಟಿ ನಿರ್ದೇಶಕರ ಕಚೇರಿಗೆ ಹೋಗಿ ಅರ್ಜಿ ಹಾಕಬಹುದಾಗಿದೆ.

ಈ ದಾಖಲೆ ಬೇಕು:

  • ವ್ಯಾಪಾರ ಮಳಿಗೆಯ ಖಾತೆ
  • ಬಾಡಿಗೆ ಕರಾರು ಪತ್ರ
  • ಬ್ಯಾಂಕ್ ಪಾಸ್ ಪುಸ್ತಕ
  • ಪೋಟೋ
  • ಆಧಾರ್ ಕಾರ್ಡ್
  • ಕ್ರಿಮಿನಲ್ ಪ್ರಕರಣಗಳು ಹೊಂದಿಲ್ಲದಿರುವ ಬಗ್ಗೆ ವೆರಿಪಿಕೇಷನ್ ರಿಪೋರ್ಟ್
  • ಆದಾಯ ಪತ್ರ ಇತ್ಯಾದಿ.

ಮೊದಲ ಆದ್ಯತೆ:

 

Image Source: ET Government

 

ಪ್ರಾಥಮಿಕ ಕೃಷಿ ಸಹಕಾರಿ ಸಂಘ, ತೋಟಗಾರಿಕಾ ಸಂಘ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಸಂಘ ಸಂಸ್ಥೆಗಳು, ಕಂಪನಿಗಳು ಮಹಿಳಾ ಸ್ವ ಸಂಘ ಇತ್ಯಾದಿ ಫಲಾನುಭವಿಗಳಿಗೆ ಮೊದಲ ಆದ್ಯತೆ ಇರಲಿದೆ. ನ್ಯಾಯಬೆಲೆ ಅಂಗಡಿ (Ration Shop) ಯಲ್ಲಿ ಕೆಲಸ ಮಾಡುವವರಿಗೆ ಪ್ರತಿ ಕೆಜಿ ದವಸ ಧಾನ್ಯ ಮಾರಾಟಕ್ಕೆ ಇಂತಿಷ್ಟು ಎಂದು ಕಮಿಷನ್ ಕೂಡ ನೀಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನ್ಯಾಯಬೆಲೆ ಅಂಗಡಿ ಆರಂಭ ಮಾಡುವ ಮೊದಲು ಆಹಾರ ಇಲಾಖೆಯ ವೆಬ್ಸೈಟ್ ಇಲ್ಲಿ https://ahara.kar.nic.in ಮೊದಲು ಮಾಹಿತಿ ತಿಳಿಯಿರಿ

advertisement

Leave A Reply

Your email address will not be published.