Karnataka Times
Trending Stories, Viral News, Gossips & Everything in Kannada

Cash Transaction: ಹೆಚ್ಚು ಹೆಚ್ಚು ಕ್ಯಾಶ್ ವ್ಯವಹಾರ ಮಾಡುವವರಿಗೆ ಹೊಸ ರೂಲ್ಸ್ ! ಆದಾಯ ಇಲಾಖೆ ಸೂಚನೆ

advertisement

ಇಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ ಭಾರತ ದೇಶದಲ್ಲಿ ಒಂದು ದೊಡ್ಡ ವರ್ಗ ಆನ್ಲೈನ್ ಪೇಮೆಂಟ್ ಅನ್ನು ಕ್ಯಾಶ್ ಟ್ರಾನ್ಸಾಕ್ಷನ್ ಗಿಂತ ಹೆಚ್ಚಾಗಿ ಬಳಸುವುದಕ್ಕೆ ಪ್ರಾರಂಭ ಮಾಡಿದ್ದಾರೆ. ಈಗಾಗಲೇ ಇದು ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ಹರಡುತ್ತಿದೆ. ಆದರೆ ಕೆಲವೊಂದು ವರ್ಗದ ಜನರು ಈಗಲೂ ಕೂಡ ದೊಡ್ಡ ಮಟ್ಟದಲ್ಲಿ ಕ್ಯಾಶ್ ಟ್ರಾನ್ಸಾಕ್ಷನ್ (Cash Transaction) ಅನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಕೆಲವೊಂದು ಲಿಮಿಟ್ ಗಳವರೆಗೆ ಮಾತ್ರ ಟ್ರಾನ್ಸಾಕ್ಷನ್ ಮಾಡಬಹುದಾಗಿದೆ ಅದನ್ನು ಮೀರಿದರೆ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಈ 5 ಕ್ಯಾಶ್ ಟ್ರಾನ್ಸಾಕ್ಷನ್ ಗಳು ಮಿತಿಮೀರಿ ಇದ್ರೆ ಇನ್ಕಮ್ ಟ್ಯಾಕ್ಸ್ (Income Tax) ನಿಂದ ನೋಟಿಸ್ ಬರಬಹುದಾಗಿದ್ದು ಅವುಗಳು ಯಾವುವು ಅನ್ನೋದನ್ನ ತಿಳಿಯೋಣ ಬನ್ನಿ.

advertisement

Image Source: The Print
  •  CBDT ನಿಯಮಗಳ ಪ್ರಕಾರ ಒಂದು ವೇಳೆ ಯಾವುದೇ ವ್ಯಕ್ತಿ ತನ್ನ ಸೇವಿಂಗ್ ಖಾತೆಗೆ ಒಂದು ಆರ್ಥಿಕ ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಠೇವಣಿ ಇಡುತ್ತಾನೆ ಅಂದ್ರೆ ಆ ಸಂದರ್ಭದಲ್ಲಿ ಇನ್ಕಮ್ ಟ್ಯಾಕ್ಸ್ ನಿಂದ ನೋಟಿಸ್ ಬರಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಒಂದು ವೇಳೆ ಈ ವಿಚಾರದ ಬಗ್ಗೆ ನೀವು ಆದಾಯ ಇಲಾಖೆಗೆ ಮಾಹಿತಿ ನೀಡಿದೆ ಹೋದರು ಕೂಡ ಬ್ಯಾಂಕಿನವರು ಈ ಮಾಹಿತಿಯನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಇನ್ಕಮ್ ಟ್ಯಾಕ್ಸ್ ಇಲಾಖೆ ಇಷ್ಟೊಂದು ಹಣವನ್ನ ನಿಮ್ಮ ಖಾತೆಯಲ್ಲಿ ಇಟ್ಟಿರುವುದರಿಂದ ಸಂಪನ್ಮೂಲ ಯಾವುದು ಎಂಬುದಾಗಿ ಕೇಳುತ್ತಾರೆ. ಅಂದರೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂಬುದಾಗಿ ಕೇಳುತ್ತಾರೆ ಅದಕ್ಕೆ ಸರಿಯಾದ ಡಾಕ್ಯುಮೆಂಟ್ಸ್ ಗಳನ್ನು ನೀಡಿದರೆ ನೀವು ಬಚಾವ್ ಆಗ್ತೀರಾ.
  •  ಇದು ಕೇವಲ ಸಾಮಾನ್ಯ ಸೇವಿಂಗ್ ಖಾತೆಯಲ್ಲಿ ಹೂಡಿಕೆ ಮಾಡುವ ವಿಚಾರಕ್ಕೆ ಮಾತ್ರವಲ್ಲದೆ ದೀರ್ಘಕಾಲಿಕ ಹೂಡಿಕೆಯ ಯೋಜನೆ ಆಗಿರುವಂತಹ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಕೂಡ ಒಂದು ಆರ್ಥಿಕ ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದರೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನವರು ಈ ಹಣದ ಎಲ್ಲಿಂದ ಬಂತು ಎನ್ನುವುದಾಗಿ ನೋಟಿಸ್ ಕಳಿಸುತ್ತಾರೆ.
  •  ಸಾಕಷ್ಟು ಜನರು ಕೇವಲ ಹಣವನ್ನು ಖಾತೆಯಲ್ಲಿ ಹೂಡಿಕೆ ಮಾಡುವುದು ಮಾತ್ರವಲ್ಲದೆ ಅವುಗಳನ್ನು ಇನ್ನಷ್ಟು ಹೆಚ್ಚಿನ ಮೊತ್ತಕ್ಕೆ ರೂಪಾಂತರ ಮಾಡಬೇಕು ಎನ್ನುವ ಕಾರಣಕ್ಕಾಗಿ ಮ್ಯೂಚುವಲ್ ಫಂಡ್ ಶೇರ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತಹ ಕೆಲಸವನ್ನು ಕೂಡ ಮಾಡುತ್ತಾರೆ. ಒಂದು ವೇಳೆ ಈ ವಿಚಾರ ಇನ್ಕಮ್ ಟ್ಯಾಕ್ಸ್ ನವರಿಗೆ ತಿಳಿದು ಬಂದರೆ ಮ್ಯೂಚುವಲ್ ಫಂಡ್ ಹಾಗೂ ಶೇರ್ ಮಾರುಕಟ್ಟೆಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣದ ಲೇವಾದೇವಿಯನ್ನು ಮಾಡಿರುವುದರ ಬಗ್ಗೆ ತನಿಖೆಯನ್ನು ನಡೆಸುತ್ತಾರೆ. ನಿಮ್ಮ ಹಣದ ಮೂಲ ಸರಿಯಾಗಿದ್ದರೆ ಯಾವುದೇ ರೀತಿಯ ತಲೆಬಿಸಿ ಇರುವುದಿಲ್ಲ.
  •  ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಯಾವುದೇ ರೀತಿಯ ವಸ್ತುಗಳನ್ನು ಖರೀದಿ ಮಾಡಬೇಕಾದರೂ ಕೂಡ ತಮ್ಮ ಕ್ರೆಡಿಟ್ ಕಾರ್ಡ್ ಗಳನ್ನು ಬಳಸುತ್ತಾರೆ. ಇನ್ನು ಕ್ರೆಡಿಟ್ ಕಾರ್ಡ್ ಬಳಕೆಯ ಸಂದರ್ಭದಲ್ಲಿ ತಿಂಗಳಿಗೆ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಖರ್ಚು ಆದರೆ ಆ ಸಂದರ್ಭದಲ್ಲಿ ನೀವು ಕ್ಯಾಶ್ ಅನ್ನು ಬಳಸಿದರೆ ಅದರ ಮೂಲವನ್ನು ಕೂಡ ಇನ್ಕಮ್ ಟ್ಯಾಕ್ಸ್ ನವರು ಕೇಳುತ್ತಾರೆ. ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಯಾವುದೇ ವಿಧಾನದಲ್ಲಿ ನೀವು ಒಂದು ಆರ್ಥಿಕ ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಖರ್ಚನ್ನು ಮಾಡುತ್ತಿದ್ದೀರಿ ಎಂದಾದರೆ ಆ ಹಣದ ಮೂಲವನ್ನು ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಖಂಡಿತವಾಗಿ ಕೇಳುತ್ತದೆ.
  •  ಒಂದು ವೇಳೆ ನೀವು ಯಾವುದೇ ರೀತಿಯ ರಿಯಲ್ ಎಸ್ಟೇಟ್ ಅಂದರೆ ಹೊಸ ಪ್ರಾಪರ್ಟಿಯನ್ನು ಖರೀದಿ ಮಾಡುವ ವಿಚಾರದಲ್ಲಿ ಒಂದು ಆರ್ಥಿಕ ವರ್ಷದಲ್ಲಿ 30 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದ್ದೀರಿ ಎಂದಾದರೆ ಆ ಹಣದ ಪ್ರತಿಯೊಂದು ಡಾಕ್ಯುಮೆಂಟ್ಗಳು ಹಾಗೂ ಮೂಲದ ಮಾಹಿತಿಗಳನ್ನು ಸರಿಯಾಗಿ ರೆಡಿ ಮಾಡಿ ಇಟ್ಟುಕೊಳ್ಳಿ ಯಾಕೆಂದರೆ ಇದರ ಬಗ್ಗೆ ಕೂಡ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನವರು ನಿಮ್ಮ ಬಳಿ ಪ್ರಶ್ನೆ ಕೇಳಬಹುದು.

advertisement

Leave A Reply

Your email address will not be published.