Karnataka Times
Trending Stories, Viral News, Gossips & Everything in Kannada

Petrol and Diesel: ಪೆಟ್ರೋಲ್ ಹಾಗೂ ಡೀಸೆಲ್ ಹಾಕಿಸುವ ಎಲ್ಲರಿಗೂ ದೊಡ್ಡ ಸೂಚನೆ! ಕೇಂದ್ರದ ಆದೇಶ

advertisement

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಹಾಕಿಸಿಕೊಳ್ಳುವಾಗ ಗ್ರಾಹಕರು ಹೆಚ್ಚಿನ ಮೋಸಕ್ಕೊಳಗಾಗುತ್ತಿರುವುದರ ಕುರಿತು ಗಮನಹರಿಸಿರುವಂತಹ ಕೇಂದ್ರ ಸರ್ಕಾರ ವಿಶೇಷ ಸೂಚನೆಯನ್ನು ಹೊರಡಿಸಿದೆ. ಪೆಟ್ರೋಲ್/ ಡೀಸೆಲ್ ಪಂಪ್ (Petrol and Diesel Pump) ಗಳನ್ನು ಹೊಂದಿರುವ ಮಾಲೀಕರು ಯಾವ ರೀತಿ ಗ್ರಾಹಕರನ್ನು ವಂಚಿಸುತ್ತಾರೆ? ಎಂಬುದರ ಕುರಿತು ಕೇಂದ್ರ ಸರ್ಕಾರ ಮಾಹಿತಿಯನ್ನು ಬಹಿರಂಗಗೊಳಿಸಿದ್ದು, ಇನ್ನು ಮುಂದೆ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಳ್ಳುವಾಗ ತಪ್ಪದೆ ಈ ಕೆಲ ಪ್ರಕ್ರಿಯೆಯನ್ನು ಗಮನವಿಟ್ಟು ನೋಡಿ.

ಪೆಟ್ರೋಲ್ ಅಥವಾ ಡೀಸೆಲ್ ಸಾಂದ್ರತೆಯ ಪರಿಶೀಲನೆ:

 

Image Source: News18

 

ಸಾಂದ್ರತೆ (Density) ಎಂದರೆ ನಿರ್ದಿಷ್ಟ ಪ್ರಮಾಣದಲ್ಲಿ ಪ್ಯಾಕ್ ಮಾಡಲಾದ ಶಕ್ತಿಯ ಅಳತೆ, ಪೆಟ್ರೋಲ್/ ಡೀಸೆಲ್ ಸಾಂದ್ರತೆಯು ನಿಮ್ಮ ವಾಹನ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಭಾರತ ಸರ್ಕಾರ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಪೆಟ್ರೋಲ್ 720-775 KG/M³ ಹಾಗೂ ಡೀಸೆಲ್ 820-880 KG/M³ ನಷ್ಟು ಡೆನ್ಸಿಟಿ (Density)ಯನ್ನು ಕಡ್ಡಾಯವಾಗಿ ಹೊಂದಿರಬೇಕು. ಈ ಮೇಲ್ಕಂಡ ಅಳತೆಗಿಂತ ಸಾಂದ್ರತೆ (Density)ಯಲ್ಲಿ ವ್ಯತ್ಯಾಸ ಇದ್ದರೆ, ನಿಮ್ಮ ವಾಹನ ಸಮಸ್ಯೆಗೀಡಾಗಿ ಲಕ್ಷಗಟ್ಟಲೆ ಹಣ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿ ಮುಂದಿನ ಬಾರಿ ಪೆಟ್ರೋಲ್ ಹಾಕಿಸುವಾಗ ಮೀಟರ್ ನಲ್ಲಿ ಇಂಧನದ ಡೆನ್ಸಿಟಿ ಎಷ್ಟಿದೆ ಎಂಬುದನ್ನು ತಪ್ಪದೆ ಪರಿಶೀಲಿಸಿ.

advertisement

ಮೀಟರ್ ರೀಡಿಂಗ್:

 

Image Source: YouTube

 

ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸುವಂತಹ ಸಂದರ್ಭದಲ್ಲಿ ನೀವು ಹೇಳಿರುವ ಮೊತ್ತಕ್ಕೆ ಅವರು ಪೆಟ್ರೋಲ್ ಅಥವಾ ಡೀಸೆಲ್ (Petrol and Diesel) ಅನ್ನು ಹಾಕುವಂತಹ ಸಂದರ್ಭದಲ್ಲಿ ಮೀಟರ್ ರೀಡಿಂಗ್ (Meter Reading) 0.00 ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆನಂತರ ಮೀಟರ್ ರೀಡಿಂಗ್ 0.೦೦ ಯಿಂದ 2.00ಕ್ಕೆ ಚಾಲಿತಗೊಂಡರೆ ಯಾವುದೇ ಸಮಸ್ಯೆ ಇಲ್ಲ, ಮೊದಲಿಗೆ 0 ಯಿಂದ‌ 5.00ಕ್ಕೆ ಜಂಪ್ ಆದರೆ ಪೆಟ್ರೋಲ್ ಘಟಕದವರು ಶಾರ್ಟ್ ಫ್ಯುಲಿಂಗ್ (Short Fueling) ಮಾಡಿ ವಂಚಿಸುತ್ತಿದ್ದಾರೆ ಎಂದರ್ಥ.

ಪೆಟ್ರೋಲ್/ಡೀಸೆಲ್ ಪಂಪ್ ಮೇಲೆ ಗ್ರಾಹಕರು ದೂರು ನೀಡಬಹುದು:

ನಿಮ್ಮ ವಾಹನಕ್ಕೆ ಹಾಕಿದಂತಹ ಇಂಧನದಲ್ಲಿ ನಿಮಗೆ ಯಾವುದೇ ರೀತಿಯ ಸಂದೇಹ ಮೂಡಿದರೆ ಗ್ರಾಹಕರು ಕಾನೂನು ಬದ್ಧವಾಗಿ ದೂರನ್ನು ದಾಖಲಿಸಬಹುದು ಅಥವಾ ರಾಷ್ಟ್ರೀಯ ಗ್ರಾಹಕರ ಸಹಾಯವಾಣಿ ಸಂಖ್ಯೆ 1915 ಗೆ ಕರೆ ಮಾಡಿ ದೂರಿನ ವಿವರವನ್ನು ನೀಡಿ ಆ ಪೆಟ್ರೋಲ್ ಘಟಕದ ವಿರುದ್ಧ ದೂರು ದಾಖಲಿಸಬಹುದು.

advertisement

Leave A Reply

Your email address will not be published.