Karnataka Times
Trending Stories, Viral News, Gossips & Everything in Kannada

Gold Price: ಇಂದು ಮತ್ತೆ ಕುಸಿದ ಬಂಗಾರದ ಬೆಲೆ! ಎಷ್ಟಾಗಿದೆ ಗೊತ್ತಾ ದರ

advertisement

ಚಿನ್ನವು ಅಮೂಲ್ಯವಾದ ಮತ್ತು ಸುಂದರವಾದ ವಸ್ತು ಮಾತ್ರವಲ್ಲ. ಹಿಂದಿನಕಾಲದಿಂದಲೂ ಇದರ ಪಾತ್ರ ಬಹಳ ಇದೆ.‌ ಚಿನ್ನವನ್ನು ಸೌಂದರ್ಯ ದ ಉದ್ದೇಶದಿಂದ ಬಳಕೆ ಮಾಡಿದರೂ ಇದರ ಉಪಯೋಗ ಬಹಳಷ್ಟು ಇದೆ. ಚಿನ್ನ ಒಂದು ಹೂಡಿಕೆಯ ಅಂಶ ವಾಗಿದ್ದು ಇದು ಕಷ್ಟಕಾಲದಲ್ಲಿ ಬಹಳಷ್ಟು ಸಹಾಯ ಮಾಡಲಿದೆ. ನೀವೇನಾದರೂ ಚಿನ್ನದ ಮೇಲೆ ದೀರ್ಘಾವಧಿ ವರೆಗೆ ‌ ಹೂಡಿಕೆ ಮಾಡಬೇಕು‌ಎಂದು ಇದ್ದರೆ ಚಿನ್ನದ ದಿನದಿನದ ಬೆಲೆ (Gold Price) ಏರಿಳಿತಗಳಿಂದ ಯಾವುದೇ ಪರಿಣಾಮ ಆಗುವುದಿಲ್ಲ.ಇದರ ಹೂಡಿಕೆ ಲಾಭವೇ ಹೊರತು ನಷ್ಟ ಇಲ್ಲ ಅನ್ನಬಹುದು.

ಇಳಿಕೆ ಕಂಡ ಬೆಲೆ:

ಇಂದು ಚಿನ್ನಕ್ಕೆ ಬೇಡಿಕೆ ಬಹಳಷ್ಟು ಇದ್ದು ಮೊನ್ನೆಯಿಂದ ಚಿನ್ನದ ಬೆಲೆ (Gold Price) ಬಹಳಷ್ಟು ಏರಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯು ಎಪ್ರಿಲ್ ಮೊದಲ ದಿನದಿಂದಲೇ ಬಹಳಷ್ಟು ಏರಿಕೆಯಾಗಿತ್ತು.‌ ಇಂದು ಚಿನ್ನದ ಬೆಲೆಯು ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿದೆ.

ಎಷ್ಟು ಇಳಿಕೆ ಯಾಗಿದೆ?

 

Image Source: Jagran English

 

ರಾಜಧಾನಿಯಲ್ಲಿ ಚಿನ್ನದ ಬೆಲೆ 1,450 ರೂ.ಗಳ ಇಳಿಕೆಯೊಂದಿಗೆ 10 ಗ್ರಾಂಗೆ 72,200 ರೂ. ಆಗಿದೆ. ಇನ್ನು ಬೆಂಗಳೂರಿನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆಯು 10 ಗ್ರಾಂಗೆ 1,530ರಷ್ಟು ಇಳಿಕೆ ಕಂಡು ಬಂದಿದ್ದು 72,160 ರೂ. ವರೆಗೆ ಇದೆ.ಚಿನ್ನದ ಬೆಲೆ ಗ್ರಾಮ್​ಗೆ ಬರೋಬ್ಬರಿ 140 ರೂನಷ್ಟು ಕಡಿಮೆ ಆಗಿದ್ದು. ಬೆಳ್ಳಿ ಬೆಲೆ ಗ್ರಾಮ್​ಗೆ ಎರಡೂವರೆ ರೂನಷ್ಟು ಕಡಿಮೆ ಯಾಗಿದೆ.

advertisement

ಎಷ್ಟು ಇದೆ ಬೆಲೆ?

ಇನ್ನು ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ (Gold Price) 66,150 ರುಪಾಯಿ ಇದ್ದು 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,160 ರುಪಾಯಿ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ಬೆಂಗಳೂರಿನಲ್ಲಿ‌ 66,150 ರೂ ಆಗಿದ್ದು, ಚೆನ್ನೈ ನಲ್ಲಿ 67,000 ರೂ ಹಾಗೂ ಮುಂಬೈ ನಲ್ಲಿ 66,150 ರೂ ಆಗಿದೆ.

ಇತರ ಕಡೆ ಗ್ರಾಂ ಗೆ ಎಷ್ಟು ಆಗಿದೆ?

ಇಂದು ಮುಂಬೈನಲ್ಲಿ ಚಿನ್ನದ ಬೆಲೆ (Gold Price) ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ ‌ 6754 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯು ರೂ 7368 ಆಗಿದೆ. ಇನ್ನು ಚೆನ್ನೈನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಗೋಲ್ಡ್ ಗೆ 6844 ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7466 ಮೊತ್ತ ಆಗಿದೆ. ಹೈದರಾಬಾದ್‌ನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ‌ರೂ 6754 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ರೂ 7368 ಆಗಿದೆ.

ಬೆಳ್ಳಿ ಬೆಲೆ:

 

Image Source: Mint

 

ಇಂದು ಬೆಳ್ಳಿ ಕೂಡ ಅಗತ್ಯ ವಸ್ತು ವಾಗಿದ್ದು ಹೆಚ್ಚಿನ ಶುಭ ಸಮಾರಂಭಗಳಿಗೆ ಬೆಳ್ಳಿ ಅಗತ್ಯವಾಗಿ ಬೇಕಾಗಿದೆ.‌ ಇಂದು ಬೆಳ್ಳಿ ಬೆಲೆ (Silver Price) 10 ಗ್ರಾಂಗೆ 859 ರೂ ಆಗಿದ್ದು 100 ಗ್ರಾಮ್ ಬೆಳ್ಳಿ ಬೆಲೆ 8,300 ರುಪಾಯಿ ಆಗಿದ್ದು ಗ್ರಾಮ್ ಗೆ ಎರಡೂವರೆ ರೂನಷ್ಟು ಕಡಿಮೆ ಆಗಿದೆ.

advertisement

Leave A Reply

Your email address will not be published.