Karnataka Times
Trending Stories, Viral News, Gossips & Everything in Kannada

Google Pay: ಗೂಗಲ್ ಪೇ ಬಳಸುವವರಿಗೆ ಮಹತ್ವದ ಸುದ್ದಿ, ಈ ತಿಂಗಳಿಂದ ಬಂದ್ ಆಗಲಿದೆ ಗೂಗಲ್ ಪೇ!

advertisement

ಆನ್ಲೈನ್ ವಾಹಿವಾಟಿಗಾಗಿ ಸಾಮಾನ್ಯವಾಗಿ ನಾವು ಯುಪಿಐ ಪೇಮೆಂಟ್ ಅನ್ನು ಅವಲಂಬಿಸಿದ್ದೇವೆ. ಇನ್ನು ಯುಪಿಐ ಪೇಮೆಂಟ್ ಮಾಡಿಕೊಳ್ಳಲು ಬೇರೆ ಬೇರೆ ರೀತಿಯ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನು (Third Party Apps) ಬಳಸುತ್ತೇವೆ. ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚಾಗಿ Google Pay ಅಪ್ಲಿಕೇಶನ್ ಅನ್ನು ಪಾವತಿಗಾಗಿ ಹಾಗೂ ಇತರ ಹಣಕಾಸಿನ ವಹಿವಾಟಿಗಾಗಿ ಬಳಸಿಕೊಳ್ಳುತ್ತಿದ್ದೇವೆ.

ಈ ಅಪ್ಲಿಕೇಶನ್ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಸಿಂಗಾಪೂರ್, ಅಮೆರಿಕ ಮೊದಲಾದ ರಾಷ್ಟ್ರಗಳಲ್ಲಿಯೂ ಕೂಡ ಬಳಕೆ ಆಗುತ್ತಿದೆ. ಆದರೆ ಜಿಪೇಗೆ ಸಂಬಂಧಪಟ್ಟ ಹಾಗೆ ಈಗ ಮಹತ್ವದ ಮಾಹಿತಿ ಒಂದು ಬಿಡುಗಡೆ ಆಗಿದ್ದು, ಇದು ಹಣಕಾಸು ವರ್ಗಾವಣೆಗೆ ಬಳಕೆ ಆಗುತ್ತಿರುವ ಹಳೆಯ ಆವೃತ್ತಿ ಆಗಿದೆ ಹಾಗಾಗಿ ಈ ಅಪ್ಲಿಕೇಶನ್ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸ್ಥಗಿತಗೊಳ್ಳಲಿದಿಯಾ Google Pay ಅಪ್ಲಿಕೇಶನ್?

 

advertisement

 

ಮುಂದಿನ ಜೂನ್ 4, 2024 ರಿಂದ Google Pay ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಹಾಗಂದ ಮಾತ್ರಕ್ಕೆ ನೀವು ಚಿಂತೆ ಪಡುವ ಅಗತ್ಯವಿಲ್ಲ. ಸದ್ಯ ಭಾರತ ಹಾಗೂ ಸಿಂಗಾಪೂರದಲ್ಲಿ ಈ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಜೀಪೇ ಅಪ್ಲಿಕೇಶನ್ ಜೂನ್ 4, 2024 ರಿಂದ ಅಮೇರಿಕಾದಲ್ಲಿ ಸ್ಥಗಿತಗೊಳ್ಳಲಿದೆ. ಹೌದು Stand Alone Google Pay Application ಅನ್ನು ಅಮೆರಿಕ ಹಳೆಯ ಆವೃತ್ತಿ ಎಂದು ನಿರ್ಧರಿಸಿದ್ದು ಅದರ ಸೇವೆ ಸ್ಥಗಿತಗೊಳಿಸಲು ಮುಂದಾಗಿದೆ.

ಸ್ಥಗಿತಗೊಳ್ಳಲಿದೆ Peer-to-Peer Payment:

ಗೂಗಲ್ ಪೀರ್ 2ಪಿರ್ ಪಾವತಿಯನ್ನು ಸಹ ನಿಲ್ಲಿಸಲಿದೆ. ಅಮೆರಿಕದಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಬಳಕೆ ನಿಲ್ಲಿಸಿದ ಬಳಿಕ, ನೀವು ಅಮೆರಿಕದಲ್ಲಿ ಇರುವವರಿಗೆ ಜಿಪೆ ಮೂಲಕ ಹಣ ಕಳುಹಿಸುವುದು ಅಥವಾ ಅಲ್ಲಿಂದ ಸ್ವೀಕರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ Google Pay ಬಳಕೆದಾರರಿಗೆ ಕಂಪನಿ, Google wallet ಅಪ್ಲಿಕೇಶನ್ ಗೆ ಬದಲಾಗಲು ಸೂಚನೆ ನೀಡಿದೆ. ಗೂಗಲ್ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಹೊಸ ಅಪ್ಡೇಟ್ ಗಳನ್ನು ನೀಡಲು ಬದ್ಧವಾಗಿದ್ದು, ಇದೀಗ ಪೇಮೆಂಟ್ ಅಪ್ಲಿಕೇಶನ್ ಕೂಡ ನವೀಕರಿಸಲಾಗುವುದು.

advertisement

Leave A Reply

Your email address will not be published.