Karnataka Times
Trending Stories, Viral News, Gossips & Everything in Kannada

Property: ಹೀಗೆ ಮಾಡಿದ್ರೆ ಹಲವು ವರ್ಷಗಳ ಹಿಂದೆ ಮಾರಾಟ ಮಾಡಿರುವಂತಹ ಭೂಮಿಯನ್ನು ವಾಪಸ್ ಪಡೆಯಬಹುದು! ಹೊಸ ರೂಲ್ಸ್

advertisement

ಸರ್ಕಾರದಿಂದ SC/ST ವರ್ಗದವರಿಗೆ ಮಂಜೂರಾದಂತಹ ಭೂಮಿಗಳು PTCL ಕಾಯ್ದೆ ಅಡಿ (PTCL act) ಬರುತ್ತದೆ. ಇಂತಹ ಭೂಮಿಯನ್ನು ಗ್ರಾಂಟ್ ಸರ್ಟಿಫಿಕೇಟ್ (Grant Certificate) ನಲ್ಲಿ ಸೂಚಿಸಿರುವಂತಹ ಶರತ್ತುಗಳಿಗೆ ವಿರೋಧವಾಗಿ ಸರ್ಕಾರದ ಯಾವುದೇ ಪೂರ್ವನುಮತಿಯನ್ನು ಪಡೆಯದೆ ಕೆಲ ಕಾರಣಾಂತರಗಳಿಂದ ಬೇರೆಯವರಿಗೆ ಕ್ರಯದ ಮೂಲಕವೋ, ಭೋಗ್ಯದ ಮೂಲಕವೊ ವರ್ಗಾವಣೆ ಮಾಡಿದರೆ ಅದನ್ನು ರದ್ದುಪಡಿಸಿ ಮೂಲ ಮಾಲೀಕರಿಗೆ ವಾಪಸ್ ಕೊಡಿಸಬಹುದಾದಂತಹ ತಿದ್ದುಪಡಿ ಪಿ ಟಿ ಸಿ ಎಲ್ ಕಾಯ್ದೆ2023ಯನ್ನು ಕರ್ನಾಟಕ ಸರ್ಕಾರ ಇತ್ತೀಚಿಗಷ್ಟೇ ಜಾರಿಗೊಳಿಸಿದೆ. ಇದರಿಂದಾಗಿ ನೀವು ಈಗಾಗಲೇ ಇತರರಿಗೆ ಕಾರಣಾಂತರಗಳಿಂದ ಮಾರಾಟ ಮಾಡಿರುವ ಆಸ್ತಿ (Property) ಯನ್ನು ವಾಪಸ್ ಪಡೆಯಬಹುದು.

ಭೂಮಿಯನ್ನು ಮಾರಿ ವರ್ಷಗಳೇ ಕಳೆದಿದ್ದರು ವಾಪಸ್ ಹಿಂಪಡೆಯಬಹುದು:

 

Image Source: Housing

 

ಹೌದು ಗೆಳೆಯರೇ, ಇತ್ತೀಚಿಗಷ್ಟೇ ಜಾರಿಗೊಂಡಿರುವ PTCL ಕಾಯ್ದೆಯ ಪ್ರಕಾರ, SC/ST ವರ್ಗದವರು ಮಾರಾಟ ಮಾಡಿರುವಂತಹ ಆಸ್ತಿ/ ಭೂಮಿಯ ಮೇಲೆ ಕಾಲದ ಪರಿಮಿತಿಯನ್ನು ತೆಗೆದು ಹಾಕಿದ್ದಾರೆ ಅಂದರೆ ನೀವು ಕಾನೂನಿನ ಮಾನ್ಯತೆಯನ್ನು ಪಡೆಯದೆ, ಕಾನೂನಿನ ಶರತ್ತು (Conditions of Law) ಗಳನ್ನು ಉಲ್ಲಂಘನೆ ಮಾಡಿ ಜಮೀನನ್ನು ಮಾರಾಟ ಮಾಡಿ ಎಷ್ಟೇ ವರ್ಷಗಳಾಗಿದ್ದರೂ ಮತ್ತೆ ಅದನ್ನು ಮೂಲ ಮಾಲಿಕರಿಗೆ ವಾಪಸ್ ಕೊಡಿಸುವಂತಹ ತಿದ್ದುಪಡಿಯನ್ನು ಈ ಕಾಯ್ದೆಯ ಅಡಿ ತರಲಾಗಿದೆ.

ಸುಲಭವಾಗಿ ಭೂಮಿ ವರ್ಗಾವಣೆಯನ್ನು ರದ್ದುಪಡಿಸಿ:

 

advertisement

Image Source: LawDepot

 

ST/SC ಅವರಿಗೆಂದು ನಿಗದಿಪಡಿಸಿದಂತಹ ಭೂಮಿಯನ್ನು ಕಾನೂನಿನ ವಿರುದ್ಧ ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಅದಕ್ಕೆ ಸಂಬಂಧಪಟ್ಟಂತಹ ನ್ಯಾಯಾಲಯದಲ್ಲಿ ದಾವೆ (Case)ಯನ್ನು ಹಾಕಿ ವರ್ಗಾವಣೆ ದಾಖಲಾತಿಗಳನ್ನೆಲ್ಲ ಸಲ್ಲಿಸುವ ಮೂಲಕ ಆಸ್ತಿ ವರ್ಗಾವಣೆ (Property Transfer) ಯನ್ನು ರದ್ದುಪಡಿಸಬಹುದು. ಹಾಗೂ ಆ ಭೂಮಿಯನ್ನು ಮೂಲ ಮಂಜೂರಾತಿದಾರರ ಅಥವಾ ಅವರ ವಂಶಸ್ಥರ ಹೆಸರಿಗೆ ಮರಳಿ ಪಡೆಯಬಹುದು.

ಬೇಕಾಗುವ ದಾಖಲೆಗಳು:

  • ಗ್ರಾಂಟ್ ಸರ್ಟಿಫಿಕೇಟ್- ಮೂಲ ಮಂಜೂರಾತಿ ದಾರರಿಗೆ ಭೂಮಿಯನ್ನು ನೀಡುವಂತಹ ಸಂದರ್ಭದಲ್ಲಿ ಸರ್ಕಾರ ಈ ಗ್ರಾಂಟ್ ಸರ್ಟಿಫಿಕೇಟ್/ ಹಕ್ಕು ಪತ್ರ ನೀಡಿರುತ್ತದೆ. ಇದರಲ್ಲಿ ಯಾರ ಹೆಸರಿಗೆ ಭೂಮಿಯನ್ನು ನೀಡಲಾಗಿದೆ? ಹಾಗೂ ಅದರ ಶರತ್ತುಗಳೇನೇನು? ಎಂಬುದನ್ನೆಲ್ಲ ನಮೂದಿಸಿರುತ್ತಾರೆ.
  • ನಿಮ್ಮ ಕುಟುಂಬದ ವಂಶವೃಕ್ಷ (Family Tree)
  • ಆಧಾರ್ ಕಾರ್ಡ್(Aadhaar Card)
  • RTC ಪತ್ರ (RTC Form)
  • ಭೂಮಿಯ ಸ್ಕೆಚ್ ಕಾಪಿ (Land Sketching Copy)
  • ಆಕಾರ್ಬಂದ್ ಕಾಪಿ (Akarband Copy)
  • ಟಿಪ್ಪಣಿ ಪತ್ರ

ನಿಮ್ಮ ಬಳಿ ಈ ದಾಖಲಾತಿಗಳು ಇಲ್ಲದೆ ಹೋದರೆ ಭೂಮಿ ಶಾಖೆಯಲ್ಲಿ ಈ ಮೇಲ್ಕಂಡ ಎಲ್ಲಾ ದಾಖಲಾತಿಗಳು ದೊರಕುತ್ತದೆ. ಅದನ್ನು ಪಡೆದು ಸಂಬಂಧಪಟ್ಟ ನ್ಯಾಯಾಲಯಕ್ಕೆ (Related Court) ಹೋಗಿ ಕೇಸ್ ದಾಖಲು ಮಾಡಿ, ಭೂಮಿ ಕಬಳಿಕೆಯ ಸಂದರ್ಭದಲ್ಲಿ ನಡೆದ ಅಕ್ರ-ಮಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಿದರೆ PCTL ಕಾಯ್ದೆಡಿ ಪರಿಹಾರ ಪಡೆಯಬಹುದು.

advertisement

Leave A Reply

Your email address will not be published.