Karnataka Times
Trending Stories, Viral News, Gossips & Everything in Kannada

iPhone 15: ಐಫೋನ್‌ 15 ಮೇಲೆ ಈಗ ಸಖತ್ ಡಿಸ್ಕೌಂಟ್‌, ಆಫರ್‌ ತಿಳಿದ್ರೆ ಪಕ್ಕಾ ಖರೀದಿಸ್ತೀರಾ!

advertisement

ಆಪಲ್‌ ಮೊಬೈಲ್‌ ಸಂಸ್ಥೆಯ ಜನಪ್ರಿಯ ಐಫೋನ್‌ಗಳಲ್ಲಿ ಒಂದಾದ ಐಫೋನ್‌ 15 (iPhone 15) ಸ್ಮಾರ್ಟ್‌ಫೋನ್‌ ಈಗಾಗಲೇ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಐಫೋನ್‌ ಪ್ರಿಯರನ್ನು ಗಮನ ಸೆಳೆದಿದೆ. ಇದೀಗ ಈ ಐಫೋನ್‌ ಅಮೆಜಾನ್‌ (Amazon) ಇ ಕಾಮರ್ಸ್‌ ತಾಣದಲ್ಲಿ ಈ ಸ್ಮಾರ್ಟ್‌ಫೋನ್‌ ಸಖತ್‌ ರಿಯಾಯಿತಿ ಪಡೆದಿದ್ದು, ಗ್ರಾಹಕರು ಕುತೂಹಲದಿಂದ ಈ ಐಫೋನಿನತ್ತ ತಿರುಗಿ ನೋಡುವಂತಾಗಿದೆ.

ಐಫೋನ್ ವಿಶ್ವದ ಅತ್ಯಂತ ಬೇಡಿಕೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ ಮತ್ತು ಇದರ ಹೊಸ ಮಾಡೆಲ್ ಗಳು ಬಿಡುಗಡೆಯಾದಾಗ ಜನರು ತಾವು ಬಳಸುತ್ತಿದ್ದ ಮೊಬೈಲ್ ಅನ್ನು ಬಿಟ್ಟು ಹೊಸ ಐಫೋನ್ ಖರೀದಿಸಲು ಯೋಚಿಸುತ್ತಾರೆ. ಈ ವರ್ಷ ಐಫೋನ್ 15 ಅನ್ನು ಸೆಪ್ಟೆಂಬರ್ 12 ರಂದು Apple ನ ವಂಡರ್‌ಲಸ್ಟ್ ಈವೆಂಟ್‌ನಲ್ಲಿ ಬಿಡುಗಡೆಗೆ ಮಾಡಲಾಯಿತು. ಸೆಪ್ಟೆಂಬರ್ 22 ರಂದು ಫೋನ್ ಮಾರಾಟಕ್ಕೆ ಬಂದಿತ್ತು. ಇದನ್ನು ಖರೀದಿಸಲು ದೆಹಲಿಯಲ್ಲಿ ಹೊಸದಾಗಿ ತೆರೆಯಲಾದ ಆಪಲ್ ಸ್ಟೋರ್‌ಗಳ ಹೊರಗೆ ಜನರು ಸರದಿಯಲ್ಲಿ ನಿಂತಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗಿತ್ತು.

ಹೊಸದಾಗಿ ಬಿಡುಗಡೆ ಆಗಿರುವ iPhone 15 ನಲ್ಲಿ 3 ವಿಧಗಳು. ಮೊದನೆಯದಾಗಿ 128GB, ಇದರ ಬೆಲೆ 79,900 ರೂಪಾಯಿ. ಎರಡನೆಯದು 256GB, ಇದರ ಬೆಲೆ 89,900 ರೂಪಾಯಿ.  ಮೂರನೆಯದು 512GB, ಇದರ ಬೆಲೆ 1,09,900 ರೂಪಾಯಿ. ಇನ್ನು ಈ ಫೋನ್ ಐದು ಬಣ್ಣಗಳಲ್ಲಿ ಲಭ್ಯವಿದೆ ಮತ್ತು ಐಫೋನ್ 14 ಗೆ ಹೋಲಿಸಿದರೆ ಹೊಸದಾಗಿ ನವೀಕರಣಗಳನ್ನು ಹೊಂದಿದೆ.

ಈಗ, ಐಫೋನ್ 15 ರ ಮಾರಾಟವು ಅಧಿಕೃತವಾಗಿ ಪ್ರಾರಂಭವಾಗುತ್ತಿದೆ. ವಿವಿಧ ಔಟ್‌ಲೆಟ್‌ಗಳು ಇತ್ತೀಚಿನ ಐಫೋನ್‌ನಲ್ಲಿ ರಿಯಾಯಿತಿಗಳನ್ನು ನೀಡುತ್ತಿವೆ. ವಿಜಯ್ ಸೇಲ್ಸ್, ಫ್ಲಿಪ್‌ಕಾರ್ಟ್, ಕ್ರೋಮಾ  ಇತರವುಗಳಲ್ಲಿ ಗ್ರಾಹಕರಿಗೆ ಕೆಲವು ಆಕರ್ಷಕ ಕೊಡುಗೆಗಳನ್ನು ಹೊಂದಿವೆ. ಆದರೆ, 35,000 ರೂ.ಗಳಲ್ಲಿ ಇತ್ತೀಚಿನ ಐಫೋನ್ ಅನ್ನು ನಿಮ್ಮ ಕೈಗೆ ಪಡೆಯಲು ಸಾಧ್ಯ ಎಂದರೆ ಖಂಡಿತ ನೀವು ನಂಬುವುದೇ ಇಲ್ಲ ಆದರೆ ನೀವು ಓದಿದ್ದು ನಿಜ. ಈ ಬೆಲೆಯಲ್ಲಿ ಐಫೋನ್ 15 ಅನ್ನು ಪಡೆದುಕೊಳ್ಳಲು ನಿಜವಾಗಿಯೂ ಸಾಧ್ಯವಿದೆ, ಆದರೆ ಇದರಲ್ಲಿ ಒಂದು ಸಣ್ಣ ಟ್ವಿಸ್ಟ್ ಇದೆ ಅದೇನೆಂದರೆ – ನಿಮ್ಮ ಹಳೆಯ ಐಫೋನ್‌ನಿಂದ ಹೊಸದಕ್ಕೆ ನೀವು ಅಪ್‌ಗ್ರೇಡ್ ಮಾಡುತ್ತಿದ್ದರೆ ಮಾತ್ರ ಒಪ್ಪಂದವು ನಿಮಗೆ ಅನ್ವಯಿಸುತ್ತದೆ.

advertisement

12,000 ರಿಯಾಯಿತಿಯಲ್ಲಿ iPhone 15 ಪಡೆಯಿರಿ

Amazon India ಪ್ರಸ್ತುತ iPhone 15 ನಲ್ಲಿ ಕೆಲವು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಇದರಿಂದಾಗಿ ನೀವು 12,000 ರೂಪಾಯಿಗಳ ರಿಯಾಯಿತಿಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಪಡೆದುಕೊಳ್ಳಬಹುದು. ಅದು ಹೇಗೆ ಎಂದರೆ ಮೊದಲು ನೀವು Amazon ಇಂಡಿಯಾದ ವೆಬ್‌ಸೈಟ್‌ಗೆ ಹೋಗಿ iPhone 15 ಗಾಗಿ ಹುಡುಕಿ. ನಂತರ ಆಫರ್‌ಗಳ ವಿಭಾಗವನ್ನು ನೋಡಿ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 5,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿ ಇದೆ. ಇದರ ಜೊತೆಗೆ, ನೀವು ಏರ್‌ಟೆಲ್ ಪೋಸ್ಟ್‌ಪೇಯ್ಡ್ ಸಂಪರ್ಕಕ್ಕೆ ಬದಲಾಯಿಸಿದರೆ ನೀವು ಹೆಚ್ಚುವರಿ 7,000 ರೂಪಾಯಿ ರಿಯಾಯಿತಿ ಇದೆ. ಫೋನ್‌ನ ಒಟ್ಟು ಮೌಲ್ಯವನ್ನು 12,000 ರೂಪಾಯಿಗಳಷ್ಟು ನೀವು ಕಡಿಮೆ ಮಾಡಬಹುದು.

ಒಂದು ವೇಳೆ ನೀವು ಫೋನ್‌ನ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಬಯಸಿದರೆ, ಹೊಸ iPhone 15 ಗಾಗಿ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳಬಹುದು. ನಿಮ್ಮ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದೆ, ಅದರಿಂದ ಹೆಚ್ಚು ರಿಯಾಯಿತಿಯನ್ನು ಪಡೆಯಬಹುದು.

 

advertisement

Leave A Reply

Your email address will not be published.