Karnataka Times
Trending Stories, Viral News, Gossips & Everything in Kannada

Property Transfer: ಮಕ್ಕಳ ಹೆಸರಿಗೆ ಆಸ್ತಿ ವರ್ಗಾವಣೆ ಮಾಡುವ ಮುನ್ನ ಪೋಷಕರು ಈ ನಿಯಮಗಳು ತಿಳಿದುಕೊಳ್ಳಿ!

advertisement

ನೀವು ಕಷ್ಟಪಟ್ಟು ದುಡಿದು ಹಣ ಸಂಪಾದಿಸುವುದರ ಮುಖಾಂತರ ಮುಖ್ಯ ಉದ್ದೇಶ ನಿಮ್ಮ ಜೀವನ ಚೆನ್ನಾಗಿರಬೇಕು ಯಾವುದೇ ಸಮಸ್ಯೆಗಳು ಇರಬಾರದು ಎನ್ನುವುದಾಗಿರುತ್ತದೆ. ಇದರ ಜೊತೆಗೆ ಹಣದ ಅಗತ್ಯ ಬೇಕಾದಾಗ ನಿಮ್ಮ ಬಳಿ ಸಾಕಷ್ಟು ಹಣ ಇರಬೇಕು ಹಾಗೂ ಕುಟುಂಬದವರು, ನಿಮ್ಮ ಮುಂದಿನ ಪೀಳಿಗೆಯು ಕೂಡ ಇದೇ ತರಹದ ಬದುಕನ್ನು ಸಾಗಿಸಬೇಕು, ಅವರಿಗೂ ಯಾವುದೇ ರೀತಿಯ ತೊಂದರೆಗಳು ಬರಬಾರದು ಎನ್ನುವುದಾಗಿರುತ್ತದೆ.

ಹೀಗೆ ನೀವು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣ (Money) ಅಥವಾ ಆಸ್ತಿ (Property), ನಿಮ್ಮ ಮುಂದಿನ ಪೀಳಿಗೆಗೆ ತಲುಪಬೇಕಾದರೆ ಯಾವೆಲ್ಲ ಮಾರ್ಗಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಹೀಗೆ ಮಾಡುವ ಮೂಲ ಯಾವುದೇ ತೊಂದರೆ ಇಲ್ಲದೆ ನಿಮ್ಮ ನಂತರ ನಿಮ್ಮ ಹೆಸರಿನಲ್ಲಿರುವ ಹಣ ಮತ್ತು ಆಸ್ತಿಯು ಸರಿಯಾದ ವಾರಸುದಾರರಿಗೆ ಸೇರುತ್ತದೆ. ಹಾಗದರೆ ಯಾವೆಲ್ಲಾ ದಾರಿಗಳಿವೆ ಎಂಬುದನ್ನು ಇಂದು ನೋಡೋಣ.

Nomination:

 

 

advertisement

ನಿಮ್ಮ ಆಸ್ತಿ ನಿಮ್ಮ ನಂತರ ಮಕ್ಕಳಿಗೆ ಸಿಗಬೇಕು ಅಂತಾದರೆ ಇರುವ ಮೊದಲ ಆಯ್ಕೆ ನಾಮ ನಿರ್ದೇಶನ ಅಥವಾ ನಾಮಿನೇಷನ್ (Nomination). ನಿಮ್ಮ ಹೆಸರಿನಲ್ಲಿರುವ ನಿಮ್ಮ ಸ್ವಂತ ಆಸ್ತಿಯನ್ನು ನೀವು ನಿಮ್ಮ ಮಕ್ಕಳ ಹೆಸರಿನಲ್ಲಿ ನಾಮನಿರ್ದೇಶನ ಮಾಡಿಸಿಟ್ಟರೆ ಅವರಿಗೆ ಯಾವುದೇ ತೊಂದರೆ ಇಲ್ಲದೆ ನಮ್ಮ ಆಸ್ತಿ ವರ್ಗಾವಣೆ (Property Transfer) ಆಗುತ್ತದೆ. ಕೇವಲ ನಿಮ್ಮ ರೆಕಾರ್ಡ್ ಗಳಲ್ಲಿ ನಾಮಿನೇಷನ್ ಎಂದು ಇರುವ ಜಾಗದಲ್ಲಿ ಯಾರ ಹೆಸರಿಗೆ ಆಸ್ತಿ ವರ್ಗಾವಣೆ ಆಗಬೇಕೋ ಅವರ ಹೆಸರನ್ನು ನಮೂದಿಸಿದರೆ ಸಾಕಾಗುತ್ತದೆ. ಪಿತ್ರಾರ್ಜಿತ ಆಸ್ತಿ ಎಂದಾದಲ್ಲಿ ಇದು ನಮ್ಮ ಮಕ್ಕಳಿಗೆ ಸಹಜವಾಗಿಯೇ ತಲುಪಿರುತ್ತದೆ.

ವಿಲ್ ಅಥವಾ ಉಯಿಲು:

ಉಯಿಲು ಬರೆಯುವುದು ಆಸ್ತಿಯನ್ನು ವರ್ಗಾಯಿಸಲು ಇರುವ ಇನ್ನೊಂದು ಮಾರ್ಗವಾಗಿದೆ. ವಿಲ್ ಒಂದು ಕಾನೂನು ಬದ್ಧವಾದ ದಾಖಲೆಯಾಗಿದ್ದು ಇದನ್ನು ಮುಂದೆ ಯಾರೂ ಪ್ರಶ್ನಿಸುವಂತಿರುವುದಿಲ್ಲ. ತಮ್ಮ ಆಸ್ತಿ ನಮ್ಮ ನಂತರ ಯಾರಿಗೆ ಸೇರಬೇಕು ಎಂಬುದನ್ನು ಷರತ್ತುಗಳ ಜೊತೆಗೆ ವಿಲ್ ನಲ್ಲಿ ಬರೆಯಲು ಸಾಧ್ಯವಿದೆ ವಿಲ್ ಬರೆಯುವ ಸಮಯದಲ್ಲಿ ಬರೆಯುವ ವ್ಯಕ್ತಿ ಅಪ್ರಾಪ್ತ ವಯಸ್ಸಿನವನಾಗಿರಬಾರದು ಮತ್ತು ಮಾನಸಿಕವಾಗಿ ಉತ್ತಮ ಸ್ಥಿತಿಯಲ್ಲಿರಬೇಕು ಎಂಬ ನಿಯಮಗಳನ್ನು ಬಿಟ್ಟರೆ ಬೇರೆ ಯಾವುದೇ ನಿಯಮಗಳು ವಿಲ್ ಬರೆಯುವುದನ್ನು ಅಡ್ಡಿ ಪಡಿಸುವುದಿಲ್ಲ.

ಈ ಎರಡು ಕೆಲಸಗಳನ್ನು ಮಾಡದೆ ಇದ್ದಲ್ಲಿ ಆಸ್ತಿ (Property) ಸಾಮಾನ್ಯವಾಗಿ ತಂದೆ-ತಾಯಿ ನಂತರ ಅವರ ಮಕ್ಕಳ ಹೆಸರಿನಲ್ಲೇ ವರ್ಗಾವಣೆಯಾಗುತ್ತದೆ. ಆದರೆ ಅದನ್ನು ಪಡೆಯಲು ಮಕ್ಕಳು ಕೆಲವೊಮ್ಮೆ ಕಷ್ಟ ಪಡಬೇಕಾಗುತ್ತದೆ. ಸರಿಯಾದ ದಾಖಲೆಗಳನ್ನು ಒದಗಿಸುವುದು ಕಚೇರಿಗಳಿಗೆ ಓಡಾಡುವುದು ಮುಂತಾದ ಕೆಲಸಗಳನ್ನು ಮಾಡಬೇಕಾಗುತ್ತದೆ ಅದರ ಬದಲಾಗಿ ಈ ಎರಡರಲ್ಲಿ ಒಂದು ಕ್ರಮಗಳನ್ನು ಅನುಸರಿಸಿದಲ್ಲಿ ಸುಲಭವಾಗಿ ನಿಮ್ಮ ಆಸ್ತಿ ಯಾರಿಗೆ ಸೇರಬೇಕು ಅವರಿಗೆ ಸೇರಿರುತ್ತದೆ. ಹಾಗೂ ನಿಮ್ಮ ಮುಂದಿನ ಪೀಳಿಗೆ ಅನಗತ್ಯವಾಗಿ ಕಚೇರಿಗಳನ್ನು ಸುತ್ತುವ ಕೆಲಸ ಇರುವುದಿಲ್ಲ.

advertisement

Leave A Reply

Your email address will not be published.