Karnataka Times
Trending Stories, Viral News, Gossips & Everything in Kannada

Aadhaar Card: ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕವನ್ನು ಎಷ್ಟು ಬಾರಿ ತಿದ್ದುಪಡಿಗೆ ಮಾಡಬಹುದು ಗೊತ್ತಾ?

advertisement

ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕೂಡ ಬಹಳ ಮುಖ್ಯವಾಗಿರುವ ಗುರುತಿನ ಚೀಟಿ ಆಧಾರ್ ಕಾರ್ಡ್ (Aadhaar Card). ಇದೀಗ ಆಧಾರ್ ಕಾರ್ಡ್ ಬಳಕೆದಾರರಿಗೆ ವಿಶಿಷ್ಟ ಗುರುತಿನ ಪ್ರಾಧಿಕಾರ ಹೊಸ ಅಪ್ಡೇಟ್ ಒಂದನ್ನು ನೀಡಿದೆ. ಆಧಾರ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು UIDAI ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಆಧಾರ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಆಧಾರ್ ಕಾರ್ಡ್ ನಲ್ಲಿ ಇವುಗಳ ತಿದ್ದುಪಡಿ ಮಾಡಬಹುದು:

ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿಯ ಹೆಸರು (Name), ವಿಳಾಸ (Address), ಜನ್ಮ ದಿನಾಂಕ (Date of Birth), ಮೊಬೈಲ್ ಸಂಖ್ಯೆ (Mobile Number), ಲಿಂಗ (Gender) ಮೊದಲಾದ ಮಾಹಿತಿಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೊಬೈಲ್ ಸಂಖ್ಯೆ ಆಧಾರ್ ಲಿಂಕ್ ಆಗದೇ ಇದ್ದರೆ ಅದನ್ನು ಕೂಡ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್ ಅಪ್ಡೇಟ್ ಆಗುವುದು ಬಹಳ ಮುಖ್ಯ. ಇಲ್ಲವಾದರೆ ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ಯು ಐ ಡಿ ಎ ಐ (UIDAI) ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಗೆ ಅವಕಾಶ ಮಾಡಿಕೊಟ್ಟಿದೆ. ಆಧಾರ್ ಕಾರ್ಡ್ ನ ಎಲ್ಲಾ ಮಾಹಿತಿಗಳನ್ನು ಎಲ್ಲಾ ಸಮಯದಲ್ಲಿ ಎಷ್ಟು ಬಾರಿ ಬೇಕಾದರೂ ತಿದ್ದುಪಡಿ ಮಾಡಿಕೊಳ್ಳುವಂತಿಲ್ಲ. ಅದಕ್ಕೂ ಕೂಡ ಸರ್ಕಾರ ಮಿತಿ ವಿಧಿಸಿದೆ.

 

advertisement

ಎಷ್ಟು ಬಾರಿ ತಿದ್ದುಪಡಿ ಮಾಡಬಹುದು?

ಆಧಾರ್ ಕಾರ್ಡ್ ನಲ್ಲಿ ನೀವು ಹೆಸರು ತಿದ್ದುಪಡಿ ಮಾಡುವುದಿದ್ದರೆ ಎರಡು ಬಾರಿ ಮಾಡಬಹುದು. ಅದೇ ರೀತಿ ನಿಮ್ಮ ಜನ್ಮ ದಿನಾಂಕವನ್ನು ನವೀಕರಿಸುವುದಿದ್ದರೆ ಡೇಟ್ ಆಫ್ ಬರ್ತ್ (Date of Birth) ಪುರಾವೆಗಳನ್ನು ನೀಡಿ ಎರಡು ಬಾರಿ ನವೀಕರಿಸಬಹುದಾಗಿದೆ. ಅದೇ ರೀತಿ ಮೊಬೈಲ್ ಸಂಖ್ಯೆ (Mobile Number) ಹಾಗೂ ವಿಳಾಸ (Address) ನವೀಕರಣಕ್ಕೆ ಮಿತಿ ಹೇರಿಕೆ ಮಾಡಿಲ್ಲ. ಯಾಕೆಂದರೆ ವ್ಯಕ್ತಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೆಲಸದ ನಿಮಿತ್ತ ಹೋಗಿ ವಾಸ ಮಾಡಬೇಕಾಗುತ್ತದೆ ಈ ಕಾರಣಕ್ಕೆ ವಿಳಾಸ ಬದಲಾಗುವುದು ಸಹಜ ಹಾಗಾಗಿ ವಿಳಾಸ ಬದಲಾವಣೆಗೆ ಮಿತಿ ವಿಧಿಸಲಾಗಿಲ್ಲ. ಇನ್ನು ಆಧಾರ್ ಕಾರ್ಡ್ (Aadhaar Card) ನಲ್ಲಿ ಒಮ್ಮೆ ಮಾತ್ರ ಲಿಂಗ ಬದಲಾವಣೆಗೆ ಅವಕಾಶವಿದೆ.

ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕ ತಿದ್ದುಪಡಿ ಮಾಡುವುದು ಹೇಗೆ?

2013ರ ಹಿಂದೆ ಆಧಾರ್ ಕಾರ್ಡ್ ಪಡೆದುಕೊಂಡಿದ್ದರೆ ಅಂದರೆ 10 ವರ್ಷಕ್ಕಿಂತ ಮೊದಲಿನ ಆಧಾರ್ ಕಾರ್ಡ್ ನಿಮ್ಮ ಬಳಿ ಇದ್ದರೆ ಅದನ್ನ ತಕ್ಷಣವೇ ತಿದ್ದುಪಡಿ ಮಾಡಿಕೊಳ್ಳಬೇಕು ಎಂದು ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಅದೇ ರೀತಿ ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕವನ್ನೂ ಕೂಡ ಎರಡು ಬಾರಿ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.

ನಿಮ್ಮ ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕ ತಿದ್ದುಪಡಿ ಮಾಡಿಕೊಳ್ಳಲು ಈ https://uidai.gov.in/images/commdoc/valid_documents_list.pdf ಪಿ ಡಿ ಎಫ್ ದಾಖಲೆಯನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಇರುವ ದಾಖಲೆಗಳ ಜೊತೆಗೆ ಆಧಾರ್ ಕೇಂದ್ರಕ್ಕೆ ಹೋಗಿ ಜನ್ಮ ದಿನಾಂಕ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ತಿದ್ದುಪಡಿ ಸಮಯದಲ್ಲಿ ಯಾವುದೇ ಸಮಸ್ಯೆ ಆದರೆ ಅಥವಾ ನಿಮ್ಮ ತಿದ್ದುಪಡಿಯನ್ನು ನಿರಾಕರಿಸಿದರೆ 1947 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು. ಅಥವಾ [email protected] ಗೆ ದೂರು ಕೊಡಬಹುದು.

ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕವನ್ನು ಒಮ್ಮೆ ಮಾತ್ರ ಸರಿಪಡಿಸಬಹುದು. ನೀವು ಮತ್ತೊಮ್ಮೆ ಜನ್ಮ ದಿನಾಂಕ ಬದಲಾಯಿಸಬೇಕು ಎಂದಿದ್ದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡಿ ವಿನಂತಿ ಪತ್ರದೊಂದಿಗೆ ಆಧಾರ್ ಕೇಂದ್ರಕ್ಕೆ ಹೋಗಬೇಕು ಯುಐಡಿಎಐ ನಿಮ್ಮ ವಿನಂತಿಯನ್ನು ಪರಿಶೀಲಿಸಿ ನಂತರ ಅದಕ್ಕೆ ಅನುಮೋದನೆ ಸಿಕ್ಕರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕ ಬದಲಾವಣೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಯುಐಡಿಎಐ (UIDAI) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

advertisement

Leave A Reply

Your email address will not be published.