Karnataka Times
Trending Stories, Viral News, Gossips & Everything in Kannada

CCTV Camera: ಇಲ್ಲಿ ಸುಗುತ್ತಿದೆ ಉಚಿತ CCTV ಕ್ಯಾಮೆರಾ ಇನ್ಸ್ಟಾಲೇಶನ್ ಹಾಗೂ ಸರ್ವಿಸ್ ಮಾಡಲು ತರಬೇತಿ! ಕೈತುಂಬಾ ಹಣ ಮಾಡಬಹುದು

advertisement

ಇಂದು ಉದ್ಯೋಗ ಅನ್ನೋದು ಪ್ರತಿಯೊಬ್ಬರಿಗೂ ಬಹಳ ಮುಖ್ಯ ವಾಗಲಿದೆ. ಜೀವನ ನಡೆಸಲು ಸರಿಯಾದ ಉದ್ಯೋಗ ಇದ್ದರೆ ಮಾತ್ರ ಜೀವನ ನೆಮ್ಮದಿ ಮತ್ತು ಸುಖಕರ.ಆದರೆ ಇಂದು ಸರಕಾರಿ,ಖಾಸಗಿ ಯಾವುದೇ ಕ್ಷೇತ್ರದಲ್ಲಿ ಸುಲಭವಾಗಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟವೇ ಕೂಡ ಆಗಿದೆ.ಹಾಗಾಗಿ ಹೆಚ್ಚಿನ ಜನರು ಸ್ವ ಉದ್ಯಮ ಕೃಷಿ, ಸರ್ವಿಸ್ ಅಂಗಡಿ, ಮೆಟಿರಿಯಲ್ ಶಾಪ್ ಇತ್ಯಾದಿ ಇಡುವ ಮೂಲಕ ಸಣ್ಣ ಉದ್ಯಮ‌ ಸ್ಥಾಪನೆ ಮಾಡುತ್ತಿದ್ದಾರೆ. ಇಂದು ಸರಕಾರ ಕೂಡ ಸ್ವ ಉದ್ಯಮ ದತ್ತ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು ನಿರುದ್ಯೋಗಿ ಗಳಿಗೆ‌ ಇದರ ಬಗ್ಗೆ ತರಬೇತಿ ನೀಡಲು ಕೂಡ ಹೊಸ ಹೊಸ ಕಾರ್ಯ ಕ್ರಮಗಳನ್ನು ಜಾರಿಗೆ ತರುತ್ತಲೇ ಬಂದಿದೆ.

ಸ್ವ ಉದ್ಯಮ ಆಸಕ್ತಿ ಹೆಚ್ಚಳ:

ಇಂದು ಹೆಚ್ಚಿನ ಜನರು ಸ್ವ ಉದ್ಯಮ ದತ್ತ ಆಕರ್ಷಣೆ ಆಗಿದ್ದಾರೆ.ಅದರಲ್ಲೂ ಶಿಕ್ಷಣ ‌ಮೂಗಿದ ತಕ್ಷಣ ಸ್ವ ಉದ್ಯಮವೇ ಸಾಕು ಅದೇ ಬೆಸ್ಟ್ ಎನ್ನುತ್ತಾರೆ ಇಂದಿನ ವಿದ್ಯಾರ್ಥಿಗಳು. ಎಲ್ಲರಿಗೂ ಕೂಡ ಇಂದು ಸರ್ಕಾರಿ ಉದ್ಯೋಗ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಸಿಗುವುದಿಲ್ಲ. ಪರೀಕ್ಷೆ ಅಂಕ ಗಿಂತಲೂ ಹೆಚ್ಚಾಗಿ ಅದಕ್ಕೆ ತಕ್ಕನಾದ ಕೌಶಲ್ಯ ಇರಬೇಕು, ಕೆಲಸ ಸಿಕ್ಕರೂ ಈ ಬಗ್ಗೆ ಕೆಲವರಿಗೆ ಆಸಕ್ತಿ ಇರುವುದಿಲ್ಲ.ಇಂದು ಸ್ವಂತ ಉದ್ಯಮ ಮಾಡುವ ಆಸಕ್ತಿ ಹೆಚ್ಚಿದ್ದು ನಿಮಗೆ ಸ್ವಂತ ಉದ್ಯಮ ಮಾಡಬೇಕೆಂಬ ಕನಸು ಇದ್ದರೆ ಅನೇಕ ಕಂಪನಿಗಳು ಇಂದು ತರಬೇತಿ ನೀಡುತ್ತವೆ.

ಉಚಿತ ತರಬೇತಿ:

 

Image Source: All India Safety Services

 

ಇಂದು ಯುವಕರನ್ನು ಸ್ವ ಉದ್ಯಮದಲ್ಲಿ ಪ್ರೊತ್ಸಾಹ ನೀಡಲು ಉಚಿತ ತರಬೇತಿ ಯನ್ನು ನೀಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಕೂಡ ಗ್ರಾಮೀಣ ಸ್ವ-ಉದ್ಯೋಗ ತರಬೇತಿ (Self-employment Training) ಸಂಸ್ಥೆಗಳ ಮೂಲಕ ಕಂಪನಿಯ ಸಹಯೋಗದೊಂದಿಗೆ ಉಚಿತವಾಗಿ ವಸತಿ ಊಟ ಸೌಲಭ್ಯದೊಂದಿಗೆ ತರಬೇತಿ ಪಡೆಯುವ ಅವಕಾಶ ಕೂಡ‌ ಇರಲಿದೆ.

advertisement

ಯಾವೆಲ್ಲ ತರಭೇತಿ ಇರಲಿದೆ?

 

Image Source: www.pinnaxis.com

 

ಕೃಷಿ, ಕಂಪ್ಯೂಟರ್, ಡ್ರೈವಿಂಗ್, ಟೈಲರಿಂಗ್, ಫೋಟೋಗ್ರಾಫಿ, ಬ್ಯೂಟಿ ಪಾರ್ಲರ್, CCTV Camera ಅಳವಡಿಕೆ ಮತ್ತು ಇದನ್ನು ಸರ್ವಿಸ್ ಮಾಡುವ ಬಗ್ಗೆ ತರಬೇತಿ ಇತ್ಯಾದಿ ತರಬೇತಿಗಳನ್ನು ನೀಡಲಾಗುತ್ತದೆ. ಇದೀಗ CCTV ಅಳವಡಿಕೆ ಮತ್ತು ಇದನ್ನು ಸರ್ವಿಸ್ ಮಾಡುವ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದ್ದು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಿ:

ಕೆನರಾ ಬ್ಯಾಂಕ್ (Canara Bank) ಸಹಯೋಗದೊಂದಿಗೆ ದಕ್ಷಿಣ ಕನ್ನಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಈ ತರಬೇತಿಯನ್ನು ಆಯೋಜನೆ ಮಾಡಿದ್ದು https://docs.google.com/forms/d/e/1FAIpQLSdTkb3WMVXPCsh7af0lLVlorgmmwZH_h1w8_OfD13hXPrH0cw/viewform ಇಲ್ಲಿ ನೊಂದಣಿ ‌ಮಾಡಿ. ಕನಿಷ್ಠ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದರೆ ಈ ತರಬೇತಿ ಪಡೆಯಲು ಅರ್ಜಿ ಹಾಕಬಹುದು.

ಬೇಕಾಗುವ ದಾಖಲೆಗಳು:

  • Aadhaar card
  • Ration card
  • Bank Pass Book Details
  • Candidate’s photo
  • Mobile number etc.

advertisement

Leave A Reply

Your email address will not be published.