Karnataka Times
Trending Stories, Viral News, Gossips & Everything in Kannada

High Court: ಹಂಗಾಮಿ, ದೈನಿಕ ವೇತನ ಪಡೆಯುತ್ತಿರುವ ನೌಕರರಿಗೆ ಬೆಳ್ಳಂಬೆಳಗ್ಗೆ ಗುಡ್ ನ್ಯೂಸ್

advertisement

ಅನೇಕ ವರ್ಷಗಳಿಂದ ಒಂದೇ ಸಂಸ್ಥೆ ಅಥವಾ ಕಚೇರಿಗೆ ಕೆಲಸ ಮಾಡಿದ್ದರೂ ಈಗಂತೂ ಖಾಯಂ ಕೆಲಸ ಎಂಬ ವಿಧಾನ ಇಲ್ಲವೇ ಇಲ್ಲ ಎಂದು ಹೇಳಬಹುದು. ಆದರೆ ಇನ್ನು ಮುಂದೆ ಕೆಲಸ ಮಾಡುವ ವರ್ಗಕ್ಕೆ ನ್ಯಾಯ ಸಮ್ಮತವಾದ ತೀರ್ಮಾನ ಒಂದು ಜಾರಿಗೆ ಬರಲಿದೆ. ಈ ಮೂಲಕ ದೈನಂದಿನ ವೇತನದಾರರು ಮತ್ತು ಹಂಗಾಮಿ ಕೆಲಸಗಾರರಿಗೆ ಭರ್ಜರಿ ಸಿಹಿ ಸುದ್ದಿಯೊಂದು ಸಿಗಲಿದೆ. ಯಾವುದು ಆ ಸಿಹಿ ಸುದ್ದಿ , ಯಾರಿಗೆ ಹೆಚ್ಚು ಪ್ರಯೋಜನ ಸಿಗಲಿದೆ ಎಂಬ ಇತ್ಯಾದಿ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ಯಾವುದು ಈ ನ್ಯೂಸ್:

ಹೈ ಕೋರ್ಟ್ (High Court) ನ ತೀರ್ಪಿನ ಪ್ರಕಾರ 10 ವರ್ಷ ಪೂರೈಸಿದ್ದ ದಿನಗೂಲಿ ಹಾಗೂ ಹಂಗಾಮಿ ನೌಕರರ (Temporary and Daily Wage Employees) ಅಧಿಕಾರವನ್ನು ಖಾಯಂ ಗೊಳಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಎಲ್ಲ ಇಲಾಖೆ ಅಧೀನದಲ್ಲಿ ಕೆಲಸ ಮಾಡುವ ತಾತ್ಕಾಲಿಕ ನೌಕರರು ಹಾಗೂ ದೈನಂದಿನ ವೇತನ ಪಡೆಯುವವರಿಗೆ ಈ ಪ್ರಯೋಜನ ಸಿಗಲಿದೆ. ಅಷ್ಟು ಮಾತ್ರವಲ್ಲದೇ ಖಾಯಂ ನೌಕರರಿಗೆ ಸಿಗುವ ಅಷ್ಟು ಸೇವಾ ಸೌಲಭ್ಯ ಸಿಗಲಿದೆ.

 

 

ಯಾವೆಲ್ಲ ಕೆಲಸಗಾರರು ಇರುತ್ತಾರೆ?

advertisement

ಈ ಬಗ್ಗೆ Supreme Court ಮುಖೇನವೇ ಆದೇಶ ಬಂದಿದ್ದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ತಿಳಿಸಲಾಗಿದೆ. ಹೀಗಾಗಿ PW, PHE, ಜಲ ಸಂಪನ್ಮೂಲ, ಅರಣ್ಯ , ತೋಟಗಾರಿಕೆ , ಬುಡಕಟ್ಟು, ಇತ್ಯಾದಿ ವರ್ಗದಲ್ಲಿ ಕೆಲಸ ಮಾಡುವ ಹಂಗಾಮಿ ಹಾಗೂ ದೈನಿಕ ವೇತನ ಪಡೆಯುವ ನೌಕರರು ಅನೇಕ ವಿಧವಾದ ಪ್ರಯೋಜನ ಪಡೆಯಲಿದ್ದಾರೆ. ಹೀಗಾಗಿ ಕೆಲಸ ಖಾಯಂ ಆಗಿಲ್ಲ ಎಂದು ಅನೇಕ ವರ್ಷದಿಂದ ಕಾಯುತ್ತಾ ಇದ್ದವರಿಗೆ ದೊಡ್ಡ ಮಟ್ಟದ ಪ್ರಯೋಜನವನ್ಜು ನೀಡಲಿದೆ.

ಈ ಹಿಂದೆ ಬಂದಿತ್ತು ಆದೇಶ:

ಖಾಲಿ ಇದ್ದ ಹುದ್ದೆ ಭರ್ತಿ ಮಾಡುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿತ್ತು. ಆದರೆ ಹುದ್ದೆ ಭರ್ತಿ ಆಗಿರಲಿಲ್ಲ. ಈ ಬಗ್ಗೆ ಹೈ ಕೋರ್ಟ್ ಗೆ ಆದೇಶ ಬಂದಿದ್ದರು ಅಧಿಕಾರ ಶಾಹಿ ಧೋರಣೆ ಯಿಂದಾಗಿ ಈ ನಿಯಮ ಜಾರಿ ಆಗಿರಲಿಲ್ಲ. ಆದರೆ ಈಗ ಸುಪ್ರೀಂ ಕೋರ್ಟಿನ ಆದೇಶ ಹೈಕೋರ್ಟ್ (High Court) ಚಾಚು ತಪ್ಪದೆ ಪಾಲಿಸಲಿದೆ ಹೀಗಾಗಿ 120 ದಿನಗಳಲ್ಲಿ ಈ ನಿಯಮ ಜಾರಿಯಾಗಲಿದೆ. ಅದೇ ರೀತಿ ಹೈ ಕೋರ್ಟ್ ನಲ್ಲಿ ಈಗಾಗಲೇ 200 ಕ್ಕೂ ಅಧಿಕ ಅರ್ಜಿ ಪರಿಶೀಲಿಸಲಾಗಿದೆ.

ವೇತನ ಆಯೋಗದ ಶಿಫಾರಸ್ಸು:

ಏಳನೇ ವೇತನ ಆಯೋಗ ನಿಯಮ ಜಾರಿಗೆ ತಂದು ಕೂಡಲೇ ಸರಕಾರಿ ನೌಕರರ ವೇತನ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಮುಂದಿಡಲಾಗಿತ್ತು. ಈ ಮೂಲಕ ವೇತನ ಆಯೋಗದ ಶಿಫಾರಸ್ಸಿನ ಮೇಲೆ ಸರಕಾರಿ ನೌಕರರಿಗೆ ಬೆಂಬಲಿಸಲಾಗಿದೆ. ಶೀಘ್ರವೇ ತುಟ್ಟಿ ಭತ್ಯೆ ಪ್ರಮಾಣ ಏರಿಕೆ ಆಗಿ ಸರಕಾರಿ ಕೆಲಸಗಾರರಿಗೆ ಪ್ರಯೋಜನ ಸಿಗುತ್ತದೆ ಎಂದು ಹೇಳಲಾಗಿದ್ದು ಈ ನಿರ್ಣಯ ಯಾವಾಗ ಜಾರಿಗೆ ಬರುತ್ತದೆ ಎಂದು ಕಾದು ನೋಡಬೇಕು.

advertisement

Leave A Reply

Your email address will not be published.