Karnataka Times
Trending Stories, Viral News, Gossips & Everything in Kannada

Anna Bhagya Yojana: ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಹಣದ ಬಗ್ಗೆ ಬಿಗ್ ಅಪ್ಡೇಟ್!

advertisement

ಇಂದು ಬಡವರ್ಗದ ಜನತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸುವ ಮೂಲಕ ಬೆಂಬಲವನ್ನು ನೀಡುತ್ತಿದೆ. ಅದೇ ರೀತಿ ಈ ಭಾರಿ‌ ರಾಜ್ಯ ಸರಕಾರವು ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಅಕ್ಕಿಯ ಜೊತೆಗೆ ಹಣವನ್ನು ಕೂಡ ಖಾತೆಗೆ ಜಮೆ ಮಾಡುತ್ತಿದೆ.

ನೇರವಾಗಿ ಖಾತೆಗೆ ಹಣ ಜಮೆ?

ಆರಂಭದಲ್ಲಿ 10 ಕೆಜಿ ಅಕ್ಕಿಯನ್ನು ನೀಡುವ ಭರವಸೆ ಯನ್ನು ರಾಜ್ಯ ಸರಕಾರ ನೀಡಿದರೂ ಅಕ್ಕಿ ಕೊರತೆಯಿಂದಾಗಿ 5 ಕೆಜಿ ಅಕ್ಕಿ ಮತ್ತು ಇನ್ನುಳಿದ ಐದು ಕೆಜಿಗೆ ಹಣವನ್ನು ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಅಕ್ಕಿ ಹಣವನ್ನು ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ, ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಕೆಜಿಗೆ 170 ರೂಪಾಯಿ ಹಣ ಸಂದಾಯ ಮಾಡುತ್ತಿದೆ.

ಚೆಕ್ ಮಾಡಿ:

ಮೊದಲಿಗೆ ನೀವು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ https://ahara.kar.nic.in/ ಗೆ ಭೇಟಿ ನೀಡಿ, ಇಲ್ಲಿ ಇ-ಸೇವೆಗಳ ಮೇಲೆ‌ಕ್ಲಿಕ್ ಮಾಡಿ, ನಂತರದಲ್ಲಿ ಡಿಬಿಟಿ ಸ್ಟೇಟಸ್ ಲಿಂಕ್ ಅನ್ನು ಕ್ಲಿಕ್ ಮಾಡಿ ಇಲ್ಲಿ ತಿಂಗಳು, ವರ್ಷ ಆಯ್ಕೆ ಮಾಡಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಯನ್ನು ಹಾಕಿ Continue ಎಂಬ ಆಪ್ಚನ್ ಮೇಲೆ ಕ್ಲಿಕ್ ಮಾಡಿದರೆ ಹಣ ಜಮೆಯಾಗಿರುವ ಬಗ್ಗೆ‌ ತಿಳಿಯಲಿದೆ.

ಈ ತಿಂಗಳ ಹಣ?

 

advertisement

Image Source: The Hindu

 

ಅನ್ನಭಾಗ್ಯ ಯೋಜನೆ (Anna Bhagya Yojana) ಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮ ಮಾಡಲಾಗ್ತ ಇದ್ದು ಮೇ ತಿಂಗಳ ಹಣವನ್ನು ಸರಕಾರ ಬಿಡುಗಡೆ ಮಾಡಲಿದೆ.‌ ಈಗಾಗಲೇ ಅಕ್ಕಿ ಹಣವನ್ನು ಸರಕಾರ ಬಿಡುಗಡೆ ಮಾಡಿದ್ದು ಇದೇ ತಿಂಗಳ 15 ರ ಒಳಗೆ ನಿಮಗೆ ಅಕ್ಕಿ ಹಣ ಜಮೆಯಾಗಬಹುದು.

ಕಡ್ಡಾಯ ಮಾಡಿ:

ಒಂದು ವೇಳೆ ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆ (Anna Bhagya Yojana) ಯ ಹಣ ಬಾರದೇ ಇದ್ದಲ್ಲಿ ನೀವು ಈ‌ ಕೆಲಸ ಕಡ್ಡಾಯವಾಗಿ ಮಾಡಬೇಕು.‌ ಮೊದಲನೇದಾಗಿ ನೀವು ಬ್ಯಾಂಕ್ ಶಾಖೆಗೆ ಹೋಗಿ E-KYC ಪ್ರಕ್ರಿಯೆ ಪೂರ್ಣ ಮಾಡಬೇಕು. ಎನ್ ಪಿಸಿಐ ಮ್ಯಾಪಿಂಗ್ ಕೂಡ ಮಾಡಿಸಿ.ಇನ್ನು ರೇಷನ್ ಕಾರ್ಡ್ (Ration Card) ಆಪ್ಡೆಟ್ ಮಾಡದೇ‌ ಇದ್ದಲ್ಲಿ ಈ ಕೆಲಸವನ್ನು ಸಹ ಮೊದಲು ಮಾಡಿ.

ಇವರ ಖಾತೆಗೆ‌ ಜಮೆ:

 

Image Source: Hindustan Times

 

ಅನ್ನಭಾಗ್ಯ ಯೋಜನೆಯ (Anna Bhagya Yojana) ಹಣ ಕುಟುಂಬದಲ್ಲಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಇತರ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೂ ಹಣ ವರ್ಗಾವಣೆ ಮಾಡಲಿದೆ. ಅನ್ನಭಾಗ್ಯ ಯೋಜನೆಯಡಿ ಕುಟುಂಬದ ಯಜಮಾನ ಇಲ್ಲದೆ‌ ಇದ್ದಲ್ಲಿ‌ ಕುಟುಂಬದ ಅತ್ಯಂತ ಹಿರಿಯ ಯಜಮಾನನು ಈ ಮೊತ್ತ ಪಡೆಯಬಹುದು.

advertisement

Leave A Reply

Your email address will not be published.