Karnataka Times
Trending Stories, Viral News, Gossips & Everything in Kannada

Gruha Lakshmi: ಮಹಿಳೆಯರ ಮೊಗದಲ್ಲಿ ಮಂದಹಾಸ! ಈ ಕೆಲಸ ಮಾಡಿದವರ ಎಲ್ಲಾ ಕಂತಿನ ಗೃಹಲಕ್ಷ್ಮಿ ಹಣ ಜಮೆ

advertisement

Gruha Lakshmi scheme: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಲವು ಗ್ಯಾರೆಂಟಿಗಳಲ್ಲಿ(Many Guarantees) ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದ ದಿನದಿಂದಲೂ ಪ್ರತಿ ತಿಂಗಳು ಕೂಡ ಮನೆಯ ಒಡತಿಯರಿಗೆ 2000 ಹಣ ದೊರಕುತ್ತಿದೆ ಇದರಿಂದಾಗಿ ಸಾಕಷ್ಟು ಜನರ ಸಣ್ಣಪುಟ್ಟ ಸಮಸ್ಯೆಗಳು ಬಗ್ಗೆ ಹರಿಯುತ್ತಿದ್ದು, ಎಲ್ಲದಕ್ಕೂ ಗಂಡನ ಬಳಿ ಕೈ ಚಾಚುತ್ತಿದ್ದಂತಹ ಮಹಿಳೆಯರು ₹೨೦೦೦ ಹಣದಿಂದ ತಮ್ಮ ಸ್ವಂತ ಖರ್ಚುಗಳನ್ನು ನೋಡಿಕೊಳ್ಳುವಷ್ಟು ಸ್ವಾವಲಂಬಿಗಳಾಗುತ್ತಿದ್ದಾರೆ.

ಆದರೆ ರಾಜ್ಯದ ಅನೇಕ ಮಹಿಳೆಯರಿಗೆ ಕೆಲ ತಾಂತ್ರಿಕ ಸಮಸ್ಯೆ(Technical Problems) ಯಿಂದಾಗಿಯೋ ಅಥವಾ ದಾಖಲಾತಿಗಳ ತಪ್ಪಿನಿಂದಾಗಿಯೋ ಒಂದು ತಿಂಗಳು ಕೂಡ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣವು ಅವರ ಖಾತೆಗೆ ಜಮಾ ಆಗಿಲ್ಲ. ಈ ಕುರಿತು ಅನೇಕ ಮಹಿಳೆಯರು ಸರ್ಕಾರಕ್ಕೆ ದೂರು ನೀಡುತ್ತಿದ್ದರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ ಇಂತಹ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದಾರೆ ಕೂಡಲೇ ಬ್ಯಾಂಕ್ ಹೋಗಿ ಈ ದಾಖಲಾತಿಯನ್ನು ಅಪ್ಡೇಟ್ ಮಾಡಿಸಿಕೊಳ್ಳಿ.

graha lakhsmi problems solved
Image Source: Public Tv

ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್:

•ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ನಿಮ್ಮ ಖಾತೆಗೆ 2,000 ಹಣ ಜಮೆ ಆಗುತ್ತಿಲ್ಲ ಎಂದಾದರೆ ಬ್ಯಾಂಕ್ ನಲ್ಲಿ ಕೆವೈಸಿ ಅಪ್ಡೇಟ್(KYC update) ಮಾಡಿಸುವುದರ ಜೊತೆಗೆ ಆಧಾರ್ ಕಾರ್ಡ್ ಅಪ್ಡೇಟ್, ಆಧಾರ್ ಸೀಡಿಂಗ್(Aadhar Seeding) ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮುಂತಾದವುಗಳನ್ನು ಮಾಡಿಸಿ ತಾಂತ್ರಿಕ ದೋಷಗಳೆನಾದರೂ ಇದ್ದರೆ ಬಗೆಹರಿಸಿಕೊಂಡು ಮತ್ತೆ ಅರ್ಜಿ ಸಲ್ಲಿಸಿ.

•ಕೆಲವೊಮ್ಮೆ ಎಲ್ಲಾ ದಾಖಲಾತಿಗಳು ಸರಿಯಿದ್ದು, ಸರ್ಕಾರದಿಂದ ಹಣ ಜಮಯಾದರೂ ಕೂಡ ಅದು ನಿಮ್ಮ ಬ್ಯಾಂಕ್ ಖಾತೆಗೆ ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ಬ್ಯಾಂಕಿಗೆ ಹೋಗಿ ಅಲ್ಲಿನ ಸಿಬ್ಬಂದಿಗಳ ಬಳಿ ಈ ಕುರಿತು ಮಾತನಾಡಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಉಂಟಾಗಿರುವಂತಹ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

advertisement

•ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಯ ಹೆಸರು ಯಾವ ರೀತಿ ಇದೆಯೋ ಅದೇ ರೀತಿ ಬ್ಯಾಂಕ್ ಪಾಸ್ ಬುಕ್ ನಲ್ಲಿಯೂ ಇರಬೇಕು ಈ ಎರಡು ಹೆಸರುಗಳು ಮ್ಯಾಚ್ ಆಗದೆ ಹೋದರೆ, ಸರ್ಕಾರದ ಬಳಿ ಇರುವ ಡೇಟಾಬೇಸ್ ಪ್ರಕಾರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ದೊರಕುವುದಿಲ್ಲ. ಇದಕ್ಕಾಗಿ ಎರಡು ದಾಖಲಾತಿಗಳಲ್ಲಿಯೂ ಒಂದೇ ಹೆಸರಿದೆಯೇ ಎಂಬುದನ್ನು ನೋಡಿ ಇಲ್ಲವಾದರೆ ಹೆಸರು ಮತ್ತು ವಿಳಾಸವನ್ನು ತಿದ್ದುಪಡಿ ಮಾಡಿಕೊಂಡ ನಂತರ ಗೃಹಲಕ್ಷ್ಮಿ ಅಪ್ಲಿಕೇಶನನ್ನು ಅಪ್ಡೇಟ್ ಮಾಡಿಸಿ.

graha lakhsmi problems solved
Image Source: Public Tv

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸೂಚನೆ:

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ತಿಳಿಸಿರುವ ಹಾಗೆ ರಾಜ್ಯ ಸರ್ಕಾರ ನೀಡಿರುವಂತಹ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಪೂರೈಸುವಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕೂಡ ಕೈಜೋಡಿಸಿದ್ದು ನಿಮಗೆ ಅಪ್ಲಿಕೇಶನ್ ಹಾಕುವುದರಲ್ಲಿ ಯಾವುದಾದರೂ ಸಮಸ್ಯೆ ಎದುರಾದರೆ ಅಥವಾ ಅರ್ಜಿ ಸಲ್ಲಿಸಿಯು ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗದೆ ಇದ್ದರೆ ಕೂಡಲೇ ಅವರನ್ನು ಭೇಟಿ ಮಾಡಿ ನಿಮ್ಮ ತಾಂತ್ರಿಕ ಸಮಸ್ಯೆಯ ಕುರಿತು ಮಾಹಿತಿ ತಿಳಿದು ಅದನ್ನು ಬಗ್ಗೆ ಹರಿಸಿಕೊಳ್ಳಿ.

ಹೀಗೆ ಮಾಡಿದ್ರೆ ಎಲ್ಲಾ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆಯಾಗುತ್ತೆ!

ಸಾಕಷ್ಟು ಮಹಿಳೆಯರಿಗೆ ಆರಂಭಿಕ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗಿರುತ್ತದೆ. ಆದರೆ 6, 7 ಮತ್ತು 8ನೇ ತಿಂಗಳಿನ ಹಣ ವರ್ಗಾವಣೆಯಾಗಿಲ್ಲ ಎಂದಾದರೆ, ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ(Post Office) ಹೊಸ ಖಾತೆಯನ್ನು ತೆರೆದು ಗೃಹಲಕ್ಷ್ಮಿ ಯೋಜನೆಯಲ್ಲಿ ಅದನ್ನು ಅಪ್ಡೇಟ್ ಮಾಡುವುದರಿಂದ ಉಳಿದ ಕಂತಿನ ಮೊತ್ತ ನಿಮ್ಮ ಖಾತೆಯನ್ನು ಸೇರುತ್ತದೆ. ರಾಜ್ಯ ಸರ್ಕಾರ (State Government) ಹೊರಡಿಸಿರುವಂತಹ ಮಾಹಿತಿಯ ಪ್ರಕಾರ, ಈ ಬಾರಿ ಗೃಹಲಕ್ಷ್ಮಿ ಯೋಜನೆಯ ಸಲುವಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಲಾಗಿದ್ದು, ಅರ್ಜಿ ಸಲ್ಲಿಸಿರುವ ಎಲ್ಲ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ.

advertisement

Leave A Reply

Your email address will not be published.