Karnataka Times
Trending Stories, Viral News, Gossips & Everything in Kannada

Cash Deposit Limit: ದೇಶದ ಯಾವುದೇ ಬ್ಯಾಂಕ್ ನಲ್ಲಿ ಎಷ್ಟು ಹಣ ಮ್ಯಾಕ್ಸಿಮಮ್ ಇಡಬಹುದು! ಆದಾಯ ಇಲಾಖೆ ಹೊಸ ಸೂಚನೆ

advertisement

ಇಂದು ಡಿಜಿಟಲಿಕರಣ ಬೆಳೆದಂತೆ ಹಣಕಾಸಿನ‌ ವಹಿವಾಟು ಮಾಡೋದು ಸಹ ಸುಲಭ ವಾಗಿ‌ ಬಿಟ್ಟಿದೆ. ಜನರು ಡಿಜಿಟಲ್ ಪಾವತಿಗೆ ಹೆಚ್ಚಿನ ಒತ್ತನ್ನು ಸಹ ನೀಡುತ್ತಾರೆ. ಮನೆಯಲ್ಲೆ ಕುಳಿತು ಗೂಗಲ್ ಪೇ (Google Pay), ಪೋನ್ ಪೇ (Phone Pe) ಬಳಕೆ ಇತ್ಯಾದಿಗಳ ವಹಿವಾಟು ಮಾಡಿ ಬಳಕೆ ಕೂಡ ಹೆಚ್ಚಾಗಿದೆ. ಅದೇ ರೀತಿ ಇಂದು ಹಣದ ವಹಿವಾಟು ಗಳು (Money Transactions) ಹೆಚ್ಚಾಗಿದ್ದು ಹಣದ ಮಿತಿಯ ಬಗ್ಗೆಯು ಅರ್ ಬಿ ಐ (RBI) ಬ್ಯಾಂಕ್ ಗಳಿಗೆ ನಿಯಮ ಹೊರಡಿಸುತ್ತಲೇ ಇರುತ್ತದೆ.

ಗ್ರಾಹಕರಿಗೆ ನೋಟಿಸ್ ಬರಲಿದೆ:

ಬ್ಯಾಂಕ್ ಹಣದ ವಹಿವಾಟಿ (Cash Deposit Limit) ನಲ್ಲಿ ಅಸಮರ್ಪಕತೆ ಇದೆ, ನಿಯಮ ವನ್ನು‌ ನೀವು ಪಾಲಿಸಿಲ್ಲ ಎಂದಾಗ ತಕ್ಷಣ ನೋಟಿಸ್ ಕೂಡ ಬರಲಿದೆ. ಇಂದು ಹಣದ ವಹಿವಾಟು ಮಾಡಬೇಕಾದರೆ ಈಗ ನಮ್ಮ ಮೂಲ ದಾಖಲೆಗಳಾದ ಆಧಾರ್ ಕಾರ್ಡ್(Aadhaar Card), ಪಾನ್ ಕಾರ್ಡ್ (PAN Card) ಇತ್ಯಾದಿ ದಾಖಲೆಗಳು ಎಲ್ಲಾ ಕಡೆ ಲಿಂಕ್ ಆಗಿರುವುದರಿಂದ ಯಾವುದೇ ಹಣಕಾಸಿನ ವಿವರದ ಬಗ್ಗೆ ‌ತಪ್ಪು ಮಾಹಿತಿ ನೀಡಿದಲ್ಲಿ ಬೇಗನೆ ತಿಳಿಯಲಿದೆ.

ಹೆಚ್ಚು ವಹಿವಾಟು ಮಾಡುವಂತಿಲ್ಲ:

 

advertisement

Image Source: Mas Service

 

  • ಇಂದು‌ ದೊಡ್ಡ ಮೊತ್ತದ ಹಣಕಾಸಿನ ವಹಿವಾಟು ಮಾಡಬೇಕಾದರೆ ‌ ನಮ್ಮ ಪಾನ್ ಕಾರ್ಡ್, ಆಧಾರ್ ಕಾರ್ಡ್ ದಾಖಲೆ ಕಡ್ಡಾಯ ವಾಗಿ ಬೇಕು.ಒಂದು ಆರ್ಥಿಕ ವರ್ಷದಲ್ಲಿ 10 ಲಕ್ಷ ರೂ. ಮೀರಬಾರದು. ಪ್ರತಿ ಬಾರಿ ನೀವು 50 ಸಾವಿರಕ್ಕಿಂತ ಹೆಚ್ಚು ಠೇವಣಿ ಇಟ್ಟರೆ ಇದಕ್ಕೆ ಪ್ಯಾನ್ ಕಾರ್ಡ್ ಅನ್ನು ಕಡ್ಡಾಯವಾಗಿ ನೀಡಬೇಕು.
  • ಒಂದು ಆರ್ಥಿಕ ವರ್ಷದಲ್ಲಿ ಸಂಬಳದ ಹೊರತಾಗಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದಲ್ಲಿ ಇದರ ಬಗ್ಗೆ ಸೂಕ್ತ ಕಾರಣಗಳನ್ನು ನೀಡಬೇಕು.ನಮ್ಮ ಸೇವಿಂಗ್ಸ್ ಅಕೌಂಟ್ ನಲ್ಲಿ‌ ಹೆಚ್ಚಿನ ಹಣಕಾಸಿನ ವಹಿವಾಟುಗಳು ಕಂಡು ಬಂದಲ್ಲಿ ತೆರಿಗೆ ಇಲಾಖೆ ನಮಗೆ ನೋಟಿಸ್ ನೀಡಬಹುದು.
  • ನೀವು ಆದಾಯ ತೆರಿಗೆ ರಿಟರ್ನ್ಸ್‌ (ITR) ಸಲ್ಲಿಕೆ ಮಾಡದಿದ್ದಲ್ಲಿ‌, ವಾರ್ಷಿಕ 20 ಲಕ್ಷಕ್ಕಿಂತ ಹೆಚ್ಚು ಹಣ ಹಿಂಪಡೆದರೆ, 2% TDS ಅನ್ವಯವಾಗಲಿದೆ.
  • ಇನ್ನು ಆಸ್ತಿಗಳ ಖರೀದಿ ಅಥವಾ ಮಾರಾಟ ಇತ್ಯಾದಿಗಳ 30 ಲಕ್ಷ ರೂ.ಗಿಂತ ಹೆಚ್ಚಿನ ನಗದು ವಹಿವಾಟು ಮಾಡಿದ್ದಲ್ಲಿ‌ ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಪರಿಶೀಲನೆ ಕೂಡ ಮಾಡಲಿದೆ.
  • ನೀವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ 1 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿದರೆ, ಈ ಬಗ್ಗೆ ಕಾರಣ ತಿಳಿಸಬೇಕಾಗುತ್ತದೆ
  • ಯಾವುದೇ ಸಾಲ ಅಥವಾ ಠೇವಣಿಗಾಗಿ ಒಬ್ಬ ವ್ಯಕ್ತಿ 20,0 00 ರೂಗಿಂತ ಹೆಚ್ಚಿನ ಮೊತ್ತದ ನಗದು ಹಣವನ್ನು ಸ್ವೀಕರಿಸುವಂತಿಲ್ಲ

SBI ಯಲ್ಲಿ ನೀವು ಎಷ್ಟು ಹಣ ಡೆಪಾಸಿಟ್ ಮಾಡಬಹುದು:

ಇಲ್ಲಿ ಸಾಮಾನ್ಯ ಜನರಿಗೆ ಒಂದು ಆರ್ಥಿಕ ವರ್ಷದಲ್ಲಿ 10,000 ರೂ. ಗಳನ್ನು SBI ಯಲ್ಲಿ ಇಡಲು ತೆರಿಗೆ ವಿನಾಯಿತಿ ಇರಲಿದ್ದು ಅದೇ ರೀತಿ ಹಿರಿಯ ನಾಗರಿಕರಿಗೆ ಈ ಮಿತಿ 50,000 ಕ್ಕೆ ಹೆಚ್ಚಿಸಲಾಗಿದೆ. ಇದನ್ನು ಬಿಟ್ಟು SBI ಯಲ್ಲಿರುವ ಇತರ ಮೊತ್ತಕ್ಕೆ ತೆರಿಗೆ ಮೊತ್ತ ಅನ್ವಯ ವಾಗಲಿದೆ. ಇನ್ನು‌ ಸೇವಿಂಗ್ಸ್ ಖಾತೆಯಲ್ಲಿ ಸುಮಾರು 10 ಕೋಟಿ ಹಣ ಇದೆ ಎಂದಾದಲ್ಲಿ ಇದು ಕೂಡ ತೆರಿಗೆ ಇಲಾಖೆ ಪರಿಶೀಲನೆ ‌ಮಾಡಲಿದೆ.

advertisement

Leave A Reply

Your email address will not be published.