Karnataka Times
Trending Stories, Viral News, Gossips & Everything in Kannada

Prime Minister: ಸರ್ಕಾರಿ ಕಚೇರಿಗಳಲ್ಲಿ ಬೇಕಂತಲೇ ನಿಮ್ಮ ಕೆಲಸವನ್ನು ವಿಳಂಬ ಮಾಡುತ್ತಿದ್ದಾರಾ? ಹೀಗೆ ಮಾಡಿದ್ರೆ ನೇರವಾಗಿ ಪ್ರಧಾನಿಗೆ ಕಂಪ್ಲೇಂಟ್ ಹೋಗುತ್ತೆ!

advertisement

Write to PM: ಯಾವುದಾದರೂ ವ್ಯಕ್ತಿ ನಿಮಗೆ ತೊಂದರೆ ಕೊಡುತ್ತಿದ್ದರೆ? ಅಥವಾ ಭಾರತದ ಸರ್ಕಾರಿ ವಿಭಾಗಗಳು ನಿಮ್ಮ ಕೆಲಸವನ್ನು ವಿಳಂಬ ಮಾಡುತ್ತಿದ್ದರೆ ನೀವು ಇದರ ದೂರನ್ನು ನೇರವಾಗಿ ಪ್ರಧಾನಮಂತ್ರಿಯವರಿಗೆ ತಲುಪಿಸಬಹುದು. ಹೌದು ಗೆಳೆಯರೇ ಸರ್ಕಾರವು ಸಾರ್ವಜನಿಕರ (Public) ಸುರಕ್ಷತೆ ಹಾಗೂ ಸರ್ಕಾರಿ ಕಚೇರಿಗಳಿಂದ ಗುಣಮಟ್ಟ ಸೌಲಭ್ಯವನ್ನು ಒದಗಿಸಿ ಕೊಡುವ ಸಲುವಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ.

ಅದರಲ್ಲಿ ಈ ಯೋಜನೆಯೂ ಒಂದಾಗಿದ್ದು, ನೀವು ನೇರವಾಗಿ ಪ್ರಧಾನಮಂತ್ರಿಯವರಿಗೆ ಪತ್ರ ಬರೆಯುವ (Write To PM) ಮೂಲಕ ನಿಮ್ಮ ಸಮಸ್ಯೆಗೆ ವೇಗವಾದ ಹಾಗೂ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದ್ರೆ ಈ ಕೆಲಸ ಮಾಡುವುದು ಹೇಗೆ? ದೂರು ಸಲ್ಲಿಸುವ ಕ್ರಮ ಹೇಗಿದೆ? ಹಾಗೂ ಅದಕ್ಕೆ ಎಷ್ಟು ದಿನಗಳೊಳಗೆ ಪ್ರತಿಕ್ರಿಯೆ ಲಭಿಸುತ್ತದೆ? ಎಂಬ ಎಲ್ಲಾ ವಿವರವನ್ನು ಈ ಲೇಖನದ ಮುಖಾಂತರ ತಿಳಿಯಿರಿ.

ಸರ್ಕಾರದ ಹೊಸ ನಿಯಮದಿಂದ ಸಾರ್ವಜನಿಕರಿಗೆ ಸಾಕಷ್ಟು ಸೌಲಭ್ಯ:

 

Image Source: The Caravan

 

ಎಷ್ಟೇ ಕಾನೂನು ಬದ್ಧ ನಿಯಮಗಳು ಜಾರಿಗೆ ಬಂದರೂ ಕೂಡ ಕೆಲವೊಮ್ಮೆ ಅಧಿಕಾರದಲ್ಲಿರುವವರು ತಮ್ಮ ಬೇಜವಾಬ್ದಾರಿತನದಿಂದಲೋ ಅಥವಾ ದುರಾಸೆಯಿಂದಾಗಿಯೂ ಆ ನಿಯಮಗಳನ್ನು ಮರೆಯುತ್ತಲೇ ಇರುತ್ತಾರೆ. ಅದರಂತೆ ಸರ್ಕಾರಿ ಕೆಲಸದಲ್ಲಿ ಇರುವಂತಹ ಉದ್ಯೋಗಿಗಳು (Government Officials) ಕೆಲವೊಮ್ಮೆ ಬೇಕು ಬೇಕಂತಲೇ ನಮ್ಮ ಕೆಲಸಗಳನ್ನು ನಿಯಮದ ಅನುಸಾರ ಬೇಗ ಮಾಡಿ ಮುಗಿಸದೆ ಬೇಕಂತಲೇ ವಿಳಂಬಗೊಳಿಸುತ್ತಾ ನಮ್ಮನ್ನು ಕಾಯಿಸುತ್ತಿರುತ್ತಾರೆ.

advertisement

ಇನ್ಮುಂದೆ ನೇರವಾಗಿ ಪ್ರಧಾನಮಂತ್ರಿಗೆ ದೂರು ನೀಡಿ:

 

Image Source: The Economic Times

 

ನಿಮ್ಮ ಕಾರ್ಯವನ್ನು ಸಿದ್ಧಪಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ/ಬ್ಯಾಂಕ್ (Government Offices Or Bank) ಅಲೆದು ಅಲೆದು ಸಾಕಾಗಿದೆಯೇ? ಹಾಗಾದ್ರೆ ನಿಮ್ಮ ಕಷ್ಟವನ್ನು ನೇರವಾಗಿ ಪ್ರಧಾನ ಮಂತ್ರಿ (Prime Minister) ಅವರ ಬಳಿ ಹೇಳಿ ದೂರು ದಾಖಲಿಸಬಹುದು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರ್ಕಾರವು (Government) ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಯಾವುದೇ ಸರ್ಕಾರಿ ಕಚೇರಿಗಳಿಂದ ಅಥವಾ ಯಾವುದಾದರೂ ವ್ಯಕ್ತಿಯಿಂದ ನಿಮಗೆ ತೊಂದರೆಯಾಗುತ್ತಿದ್ದರೆ ಅದನ್ನು ನೀವು ನೇರವಾಗಿ ಪ್ರಧಾನಮಂತ್ರಿಯವರಿಗೆ ತಿಳಿಸಿ ದೂರನ್ನು ದಾಖಲಿಸಬಹುದು. ನಿಮ್ಮ ದೂರಿಗೆ ಕೆಲವೇ ಕೆಲವು ದಿನಗಳಲ್ಲಿ ಪ್ರತಿಕ್ರಿಯೆಯು ದೊರಕುತ್ತದೆ.

ದೂರು ನೀಡಲು ಅನುಸರಿಸಬೇಕಾದ ಕ್ರಮಗಳು:

  • ಯಾವುದಾದರೂ ಸರ್ಕಾರಿ ಕಚೇರಿಗಳಲ್ಲಿ ನಿಮ್ಮ ಕೆಲಸವನ್ನು ಬೇಕಂತಲೇ ವಿಳಂಬ ಮಾಡುತ್ತಿದ್ದರೆ ನೀವು ನೇರವಾಗಿ ಪ್ರಧಾನಮಂತ್ರಿಯವರಿಗೆ ದೂರು ನೀಡಬಹುದು.
  • ಅದಕ್ಕಾಗಿ www.pmindia.gov.in ಎಂಬ ವೆಬ್ಸೈಟ್ಗೆ ಹೋಗಿ ಸ್ವಲ್ಪ ಕೆಳಗೆ ಸ್ಕ್ರೋಲ್ ಮಾಡುತ್ತಾ ಬಂದರೆ ಇಂಟರಾಕ್ಟ್ ವಿಥ್ ಪಿಎಂ (Interact With PM) ಎಂಬ ಆಯ್ಕೆ ಇರುತ್ತದೆ.
  • ಅಲ್ಲಿ ‘ಪ್ರಧಾನಮಂತ್ರಿಗೆ ಪತ್ರ ಬರೆಯಿರಿ (Write to PM) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ದೂರಿನ ಎಲ್ಲ ಮಾಹಿತಿಯನ್ನು ಅದರಲ್ಲಿ ಭರ್ತಿ ಮಾಡಿ ಸಲ್ಲಿಸಿ.
  • ಇದಾದ ಕೆಲವೇ ಕೆಲವು ನಿಮಿಷಗಳೊಳಗೆ ನಿಮ್ಮ ಮೊಬೈಲ್ ಸಂಖ್ಯೆಗೆ (Mobile Number) ನಿಮ್ಮ ಹೆಸರಿನೊಂದಿಗೆ ನೀವು ನೀಡಿರುವಂತಹ ದೂರಿನ ಮಾಹಿತಿಯ ಸಂದೇಶವನ್ನು ಬರುತ್ತದೆ.
  • ಇದಾದ ಸ್ವಲ್ಪ ದಿನಗಳೊಳಗೆ ಪ್ರಧಾನಮಂತ್ರಿಯವರು ನೇರವಾಗಿ ಸಮಾಜದಿಂದ ನಿಮಗೆ ಎದುರಾಗುತ್ತಿರುವಂತಹ ಸಮಸ್ಯೆಯ ಕುರಿತು ಪರಿಶೀಲನೆ, ತನಿಖೆ ನಡೆಸಿ ಅದಕ್ಕೆ ಪರಿಹಾರವನ್ನು ಕೊಡಿಸುತ್ತಾರೆ.

advertisement

Leave A Reply

Your email address will not be published.