Karnataka Times
Trending Stories, Viral News, Gossips & Everything in Kannada

Gruha Lakshmi Money: ಪ್ರತಿ ತಿಂಗಳು ತಪ್ಪದೇ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದವರಿಗೆ ಹೊಸ ಸೂಚನೆ!

advertisement

ಈ ಭಾರಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವು ಐದು ಪ್ರಣಾಳಿಕೆ ಯನ್ನು ಇಡುವ ಮೂಲಕ ರಾಜ್ಯದ ಜನತೆಯ ಜನ‌ಮತ ಸೆಳೆದಿತ್ತು. ಇದೀಗ ಐದು‌ ಗ್ಯಾರಂಟಿ ಯೋಜನೆಗಳು ಕೂಡ ಬಹಳಷ್ಟು ಪ್ರಚಲಿತ ದಲ್ಲಿದ್ದು‌ ಅದರಲ್ಲಿ ಮಹಿಳಾ ಪರವಾದ ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ ಯೋಜನೆ (Shakti Yojana) ಇಂದು ಬಹಳಷ್ಟು ಫೇಮ್ ಅನ್ನು ಹೊಂದಿದೆ. ಇದೀಗ ಗೃಹಲಕ್ಷ್ಮಿ ಯೋಜನೆ (Gruha Lakshmi) ಯ ಸೌಲಭ್ಯ ವನ್ನು ಬಹಳಷ್ಟು ಮಹಿಳೆಯರು ಪಡೆದುಕೊಂಡಿದ್ದು ಈ ವರೆಗೆ ಕೆಲವು ಮಹಿಳೆಯರಿಗೆ ಎಂಟು ಕಂತಿನ ಹಣ ಮತ್ತು ಒಂಭತ್ತನೆಯ ‌ಕಂತಿನ‌ಹಣವೂ ಬಿಡುಗಡೆ ಗೊಂಡಿದೆ.

ಒಂಭತ್ತನೆಯ ‌ಕಂತಿನ ಹಣ?

ಇಂದು ಲೋಕಸಭೆ ಚುನಾವಣೆ ನಡೆಯುತ್ತಿ ರುವುದರಿಂದ ಈ ಭಾರಿ‌ ಈ ಮೊದಲೇ ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Money) ಸರಕಾರ ಬಿಡುಗಡೆ ಮಾಡಿದೆ. ಅದೇ ರೀತಿ ಕೆಲವು‌ ಮಹಿಳೆಯರಿಗೆ ಈ ಗೃಹಲಕ್ಷ್ಮಿ ‌ ಒಂಭತ್ತನೆಯ ‌ಕಂತಿನ ಹಣ ಕೂಡ ಜಮೆಯಾಗಿದೆ.

 

Image Source: Times of India

 

ಹಣ ಜಮೆಯಾಗಬೇಕಿದ್ದಲ್ಲಿ ಈ‌ಕೆಲಸ ಕಡ್ಡಾಯ:

advertisement

ಗೃಹಲಕ್ಷ್ಮಿ ಹಣ (Gruha Lakshmi Money) ಖಾತೆಗೆ ಜಮೆ ಯಾಗಬೇಕಿದ್ದಲ್ಲಿ ಅಲ್ಲಿ ನೀಡಿರುವಂತಹ‌ ಸಂಪೂರ್ಣ ನಿಯಮಗಳನ್ನು ಪಾಲಿಸಿದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಲಿದೆ. ಗೃಹಲಕ್ಷ್ಮಿ ಹಣ ಖಾತೆಗೆ ಬರಬೇಕಿದ್ದಲ್ಲಿ NPCI ಮ್ಯಾಪಿಂಗ್ ಮಾಡಿಸಿ ಕೊಳ್ಳುವುದು ಕಡ್ಡಾಯ ಮತ್ತು ಆಧಾರ್ ಕಾರ್ಡ್ ‌ಅನ್ನು ರೇಷನ್ ಕಾರ್ಡ್, ಬ್ಯಾಂಕ್ ಖಾತೆಗೆ ‌ಲಿಂಕ್ ಮಾಡಿಸುವ ಕೆಲಸವು ಕಡ್ಡಾಯ ವಾಗಿದೆ. ಇನ್ನು ಮಹಿಳೆಯರು ತಮ್ಮ ಆಧಾರ್ ಕಾರ್ಡ್ (Aadhaar Card) ಅನ್ನು ಹತ್ತು ವರ್ಷಗಳ ವರೆಗೆ ಯಾವುದೇ ರೀತಿಯಲ್ಲಿ ಮಾಹಿತಿ ಅಪ್ಡೇಟ್ ಮಾಡಿಲ್ಲ ವಾದರೆ ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ ವಾಗಿ‌ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಈ ಹಣ ಈ ತಿಂಗಳು‌ ಕೂಡ ಜಮೆಯಾಗುವುದಿಲ್ಲ.

ಪೆಂಡಿಂಗ್ ಇರುವ ಹಣವು ಜಮೆ?

ಒಂದು ಕಂತಿನ ಗೃಹಲಕ್ಷ್ಮಿ ಹಣ (Gruha Lakshmi Money) ವೂ ಖಾತೆಗೆ‌ ಬಾರದೇ‌ ಇದ್ದಲ್ಲಿ ಮೊದಲಿಗೆ ನೀವು ನಿಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಿ. ರೇಷನ್ ಕಾರ್ಡ್ ನಲ್ಲಿ ಮೊದಲು ಯಜಮಾನನನ ಹೆಸರು ನಮೂದು ಆಗಿದ್ದಲ್ಲಿ ಅದನ್ನು ಆಪ್ಡೆಟ್ ‌ಮಾಡಿ.‌ ಇನ್ನು‌ ಆಧಾರ್ ನಲ್ಲಿ ನಿಮ್ಮ ಮಾಹಿತಿ‌ ಇದ್ದ‌‌ ರೀತಿಯೇ‌ ಎಲ್ಲ ದಾಖಲೆ ‌ಗಳಲ್ಲಿ ಅಪ್ಡೇಟ್ ಮಾಡಿಸಿಕೊಳ್ಳಿ.

ಹಣ ಜಮೆ ಯಾಗಿರುವ ಬಗ್ಗೆ ಚೆಕ್ ಮಾಡಿ:

ಮೊದಲಿಗೆ ನೀವು ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿ,ನಂತರದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ.ಆಹ‌ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ ಒಟಿಪಿ ಬರಲಿದ್ದು ನೀವು ಒಟಿಪಿ ಯನ್ನು ಸಲ್ಲಿಸಿ. ಇಲ್ಲಿ ನಿಮ್ಮ ಗೃಹಲಕ್ಷ್ಮಿ ಹಣದ ವಹಿವಾಟಿನ ಮಾಹಿತಿ ಪಡೆಯಬಹುದಾಗಿದೆ.

advertisement

Leave A Reply

Your email address will not be published.