Karnataka Times
Trending Stories, Viral News, Gossips & Everything in Kannada

Anna Bhagya Money: ಮಾರ್ಚ್ ತಿಂಗಳಿನಲ್ಲಿ ಅನ್ನಭಾಗ್ಯ ಹಣ ಬಂದಾಯ್ತು! ಈ ರೀತಿ ಚೆಕ್ ಮಾಡಿದ್ರೆ ಗೊತ್ತಾಗುತ್ತೆ.

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮುಖ್ಯವಾದ ಯೋಜನೆ ಅನ್ನಭಾಗ್ಯ (Anna Bhagya) ಕೂಡ ಒಂದಾಗಿದ್ದು ಬಡ ವರ್ಗದ ಜನತೆಗೆ ಈ ಯೋಜನೆ ಹೆಚ್ಚು ನೇರವಾಗುತ್ತಿದೆ. ಬಡವರ ಹಸಿವು ನೀಗಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಬಡವರಿಗೆ ಅಗತ್ಯ ಆಹಾರ ಧಾನ್ಯಗಳನ್ನು ಒದಗಿಸಬೇಕು, ಮೂಲಭೂತ ಅವಶ್ಯಕ ಆಹಾರ ಪದಾರ್ಥಗಳು ಅವರಿಗೂ ಸಿಗುವಂತಾಗಬೇಕು ಎಂದು 2013 ರಲ್ಲಿ ಅನ್ನಭಾಗ್ಯ ಯೋಜನೆಯನ್ನು ಪ್ರಾರಂಭಿಸಲಾಯಿತು.

ಆಹಾರ‌ ಧಾನ್ಯಗಳ ಜೊತೆ ಹಣವೂ ಜಮೆ:

ಇದೀಗ ಅನ್ನಭಾಗ್ಯ ಯೋಜನೆ (Anna Bhagya Yojana) ಯಡಿಯಲ್ಲಿ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣವನ್ನು ಕೂಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡ ಲಾಗುತ್ತಿದೆ. ಕಳೆದ ‌ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸರಕಾರವು ಗ್ಯಾರಂಟಿ ಯೋಜನೆಯ ಮೂಲಕ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿತ್ತು. ಆದರೆ, ಅಕ್ಕಿ ಕೊರತೆಯಿಂದಾಗಿ 5 ಕೆಜಿ ಅಕ್ಕಿ ನೀಡುತ್ತಿದ್ದು, ಇನ್ನುಳಿದ ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿತ್ತು. ಈಗ ಪ್ರತಿ‌ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣವನ್ನು ಕುಟುಂಬದ ‌ಪ್ರತಿಯೊಬ್ಬ ವ್ಯಕ್ತಿಗೂ ನೀಡುತ್ತಿದೆ

ಮಾರ್ಚ್ ತಿಂಗಳ ಹಣ ಬಂದಿದೆಯೇ?

 

Image Source: The Indian Express

 

advertisement

ಇಲ್ಲಿಯವರೆಗೆ ಕೆಲವರಿಗೆ ಜನವರಿ ತಿಂಗಳ ವರೆಗೆ ಮಾತ್ರ ಅನ್ನಭಾಗ್ಯ ಹಣ (Anna Bhagya Money) ಜಮೆಯಾಗಿದ್ದು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಇನ್ನಷ್ಟೆ ಖಾತೆಗೆ ಜಮೆಯಾಗಬೇಕಿದೆ. ಹೌದು ಪೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವೂ ಕೆಲವರ ಖಾತೆಗೆ ಜಮೆಯಾಗಿದ್ದು ಉಳಿದ ಫಲಾನುಭವಿಗಳಿಗೆ ಇದೇ ತಿಂಗಳ ಕೊನೆಯಲ್ಲಿ ಖಾತೆಗೆ ಜಮೆಯಾಗಬಹುದು ಎನ್ನಲಾಗಿದೆ. ಈ ಬಗ್ಗೆ ಆಹಾರ ಇಲಾಖೆಯ ಸ್ಪಷ್ಟನೆ ನೀಡಿದೆ.

ಯಾಕೆ ಹಣ ಬಂದಿಲ್ಲ?

 

Image Source: Prokerala

 

ಅನ್ನಭಾಗ್ಯ ಯೋಜನೆ (Anna Bhagya Yojana) ಯ‌ ಹಣ‌ ಸಾಕಷ್ಟು ಕುಟುಂಬಕ್ಕೆ ತಲುಪಿಲ್ಲ. ಇದಕ್ಕೆ ಮುಖ್ಯ ಕಾರಣ ‌ಮನೆಯ ಹಿರಿಯ ಸದಸ್ಯರ ಅಲಭ್ಯತೆ ಪ್ರಮುಖ ಕಾರಣವಾಗಿದ್ದು ಅವರ ಬ್ಯಾಂಕ್ ಖಾತೆ, ಆಧಾರ್ ಸಮಸ್ಯೆ ಇತ್ಯಾದಿ ಆಗಿದ್ದು ಈ ಹಿನ್ನೆಲೆ ‌ ಸರ್ಕಾರವು ಕುಟುಂಬದ ಯಜಮಾನ ಲಭ್ಯವಿಲ್ಲದಿದ್ದರೆ ಪರ್ಯಾಯ ಮಾರ್ಗಕ್ಕೆ ಮುಂದಾಗಿದ್ದು ಕುಟುಂಬದ ಮುಖ್ಯಸ್ಥನ ನಂತರದ ವ್ಯಕ್ತಿಗೆ ಹಣ ಜಮೆ ಮಾಡಲು ಕೂಡ ನಿರ್ಧಾರ ಮಾಡಿದೆ.

ಮೊಬೈಲ್ ಮೂಲಕವೇ ಚೆಕ್ ಮಾಡಿ:

ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗಿದೆಯಾ ಎಂದು ತಿಳಿದು ಕೊಳ್ಳಲು ಮೊದಲಿಗೆ ಕರ್ನಾಟಕ ಆಹಾರ ಇಲಾಖೆಯ ವೆಬ್‌ಸೈಟ್ https://ahara.kar.nic.in/ ಗೆ ಭೇಟಿ ನೀಡಿ, ತದನಂತರ ಇ-ಸೇವೆಗಳು ಎಂಬ ಆಶ್ಚನ್ ಬರಲಿದ್ದು,ಅದರಲ್ಲಿ ಡಿಬಿಟಿ ಸ್ಟೇಟಸ್ ಲಿಂಕ್ ಗೆ ಕ್ಲಿಕ್ ಮಾಡಿ, ಇದರಲ್ಲಿ‌ ವರ್ಷ, ತಿಂಗಳು‌ ಯಾವುದು ಎಂಬುದನ್ನು ಆಯ್ಕೆ ಮಾಡಿದ ನಂತರ ನಿಮ್ಮ ಪಡಿತರ ಚೀಟಿ ಸಂಖ್ಯೆ ನಮೂದಿಸಿ ಮತ್ತು Continue ಮೇಲೆ ಕ್ಲಿಕ್ ಮಾಡಿದ್ರೆ ಹಣ ಜಮೆಯಾಗಿರುವ ಮಾಹಿತಿ ನಿಮಗೆ ಸಿಗಲಿದೆ.

advertisement

Leave A Reply

Your email address will not be published.