Karnataka Times
Trending Stories, Viral News, Gossips & Everything in Kannada

Profitable Crop: ಅಳಿವಿನಂಚಿನಲ್ಲಿರುವ ಈ ಸಸಿಯ ಕೃಷಿ ನೀವು ಮಾಡಿದರೆ ಎಕರೆಗೆ 10-12 ಲಕ್ಷ ರೂಪಾಯಿ ಲಾಭ ಗ್ಯಾರೆಂಟಿ

advertisement

ಕೃಷಿಯಲ್ಲಿ ಅಪರೂಪ ಎನ್ನುವುದನ್ನು ನಾವು ಬೆಳೆಸಿದರೆ ಅದಕ್ಕೆ ಯಾವುದಾದರೂ ಒಂದು ಕಾಲಕ್ಕೆ ಸೂಕ್ತ ಬೆಲೆ ಇದ್ದೇ ಇರಲಿದೆ. ಅದೇ ರೀತಿ ಕೆಲವೊಂದು ಕೃಷಿ ನಮಗೆ ಅಧಿಕ ಲಾಭ ಸಿಗಲಿದೆ. ಅಂತವುಗಳಲ್ಲಿ ಗಿಡಮೂಲಿಕಾ ಔಷಧಿ ಸಸ್ಯದಲ್ಲಿ ಪ್ರಖ್ಯಾತಿ ಪಡೆದಿರುವ ಮಾಕಳಿ ಬೇರು ಬಹಳ ಶ್ರೇಷ್ಠ ವಾಗಿದೆ. ಆಯುರ್ವೇದದಲ್ಲಿನ ಸಸ್ಯವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ‌ ಮಾಡಲಾಗುವ ಕುರಿತು ನಾವಿಂದು ನಿಮಗೆ ತಿಳಿಸಲಿದ್ದೇವೆ. ಮಾಕಳಿ ಬೇರಿನ ಕೃಷಿ ಹೇಗೆ ಮಾಡುವುದು ಇದರಲ್ಲಿ ಸಿಗುವ ಲಾಭ ಎಷ್ಟು ಎಂಬೆಲ್ಲ ವಿವರಣೆ ಇಲ್ಲಿದೆ.

ಅರಣ್ಯ ಬದಿಯ ಸಸ್ಯ:

 

Image Source: IndiaMart

 

ಮಾಕಳಿ ಬೇರಿನ (Decalepis Hamiltonii Root) ಸಸ್ಯವು ಅರಣ್ಯದಂಚಿನಲ್ಲಿ ಬೆಳೆಯುವ ಸಸ್ಯವಾಗಿದೆ. ಈ ಸಸ್ಯಕ್ಕೆ ಇಂದು ಔಷಧೀಯ ಗಿಡಮೂಲಿಕೆ ವಿಧಾನದಲ್ಲಿ ಅತೀ ಹೆಚ್ಚು ಬಳಕೆ ಮಾಡುತ್ತಾರೆ. ಬೇಡಿಕೆ ಅಧಿಕವಿದ್ದರೂ ಪೂರೈಕೆ ಕಡಿಮೆ ಇರುವಕಾರಣ ಈ ಔಷಧೀಯ ಸಸ್ಯಕ್ಕೆ ಇಂದು ರಾಜ್ಯಮಟ್ಟದಲ್ಲಿ ತುಂಬಾ ಬೆಲೆ ಇದೆ. ಇದು ಅರಣ್ಯದ ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯವಾಗಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟದಲ್ಲಿ ಅತೀ ಹೆಚ್ಚು ಬೆಳೆಯುವ ಸಸ್ಯ ಇದಾಗಿದ್ದು ವಯಸ್ಸು ಹೆಚ್ಚಾದಂತೆ ಅದರ ಬೇಡಿಕೆ ಕೂಡ ಅಧಿಕ ಇರಲಿದೆ.

ಯಾಕಾಗಿ ಬಳಸುತ್ತಾರೆ?

ಈ ಒಂದು ಬೇರನ್ನು ಹೆಚ್ಚಾಗಿ ಆಯುರ್ವೇದ ಔಷಧವಾಗಿ ಬಳಕೆ ಮಾಡುತ್ತಾರೆ. ಪಿತ್ತ, ಅಸಿಡಿಟಿ ಸಮಸ್ಯೆಗಳಿಗೆ ಈ ಬೇರಿನ ಶರಬತ್ತು ರಾಮಾಬಾಣದಂತೆ ಕೆಲಸಮಾಡಲಿದೆ. ಮಾಕಳಿ ಬೇರಿನಿಂದ ಉಪ್ಪಿನ ಕಾಯಿ ಕೂಡ ಮಾಡಿ ಎರಡು ಮೂರು ವರ್ಷ ಕೆಡದಂತೆ ಮಾರಾಟ ಮಾಡಲಾಗುತ್ತದೆ. ಅದೇ ರೀತಿ ಮಾಕಳಿ ಬೇರಿನಿಂದ ಜೀರ್ಣಕ್ರಿಯೆ ಪುಡಿ ಕೂಡ ತಯಾರು ಮಾಡುತ್ತಾರೆ. ಬ್ರಾಕ್ಟಿರಿಯಾ ನಾಶಕವಾಗಿ ಕೆಲಸಮಾಡಲಿದೆ.

advertisement

ಇಳುವರಿ ಹೇಗಿದೆ?

 

Image Source: Exporters India

 

ಒಂದು ಮಾಕಳಿ ಬೇರಿನಿಂದ 1-5kg ಮಾಕಳಿ ಒಣಬೇರು ಇಳುವರಿ ಸಿಗಲಿದೆ. ಇದನ್ನು ನೈಸರ್ಗಿಕ ವಿಧಾನದಲ್ಲಿ ಬಳ್ಳಿ ಅಥವಾ ಪೊದೆ ರೀತಿಯಲ್ಲಿ ಬೆಳೆಯಬಹುದು‌. ಆದರೆ ಇದನ್ನು ಸಸಿ ಹಾಕಿದ್ದ ಕೂಡಲೇ ಇಳುವರಿ ತೆಗೆಯಲು ಸಾಧ್ಯವಿಲ್ಲ. ಬದಲಾಗಿ 2.5- 3 ವರ್ಷ ಬಿಟ್ಟು ಇಳುವರಿಯನ್ನು ನಾವು ಪಡೆಯಬಹುದು. ಆರಂಭಿಕ ಹಂತದಲ್ಲಿ ಅರ್ಧ ಕೆಜಿ ಯಿಂದ 1 kg ಇಳುವರಿ ಪಡೆಯಬಹುದು. 1kg ಮಾಕಳಿ ಬೇರಿಗೆ 500-550 ಬೆಲೆ ಇರಲಿದೆ. ಹಾಗೇ ಗುಷಮಟ್ಟದ ಆಧಾರದ ಮೇಲೆ ಬೆಲೆ ಬದಲಾಗಲಿದ್ದು ಒಂದು ಎಕರೆ ಬೆಳೆ ತೆಗೆಯಲು 2.50 ಲಕ್ಷ ರೂಪಾಯಿ ಖರ್ಚಾಗಲಿದೆ. ಇದಕ್ಕೆ 9-12 ಲಕ್ಷದ ವರೆಗೆ ಲಾಭ ಸಿಗಲಿದೆ. ಖರ್ಚು ಕಳೆದರೆ 8-10 ಲಕ್ಷ ಲಾಭ ಗ್ಯಾರೆಂಟಿ.

ಹೇಗೆ ಕೃಷಿ ಮಾಡಬೇಕು?

ಇದಕ್ಕೆ ರಾಸಾಯನಿಕ ಕೆಮಿಕಲ್ ಬಳಸುವುದು ಅಷ್ಟು ಸೂಕ್ತವಲ್ಲ ಎನ್ನಬಹುದು. ನೀರಿನ ಪ್ರಮಾಣ ಕಡಿಮೆ‌ ಇದ್ದರೂ ಈ ಕೃಷಿ ಮಾಡಬಹುದು.

 

advertisement

Leave A Reply

Your email address will not be published.