Karnataka Times
Trending Stories, Viral News, Gossips & Everything in Kannada

Supreme Court: ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸುಪ್ರೀಂ ಕೋರ್ಟ್ ಹೊಸ ತೀರ್ಪು! ಖಡಕ್ ಆದೇಶ

advertisement

ಜನಸಂಖ್ಯೆ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಇದನ್ನು ತಡೆಗಟ್ಟುವ ಸಲುವಾಗಿ ಸರಕಾರ ಅನೇಕ ಕಾರ್ಯಕ್ರಮ, ಕುಟುಂಬ ಕಲ್ಯಾಣ ಯೋಜನೆ ಪರಿಚಯಿಸಿದರೂ ಜನನ ಪ್ರಮಾಣ ಮಾತ್ರ ವೇಗಗತಿಯಲ್ಲಿ ಏರುತ್ತಲೇ ಇದೆ‌. ಈ ನಿಟ್ಟಿನಲ್ಲಿ ರಾಜಸ್ಥಾನ ಸರಕಾರವು ಎರಡಕ್ಕಿಂತ ಹೆಚ್ಚು ಮಕ್ಕಳು ಜನಿಸಿದ್ದವರಿಗೆ ಸರಕಾರಿ ಉದ್ಯೋಗ ಸಿಗಲಾರದು ಎಂಬ ಬಗ್ಗೆ ಸ್ಪಷ್ಟನೆ ನೀಡಿದೆ. ಇದಕ್ಕೆ ಸುಪ್ರೀಂ ಕೋರ್ಟಿನ ಅನುಮೋದನೆ ಸಹ ದೊರೆತಿದ್ದು ಸದ್ಯ ಈ ಒಂದು ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಕೆ:

ರಾಜಸ್ಥಾನದ ಮಾಜಿ ಸೈನಿಕ ರಾಮಾಜಿ ಲಾಲ್ ಜಾಟ್ ಅವರು 2017ರಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ಬಳಿಕ ನಿವೃತ್ತರಾಗಿದ್ದರು ಹಾಗಾಗಿ 2018ರ ಮೇ ನಲ್ಲಿ ರಾಜಸ್ಥಾನದ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ರಾಜಸ್ಥಾನದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿದ್ದರೆ ಸರಕಾರಿ ಉದ್ಯೋಗ ದೊರೆಯದ ಹಿನ್ನೆಲೆಯಲ್ಲಿ ಅರ್ಜಿಯನ್ನು ರಾಜಸ್ಥಾನ ಪೊಲೀಸ್ ಅಧಿ ನಿಯಮ 1989ರ ಅಡಿಯಲ್ಲಿ ತಿರಸ್ಕಾರ ಮಾಡಲಾಗಿದೆ. ಹಾಗಾಗಿ ರಾಮಾಜಿ ಲಾಲ್ ಜಾಟ್ ಅವರು ರಾಜಸ್ಥಾನದ ಹೈ ಕೋರ್ಟ್ ಗೆ ಈ ನಿಯಮ ಪ್ರಶ್ನಿಸಲಾಗಿದ್ದು ಅಲ್ಲಿ ಅರ್ಜಿ ವಜಾ ಮಾಡಲಾಗಿದ್ದು ಇದು ಕಾನೂನಾತ್ಮಕ ನಿಯಮ ಎಂದು ತಿಳಿಸಲಾಗಿದ್ದು ಬಳಿಕ ರಾಮಾಜಿ ಅವರು ಸುಪ್ರೀಂ ಕೋರ್ಟ್ (Supreme Court) ಮೊರೆ ಹೊಗ್ಗಿದ್ದಾರೆ ಹಾಗಾಗಿ ಸುಪ್ರೀಂ ಕೋರ್ಟ್ ಸಹ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಸುಪ್ರೀಂ ಕೋರ್ಟ್ (Supreme Court) ತಿಳಿಸಿದ್ದೇನು?

 

 

advertisement

ರಾಮಾಜಿ ಅವರು ರಾಜಸ್ಥಾನದ ಹೈ ಕೋರ್ಟ್ ನಲ್ಲೊ ದಾವೆ ಹೂಡಿದ್ದು ಅಲ್ಲಿನ ಪ್ರಮುಖ ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ನಿಲುವು ತಿಳಿಸಿದೆ. 2001ರಲ್ಲಿ ರಾಜಸ್ತಾನದಲ್ಲಿ ವಿವಿಧ ಸೇವಾ ತಿದ್ದುಪಡಿ ನಿಯಮ ರಚಿಸಲಾಗಿದ್ದು ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿದ್ದರೆ ಸರಕಾರಿ ಉದ್ಯೋಗ ಸಿಗಲಾರದು ಎಂಬ ಬಗ್ಗೆ ಕೂಡ ಇದೆ. ಹಾಗಾಗಿ 1989 ನಿಯಮ 24(4) ರ ಪ್ರಕಾರ ಜೂನ್ 1, 2002 ಹಾಗೂ ಅದರ ನಂತರ ವ್ಯಕ್ತಿಗೆ ಎರಡಕ್ಕಿಂತ ಹೆಚ್ಚು ಮಕ್ಕಳು ಜನಿಸಿದರೆ ಅವರಿಗೆ ಸರಕಾರಿ ಉದ್ಯೋಗ ನೇಮಕಾತಿಗೆ ಅರ್ಹರಲ್ಲ ಎಂದು ಇದೆ.

ಅರ್ಜಿ ವಜಾ:

ಇದು ಯಾವುದೇ ತರ ತಾರತಮ್ಯವಲ್ಲ ಹಾಗೂ ಸಂವಿಧಾನ ನಿಯಮ ಉಲ್ಲಂಘನೆ ಸಹ ಆಗಲಾರದು ಎಂದು ಸುಪ್ರೀಂ ಕೋರ್ಟಿನ (Supreme Court) ನ್ಯಾಯ ಮೂರ್ತಿಗಳಾದ ಸೂರ್ಯಕಾಂತ್ , ದೀಪಂಕರ್ ದತ್ತ, ಕೆವಿ ವಿಶ್ಚನಾಥ್ ಅವರ ಪೀಠವು ರಾಜಸ್ಥಾನದ ಹೈ ಕೋರ್ಟ್ ನೀಡಿದ್ದ ತೀರ್ಪು ಸರಿಯಾಗಿ ಇದೆ ಅಲ್ಲಿ ನಿಯಮ ಪಾಲನೆ ಮಾಡಲಾಗಿದೆ ವಿನಃ ಯಾವುದೇ ತಾರತಮ್ಯ ಮಾಡಲಾಗಲಿಲ್ಲ ಇದು ಯಾವುದೇ ತರ ಸಂವಿಧಾನ ನಿಯಮ ಬರಲಿಲ್ಲ. ಅಲ್ಲಿ ಉಲ್ಲಂಘನೆಯೂ ಆಗಿಲ್ಲ ಎಂದು ಹೇಳಿ ಮಾಜಿ ಸೈನಿಕರ ಅರ್ಜಿಯನ್ನು ವಜಾ ಮಾಡಲಾಗಿದೆ.

ಉದ್ದೇಶ ಏನು?

ರಾಜಸ್ಥಾನದಲ್ಲಿ ಈ ನಿಯಮ ಜಾರಿಗೆ ಬಂದ ಮೂಲ ಉದ್ದೇಶವೇ ಕುಟುಂಬ ಯೋಜನೆ ನಿಯಮ ಪಾಲನೆ ಆಗ ಬೇಕೆಂದು 2002 ಜೂನ್ ನಂತರ ರಾಮಾಜಿ ಅವರಿಗೆ ಎರಡಕ್ಕಿಂತ ಹೆಚ್ಚು ಮಗು ಇದೆ ಎಂಬುದು ತಿಳಿದು ಬಂದ ಕಾರಣಕ್ಕೆ ಕಾನ್ ಸ್ಟೇಬಲ್ ಹುದ್ದೆಯಿಂದ ಅರ್ಜಿ ತಿರಸ್ಕಾರ ಆಗಿದೆ‌. ಹಾಗಾಗಿ ಅವರನ್ನು ಸಾರ್ವಜನಿಕ ಸರಕಾರಿ ಉದ್ಯೋಗಕ್ಕೆ ಅನರ್ಹರೆಂದು ತಿಳಿಸಲಾಗಿದೆ ಇದರಲ್ಲಿ ನಿಯಮ ಉಲ್ಲಂಘನೆ ಆಗಿಲ್ಲ ರಾಜಸ್ಥಾನಿ ಹೈ ಕೋರ್ಟ್ ಇದ್ದ ನಿಯಮವನ್ನೇ ಪಾಲಿಸಿದೆ ಎಂದು ಸುಪ್ರೀಂಕೋರ್ಟ್ ಯಾವುದೇ ಸಮ್ಮತಿ ಸುಚಿಸಲಾರದು ಎಂದು ನ್ಯಾಯಪೀಠ ತೀರ್ಮಾನ ತಿಳಿಸಿದೆ.

advertisement

Leave A Reply

Your email address will not be published.