Karnataka Times
Trending Stories, Viral News, Gossips & Everything in Kannada

Google Pay: ಹೆಚ್ಚಾಗಿ ಗೂಗಲ್ ಪೇ ಬಳಸುವವರಿಗೆ ಆಘಾತ! ಹೊಸ ನಿಯಮ ಜಾರಿಗೆ

advertisement

ಇಂದು ಬಹುತೇಕ ಎಲ್ಲರೂ ಯುಪಿಐ (UPI) ಮೂಲಕವೇ ಪೇಮೆಂಟ್ ಮಾಡುತ್ತಾರೆ. ಯುಪಿಐ ಪೇಮೆಂಟ್ (UPI Payment) ಮಾಡಲು ಬೇರೆ ಬೇರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಬಳಸಲಾಗುತ್ತದೆ ಅಂತಹ ಅಪ್ಲಿಕೇಶನ್ ಗಳಲ್ಲಿ ಗೂಗಲ್ ಪೇ (Google Pay) ಕೂಡ ಒಂದು. ಅತ್ಯಂತ ನಂಬಿಕಾರ್ಹ ಹಾಗೂ ಬಹಳ ವೇಗವಾಗಿ ಕೆಲಸ ಮಾಡುವಂತಹ ಗೂಗಲ್ ಪೇ ಅಪ್ಲಿಕೇಶನ್ ನಿಂದ ಬಳಕೆದಾರರಿಗೆ ಶಾಕಿಂಗ್ ಸುದ್ದಿ ಒಂದು ಸಿಕ್ಕಿದೆ.

Google Pay ವ್ಯವಹಾರಕ್ಕೆ ಪಾವತಿಸಬೇಕು ಹೆಚ್ಚುವರಿ ಶುಲ್ಕ:

ದೇಶದಿಂದ ಕೋಟ್ಯಾಂತರ ಗೂಗಲ್ ಪೇ (Google Pay) ಬಳಕೆದಾರರು ಇದ್ದಾರೆ ಈಗ ಗೂಗಲ್ ಪೇ ಮೂಲಕ ಹಣಕಾಸಿನ ವ್ಯವಹಾರ ಮಾಡುವವರಿಗೆ ಶಾಕಿಂಗ್ ಸುದ್ದಿ ಒಂದನ್ನು ಗೂಗಲ್ ಪೇ ನೀಡಿದೆ. ಗೂಗಲ್ ಪೇ ಮೂಲಕ ಸುಲಭವಾಗಿ ಮೊಬೈಲ್ ರೀಚಾರ್ಜ್ (Mobile Recharge) ಹಾಗೂ ಇತರ ಬಿಲ್ (Bill) ಪಾವತಿ ಕೂಡ ಮಾಡಬಹುದು ಆದರೆ ಇನ್ನು ಮುಂದೆ ಮೊಬೈಲ್ ರೀಚಾರ್ಜ್ ಮಾಡುವುದಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವುದಾಗಿ ಗೂಗಲ್ ತಿಳಿಸಿದೆ.

Paytm ಈಗಾಗಲೇ ಹೆಚ್ಚುವರಿ ಶುಲ್ಕ ವಿಧಿಸಿದೆ:

ಪೇಟಿಎಂ (Paytm) ಹಾಗೂ ಫೋನ್ ಪೇ (Phone Pe) ಅಪ್ಲಿಕೇಶನ್ಗಳು ಈಗಾಗಲೇ ಪ್ರಿಪೇಯ್ಡ್ ಮೊಬೈಲ್ ರಿಚಾರ್ಜ್ (Prepaid Mobile Recharge) ಗೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿದೆ. ಇದೀಗ ಗೂಗಲ್ ಪೇ ಕೂಡ ಇದೇ ಮಾರ್ಗದಲ್ಲಿ ಮುಂದುವರೆಯುತ್ತಿದ್ದು ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸಲು ಮುಂದಾಗಿದೆ.

 

advertisement

ದೇಶದ ಎರಡನೇ ಅತಿದೊಡ್ಡ ಪೇಮೆಂಟ್ ಅಪ್ಲಿಕೇಶನ್:

ಗೂಗಲ್ ಪೇ ಈಗ Gpay ಎಂದು ಫೇಮಸ್ ಆಗಿದೆ. ಹೊಸ ಹೆಸರಿನ ಬದಲಾವಣೆಯ ಮೂಲಕ ದೇಶದಲ್ಲಿ ಆರು ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿರುವ ಗೂಗಲ್ ಪೇ ದೇಶದ ಎರಡನೆಯ ಅತಿ ದೊಡ್ಡ ಪೇಮೆಂಟ್ ಅಪ್ಲಿಕೇಶನ್ ಎನಿಸಿದೆ. ಇದೀಗ ಮೊಬೈಲ್ ರೀಚಾರ್ಜ್ ಮೇಲೆ ಅತಿ ಕಡಿಮೆ ಶುಲ್ಕವನ್ನು ಗೂಗಲ್ ಪೇ ವಿಧಿಸಿದ್ದು ಇದನ್ನು Convenience Fee ಎಂದು ಪರಿಗಣಿಸಲಾಗಿದೆ.

ಮೊಬೈಲ್ ರೀಚಾರ್ಜ್ಗೆ ಎಷ್ಟು ಶುಲ್ಕ ವಿಧಿಸಲಾಗಿದೆ?

ವರದಿಯ ಪ್ರಕಾರ ಗೂಗಲ್ ಪೇ ಮೂಲಕ ಮೊಬೈಲ್ ರಿಚಾರ್ಜ್ ಮಾಡಿದರೆ Convenience Fee ಎಂದು ಮೂರು ರೂಪಾಯಿಗಳ ವರೆಗೆ ಚಾರ್ಜ್ ಮಾಡಬಹುದು. ಗೂಗಲ್ ಪೇ ಸ್ಕ್ರೀನ್ ಶಾಟ್ ಒಂದನ್ನು ಶೇರ್ ಮಾಡಿದ್ದು ಒಂದು ಮೊಬೈಲ್ ರೀಚಾರ್ಜ್ ಪ್ಲಾನ್ 749 ರೂಪಾಯಿಗಳಾಗಿದ್ದರೆ ಅದಕ್ಕೆ ಹೆಚ್ಚುವರಿ ಶುಲ್ಕ ಮೂರು ರೂಪಾಯಿಗಳನ್ನು ಸೇರಿಸಿ 752 ರೂಪಾಯಿಗಳನ್ನು ಪಾವತಿಸಬೇಕು ಎಂದು ಹೇಳಲಾಗಿದೆ.

ಅದೇ ರೀತಿ 101 ರೂಪಾಯಿನಿಂದ 200 ರೂಪಾಯಿಗಳ ಮೊಬೈಲ್ ರಿಚಾರ್ಜ್ ಮೇಲೆ ಒಂದು ರೂಪಾಯಿ ಹೆಚ್ಚುವರಿ ಶುಲ್ಕ, 201 ರೂಪಾಯಿಗಳಿಂದ 300 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಮೊಬೈಲ್ ರಿಚಾರ್ಜ್ ಮೇಲೆ ಮೂರು ರೂಪಾಯಿಗಳನ್ನು ಹೆಚ್ಚುವರಿ ಶುಲ್ಕವಾಗಿ ಪಾವತಿಸಬೇಕು.

ಒಟ್ಟಿನಲ್ಲಿ ಯುಪಿಐ ಪೇಮೆಂಟ್ (UPI Payment) ಮಾಡಲು ಗೂಗಲ್ ಪೇ ಬಳಸಿಕೊಳ್ಳುವವರಿಗೆ ಹೆಚ್ಚುವರಿ ಶುಲ್ಕ ದೊಡ್ಡ ತಲೆನೋವಾಗಲಿದೆ. ಒಂದು ರಿಚಾರ್ಜ್ ಗೆ 3 ರೂಪಾಯಿಗಳ ವರೆಗೆ ಶುಲ್ಕ ಎಂದರೆ ನೀವು ಹೆಚ್ಚು ಮೊಬೈಲ್ ರಿಚಾರ್ಜ್ ಮಾಡಿದಷ್ಟು ಶುಲ್ಕ ಕೂಡ ಪ್ರತಿ ರಿಚಾರ್ಜ್ ಗೆ 3 ರೂಪಾಯಿಗಳಂತೆ ಹೆಚ್ಚು ಹಣವನ್ನು ಪಾವತಿ ಮಾಡಬೇಕಾಗುತ್ತದೆ ಪ್ರತಿ ರಿಚಾರ್ಜ್ ಮೇಲೆ ಕೂಡ ಹೆಚ್ಚುವರಿ ಹಣದ ಹೊರೆ ಆಗಬಹುದು.

advertisement

Leave A Reply

Your email address will not be published.