Karnataka Times
Trending Stories, Viral News, Gossips & Everything in Kannada

Property Rules: ಪತಿಯ ಆಸ್ತಿ ಪತ್ನಿಗೆ ಹೋಗುವ ಬಗ್ಗೆ ಕೋರ್ಟ್ ನಿಯಮ ಬದಲು! ಇಲ್ಲಿದೆ ಟ್ವಿಸ್ಟ್

advertisement

ಇಂದು ಪ್ರತಿ ಆಸ್ತಿಗೂ ಕೂಡ ಅದರದ್ದೇ ಆದ ಮೌಲ್ಯ ಇದ್ದೇ ಇರುತ್ತದೆ. ಅನೇಕ ವರ್ಷಗಳ ಹಿಂದೆ ಪಾಳು ಬಿಟ್ಟ ಜಾಗಕ್ಕೂ ಈಗ ರಸ್ತೆ ಸಂಪರ್ಕ ಸಿಕ್ಕಿ ಚಿನ್ನದ ಬೆಲೆ (Gold Price) ಬರುತ್ತಿದೆ.ಹೀಗಾಗಿ ಆಸ್ತಿ (Property) ಪಾಸ್ತಿ ಇದ್ದರೆ ಯಾರೂ ಕೂಡ ಸುಲಭಕ್ಕೆ ಬಿಟ್ಟು ಕೊಡಲಾರರು ಎಂದು ಹೇಳಬಹುದು. ಪತಿಯ ಆಸ್ತಿ ಇದ್ದು ಪತ್ನಿ ಅದಕ್ಕೆ ಪಾಲುದಾರಿಕೆ ಪಡೆಯಬಹುದೇ ಎಂಬುದರ ಬಗ್ಗೆ ಅನೇಕ ಜನರಿಗೆ ಗೊಂದಲ ಇದ್ದೇ ಇರುತ್ತದೆ. ಈ ಬಗ್ಗೆ ಕಾನೂನಿನ ನಿಯಮ ಏನು ಹೇಳುತ್ತೇ ಎಂಬುದನ್ನು ನಾವು ಇಂದು ನಿಮಗೆ ತಿಳಿಸಲಿದ್ದೇವೆ.

ಜೀವಿತಾವಧಿಯಲ್ಲಿ ಆಸ್ತಿ ಇರಬೇಕು, ಮನೆ ಕಟ್ಟಬೇಕು ಭವಿಷ್ಯದಲ್ಲಿ ಭದ್ರತೆ ಹೊಂದಬೇಕು ಎಂಬ ಉದ್ದೇಶಕ್ಕಾಗಿಯೇ ಹೆಚ್ಚಿವರು ಆಸ್ತಿ ಮಾಡುತ್ತಾರೆ ಆದರೆ ಅನೇಕರಿಗೆ ಈ ಆಸ್ತಿಗೆ ಸಂಬಂಧ ಪಟ್ಟ ನಿಯಮಾವಳಿ ಯಾವತರನಾಗಿ ಇರುತ್ತದೆ ಎಂಬುದೇ ತಿಳಿದಿರಲಾರದು. ಪತಿಯು ಆಸ್ತಿ ಹೊಂದಿದ್ದರೆ ಪತ್ನಿ ಪಾಲುದಾರಳಾಗುತ್ತಾಳಾ ಎಂಬುದು ಇದೆ. ಪತ್ನಿಗೆ ಯಾವ ಸಂದರ್ಭದಲ್ಲಿ ಪತಿಯ ಆಸ್ತಿ (Husband Property) ಯಲ್ಲಿ ಹಕ್ಕು ಸಿಗಲಿದೆ ಎಂಬುದನ್ನು ನೀವು ಈ ಲೇಖನದ ಮೂಲಕ ತಿಳಿಯಿರಿ.

ಮೊದಲೇ ಆಸ್ತಿ ಹಕ್ಕು ಸಿಗುತ್ತಾ?

 

Image Source: PropTiger

 

ಮಹಿಳೆಗೆ ಮದುವೆಯಾದ ಕೂಡಲೇ ಪತಿಯ ಆಸ್ತಿ (Property) ಯಲ್ಲಿ ಹಕ್ಕು ಸಿಗಲಾರದು ಒಂದು ವೇಳೆ ಪತಿ ಮರಣ ಹೊಂದಿದ್ದರೆ ಆ ಆಸ್ತಿ ಯಾವುದು ಎಂಬ ಆಧಾರದ ಮೇಲೆ ಹಕ್ಕು ಸಿಗಲಿದೆ. ಪಿತ್ರಾರ್ಜಿತ ಅಥವಾ ಸ್ವಂತ ಆಸ್ತಿ ಮಾಡಿದ್ದಾರೆಯೇ, ಅದಕ್ಕೆ ವಿಲ್ ಏನಾದರೂ ಮಾಡಿದ್ದಾರೆಯೇ ಎಂಬ ಅನೇಕ ವಿಧದ ಚಿಂತನೆ ನಡೆಯಲಿದೆ. ಇದೀಗ ದೆಹಲಿಯ ಹೈಕೋರ್ಟ್ (High Court) ನಲ್ಲಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಸದ್ಯ ಈ ವಿಚಾರ ದೊಡ್ಡ ಮಟ್ಟಿಗೆ ಚರ್ಚೆ ಆಗುತ್ತಿದೆ ಎನ್ನಬಹುದು.

advertisement

ಯಾವುದು ಈ ಪ್ರಕರಣ:

ದೆಹಲಿಯಲ್ಲಿ 1989ರಲ್ಲಿ ಒಬ್ಬರ ತಂದೆ ತೀರಿ ಹೋಗಿದ್ದು ಅವರ ಆಸ್ತಿಗಾಗಿ ಒಡಹುಟ್ಟಿದ್ದವರು ತಕರಾರು ಎತ್ತಿದ್ದಾಗಿದೆ. ಇದರಲ್ಲಿ ತನ್ನ ಅಮ್ಮನಿಗೆ ವಿಲ್ ಮುಖೇನ ಪಾಲು ಸಿಗುವುದಾಗಿ ಕೂಡ ತಂದೆ ತಿಳಿಸಿದ್ದನ್ನು ಕೋರ್ಟಿಗೆ ದಾವೆ ಹೂಡಲಾಗಿದೆ. ಹಾಗಾಗಿ ಈ ಪ್ರಕರಣಕ್ಕೆ ಮೃತ ವ್ಯಕ್ತಿಯ ಒಡಹುಟ್ಟಿದ್ದವರು ಆಸ್ತಿ (Property) ಪಾಲು ಪ್ರಶ್ನಿಸಿ ಆತನ ಪತ್ನಿ ಮತ್ತು ಮಕ್ಕಳ ವಿರುದ್ಧ ಕೋರ್ಟಿಗೆ ಪ್ರಶ್ನಿಸಿ ದಾವೆ ಹೂಡಿದ್ದು ಸದ್ಯ ಈ ಬಗ್ಗೆ ದೆಹಲಿ ಹೈಕೋರ್ಟ್ ತೀರ್ಪನ್ನು ನೀಡಿದೆ.

ದೆಹಲಿಯ ಹೈಕೋರ್ಟ್ ತೀರ್ಪು:

 

Image Source: tennews.in

 

ದೆಹಲಿಯ ಹೈಕೋರ್ಟ್ (High Court) ನಲ್ಲಿ ಆಸ್ತಿಯ ಹಕ್ಕಿನ ಬಗ್ಗೆ ವಿಶೇಷ ಆದೇಶ ಒಂದನ್ನು ಹೊರಡಿಸಲಾಗಿದೆ. ದೆಹಲಿಯಲ್ಲಿ ಪತಿಯ ಆಸ್ತಿ (Husband Property) ಗೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಈ ಒಂದು ಪ್ರಕರಣವನ್ನು ವಿಚಾರಣೆ ನಡೆಸಿ ಆದಾಯ ಇಲ್ಲದ ಮಹಿಳೆ ಮೃತ ಪತಿಯ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕು ಇರುವುದಾಗಿ ಹೈಕೋರ್ಟ್ ಆದೇಶ ನೀಡಿದೆ. ಪತಿ ಮರಣ ಹೊಂದಿದ್ದ ಪಕ್ಷದಲ್ಲಿ ಆತನ ಆನುವಂಶಿಕ ಎಲ್ಲ ಹಕ್ಕು ಪತ್ನಿಗೆ ಸೇರಲಿದೆ. ಆ ಆಸ್ತಿಯಿಂದ ಆದಾಯ ಬರುವಂತಿದ್ದರೆ ಅದನ್ನು ಕೂಡ ಆಕೆಗೆ ಪಾಲುದಾರಿಕೆ ಪಡೆಯುವ ಹಕ್ಕು ಇರಲಿದೆ ಎಂದು ತಿಳಿಸಿದೆ.

advertisement

Leave A Reply

Your email address will not be published.