Karnataka Times
Trending Stories, Viral News, Gossips & Everything in Kannada

Profitable Crop: ಅಡಿಕೆ ಅಲ್ಲ ವರ್ಷಪೂರ್ತಿ ಆದಾಯ ಕೊಡುವ ಈ ಬೆಳೆ ಬೆಳೆದು ಭರ್ಜರಿ ಆದಾಯ ಗಳಿಸಿದ ರೈತ

advertisement

ಭಾರತದಲ್ಲಿ ಕೃಷಿಗೆ ಹೆಚ್ಚಿನ ಪ್ರಶಾಸ್ತ್ಯವನ್ನು ನೀಡಲಾಗುತ್ತದೆ. ಇಲ್ಲಿ ಕೃಷಿ ಮಾಡಿಯೇ ಬದುಕು ಸಾಗಿಸುವವರು ಹೆಚ್ಚು.‌ ಒಂದೆಡೆ ಅಡಿಕೆ, ಬಾಳೆ ಬೆಳೆದರೆ ಇನ್ನೊಂದೆಡೆ ತರಕಾರಿ,ಹಣ್ಣುಗಳನ್ನು ಬೆಳೆದು ಲಾಭ ಗಳಿಸುವ ರೈತರು ಹೆಚ್ಚು ಇದ್ದಾರೆ. ಈ ಬೇಸಿಗೆ ಸಂದರ್ಭದಲ್ಲಿ ಹಣ್ಣುಗಳಿಗೆ ವಿಶೇಷ ರೀತಿಯ ಬೇಡಿಕೆ ಇದೆ.ಹಾಗಾಗಿ ಹಣ್ಣು, ತರಕಾರಿ ಬೆಳೆಯುವ ರೈತರು ಕೂಡ ಹೆಚ್ಚಾಗಿಯೇ‌ ಇದ್ದಾರೆ. ಅದರಲ್ಲಿ ನಿಂಬೆ ಹಣ್ಣು (Lemon Fruit) ಬಹುತೇಕ ಜನರು ಉಪಯೋಗಿಸುತ್ತಾರೆ. ಜ್ಯೂಸ್ ನಿಂದ ಹಿಡಿದು ಧಾರ್ಮಿಕ ‌ಕೆಲಸ ಗಳಿಗೂ ನಿಂಬೆ ಹಣ್ಣು ಬಹಳ ಪ್ರಾಮುಖ್ಯ ಪಡೆದಿದೆ. ಈ ಬೆಳೆಯನ್ನು ಬೆಳೆದು ಸಹ ಲಾಭ ಗಳಿಸಿದ ರೈತರು ಇದ್ದಾರೆ. ಹಾಗಿದ್ದಲ್ಲಿ ಈ ಬೆಳೆ ಯ ಬೆಲೆ ಎಷ್ಟು? ಯಾವ ರೀತಿ ಕೃಷಿ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

ಕಡಿಮೆ ವರ್ಷಕ್ಕೆ ಇಳುವರಿ:

ಈ ನಿಂಬೆ (Lemon) ಗಿಡಗಳು ನಾಟಿ ಮಾಡಿದ ಕಡಿಮೆ ವರ್ಷಕ್ಕೆ ಇಳುವರಿ ನೀಡುತ್ತದೆ. ಇದರ ಕೆಲಸ ನಿರ್ವಹಣೆ ಕೂಡ ಸುಲಭ ವಾಗಿದ್ದು ಉತ್ತಮ ಇಳುವರಿ ಪಡೆಯಬಹುದು.ಇದಕ್ಕೆ ಕೇವಲ ಡಾ ಸಾಯಿಲ್ ಗೊಬ್ಬರ ಬಳಕೆ ಮಾಡಿದರೆ ಸಾಕು.ಹೆಚ್ಚಿನ ಇಳುವರಿ ನೀಡಲಿದೆ, ಪ್ರತಿ ಹಣ್ಣುಗಳನ್ನು ನಾಲ್ಕರಿಂದ ಐದು ರೂಪಾಯಿಗೆ ಮಾರಾಟ ಆಗುತ್ತದೆ. ಮಾರ್ಚ್ ಏಪ್ರಿಲ್‌ ತಿಂಗಳ ವೇಳೆಗೆ ಪ್ರತೀ ಹಣ್ಣುಗಳು ಆರರಿಂದ ಹತ್ತು ರೂಪಾಯಿಗೆ‌ ಒಂದರಂತೆ ಮಾರಾಟವಾಗುತ್ತದೆ.

ಇತರ ಪ್ರದೇಶದಲ್ಲೂ ಬೇಡಿಕೆ:

 

Image Source: Nava Durga Party Venue

 

advertisement

ಈ ನಿಂಬೆ ಹಣ್ಣಿಗೆ (Lemon Fruit) ಇತರ ಪ್ರದೇಶ ದಲ್ಲೂ ಬೇಡಿಕೆ ಇದೆ. ಬೆಳೆದ ಹಣ್ಣುಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವುದು ಕಡಿಮೆ ಯಾದರು ಬೆಂಗಳೂರು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಇತ್ಯಾದಿ ಮಾರುಕಟ್ಟೆ ಗಳಿಗೆ ಸಾಗಿಸುತ್ತಾರೆ. ಚಳಿಗಾಲದಲ್ಲಿ ಹೂ ಬಿಟ್ಟು ಕಾಯಾಗಿ ಬೇಸಿಗೆ ವೇಳೆಗೆ ಕಡಿಮೆಯಾಗುವ ಲಿಂಬೆ ಹಣ್ಣಿಗೆ ಬೇಸಿಗೆಗೆ ಒಳಿತು. ಶುಭ ಸಮಾರಂಭಗಳಲ್ಲಿ ಶರಬತ್‌,ಪಾನಕ,ಉಪ್ಪಿನಕಾಯಿಗೆ ಹೀಗೆ ಬಳಕೆಯಾಗುತ್ತಿದೆ.

ಹೇಗೆ ಬೆಳೆಯಬೇಕು?

ನಿಂಬೆ ಬೆಳೆಯಲು ನಾಟಿಗೆ ಬೀಜದಿಂದ ತಯಾರಿಸಿದ ಗಿಡಗಳನ್ನು ಆಯ್ದುಕೊಳ್ಳುವುದು ಉತ್ತಮ ಎನ್ನುತ್ತಾರೆ. ನೆಲದೊಳಗೆ ಕನಿಷ್ಠ ಒಂದು ಅಡಿ ಆಳದಲ್ಲಿ ಸಸಿಗಳನ್ನು ನೆಟ್ಟು 6 ಮತ್ತು 7 ರ ನಡುವೆ pH ಹೊಂದಿರುವ ಮಣ್ಣಿನಲ್ಲಿ ನಿಂಬೆ ಬೆಳೆಯಬೇಕು. ಒಂದು ನಿಂಬೆ ಗಿಡ ನೆಟ್ಟರೆ ಕನಿಷ್ಠ 50 ವರ್ಷದವರೆಗೆ ಇಳುವರಿ ಪಡೆಯಬಹುದು. ಬೇಕಾದ ಪ್ರಮಾಣದ ನೀರು ಮತ್ತು ಗೊಬ್ಬರ ನೀಡಿದರೆ ಸಾಕು.

ಇಳುವರಿ ಹೇಗೆ?

 

Image Source: YT-Complete Agriculture

 

ಬೆಲೆ ಏರಿಕೆ ಆಗಿದ್ದರೂ ನಿಂಬೆ ಹಣ್ಣು (Lemon Fruit) ಖರೀದಿ ಮಾಡುವ ಗ್ರಾಹಕರ ಉತ್ಸಾಹ ಕಡಿಮೆ ಆಗಿಲ್ಲ. ರೈತರು ಸುಮಾರು 300 ಗಿಡಗಳನ್ನು ಖರೀದಿಸಿ ತಮ್ಮ ಒಂದು ಎಕರೆ ಜಮೀನಿನಲ್ಲಿ ನಿಂಬೆ ಕೃಷಿ ಆರಂಭಿಸಿದರೆ ಒಂದು ಬಾರಿ ಗಿಡ ನೆಟ್ಟರೆ 20 ವರ್ಷಗಳವರೆಗೆ ಇಳುವರಿ‌ ನೀಡಲಿದ್ದು, ಪ್ರತಿ ಮರದಿಂದ 25ರಿಂದ 30 ಕೆ.ಜಿ ಹಣ್ಣು ಸಿಗಲಿದ್ದು ಉತ್ತಮ ಇಳುವರಿ ಪಡೆಯಬಹುದು.

advertisement

Leave A Reply

Your email address will not be published.