Karnataka Times
Trending Stories, Viral News, Gossips & Everything in Kannada

Gruha Lakshmi Yojana: ಗೃಹಲಕ್ಷ್ಮಿ ಯೋಜನೆಯಲ್ಲಿ ಅತಿದೊಡ್ಡ ಬದಲಾವಣೆ! ಹಣ ಬಾರದೆ ಇದ್ದವರಿಗೆ ಸಿಹಿಸುದ್ದಿ

advertisement

ಗೃಹಲಕ್ಷ್ಮಿ ಯೋಜನೆ ಆರಂಭದಿಂದ ಇಲ್ಲಿಯವರೆಗೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯಿಂದ ಆರ್ಥಿಕ ನೆರವು ಸಿಕ್ಕಿದೆ. ಆದರೆ ಇನ್ನೂ ಲಕ್ಷಾಂತರ ಜನ ಅರ್ಜಿ ಸಲ್ಲಿಸಿ 4 ತಿಂಗಳು ಕಳೆದರೂ ಕೂಡ ಒಂದೇ ಒಂದು ಕಂತಿನ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣ ಪ್ರತಿಶತ ನೂರರಷ್ಟು ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಬೇಕು ಎನ್ನುವುದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಾಕಷ್ಟು ವಿಚಾರಗಳನ್ನು ಚರ್ಚಿಸಲಾಗಿದ್ದು, ಪ್ರತಿಯೊಬ್ಬ ಫಲಾನುಭವಿ ಮಹಿಳೆಯರಿಗೂ 2,000ರೂ.ಗಳನ್ನು ಪ್ರತಿ ತಿಂಗಳು ಜಮಾ ಮಾಡುವುದಾಗಿ ತಿಳಿಸಿದ್ದಾರೆ.

ಹೆಂಡತಿ ಖಾತೆಗೆ ಹಣ ಬಾರದೆ ಇದ್ರೆ ಗಂಡನ ಖಾತೆಗೆ ಹಣ ಜಮಾ:

ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ ಆಧಾರ್ ಸೀಡಿಂಗ್ (Aadhaar Seeding) ಪ್ರಕ್ರಿಯೆ ಸರಿಯಾಗಿ ಆಗಿಲ್ಲ. ಇದು ಸರ್ವರ್ ಸಮಸ್ಯೆಯಿಂದಾಗಿಯೂ ಕೂಡ ಪೆಂಡಿಂಗ್ ನಲ್ಲಿಯೇ ಇದೆ. ಅಷ್ಟೇ ಅಲ್ಲದೆ, ತಾಂತ್ರಿಕ ದೋಷಗಳು ಕೂಡ ಮಹಿಳೆಯರ ಖಾತೆಗೆ ಹಣ ಬಾರದೆ ಇರುವುದಕ್ಕೆ ಕಾರಣವಾಗಿದೆ.

ಇದೆಲ್ಲದಕ್ಕೂ ಪರಿಹಾರ ಸೂಚಿಸಿರುವ ಸರ್ಕಾರ ಇದೀಗ ಮನೆಯ ಎರಡನೇ ಸದಸ್ಯರ ಖಾತೆಗೆ ಅಂದರೆ ರೇಷನ್ ಕಾರ್ಡ್ (Ration Card) ನಲ್ಲಿ ಎರಡನೇ ಸದಸ್ಯ ಅಥವಾ ಮನೆಯ ಯಜಮಾನನ ಹೆಸರು ಇದ್ದರೆ ಅವರ ಹೆಸರಿಗೆ ಹಣ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಮನೆಯ ಎರಡನೇ ವ್ಯಕ್ತಿಯ ಬ್ಯಾಂಕ ಖಾತೆ ಜೊತೆಗೆ ಆಧಾರ್ ಸೀಡಿಂಗ್ ಆಗಿರಬೇಕು, ಖಾತೆ ಆಕ್ಟಿವ್ ಇರಬೇಕು. ಹಾಗಾಗಿ ಇನ್ನು ಮುಂದೆ ಗೃಹಿಣಿಯರು ತಮ್ಮ ಖಾತೆಗೆ ಹಣ ಬಾರದೆ ಇದ್ದರೂ ಕುಟುಂಬದ ಮತ್ತೋರ್ವ ಸದಸ್ಯರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂಬುದನ್ನು ಗಮನಿಸಬೇಕು.

advertisement

ಗ್ರಾಮ ಅದಾಲತ್ ಮೂಲಕವೂ ಪರಿಹಾರ:

ಗೃಹಲಕ್ಷ್ಮಿ ಯೋಜನೆಗೆ (Gruha Lakshmi Yojana) ಅರ್ಜಿ ಸಲ್ಲಿಸಿದವರ ಸಂಖ್ಯೆ ಸುಮಾರು 1.17 ಕೋಟಿಯಷ್ಟು. ಆದರೆ ಇಲ್ಲಿಯವರೆಗೆ 1.10 ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ. ಆದರೆ ಇನ್ನುಳಿದ ಮಹಿಳೆಯರಿಗೆ ಇದುವರೆಗೆ ಒಂದೇ ಒಂದು ಕಂತಿನ ಹಣವು ಬಂದಿಲ್ಲ. ಇದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಲು ಸರ್ಕಾರ ಗ್ರಾಮ ಅದಾಲತ್ ಪ್ರಾರಂಭಿಸಲಿದೆ. ಈ ಮೂಲಕ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಪ್ರತಿ ಮನೆ ಮನೆಗೆ ತೆರಳಿ ಮಹಿಳೆಯರಿಗೆ ಹಣ ಬಾರದೆ ಇದ್ದರೆ ಸಮಸ್ಯೆಯನ್ನು ಕೇಳಿ ತಿಳಿದು ಅದಕ್ಕೆ ಪರಿಹಾರ ಸೂಚಿಸಬೇಕು, ಹಣ ಸ್ವೀಕರಿಸದೇ ಇರುವ ಮಹಿಳೆಯರ ಹೆಸರುಗಳ ಪಟ್ಟಿ ತಯಾರಿಸಿ ಸರ್ಕಾರಕ್ಕೆ ನೀಡಬೇಕು.

 

ಅಷ್ಟೇ ಅಲ್ಲದೆ ಇನ್ನೊಂದು ಪ್ರಮುಖ ಸೂಚನೆಯನ್ನು ಸರ್ಕಾರ ನೀಡಿದ್ದು ಆಯಾ ಗ್ರಾಮದಲ್ಲಿ ಇರುವ ಅಂಗನವಾಡಿ ಸಹಾಯಕಿಯರು ಹಣ ಜಮಾ ಆಗದೇ ಇರುವ ಗೃಹಿಣಿಯರನ್ನು ನೇರವಾಗಿ ಬ್ಯಾಂಕಿಗೆ ಕರೆದುಕೊಂಡು ಹೋಗಿ ಅಲ್ಲಿರುವ ಸಮಸ್ಯೆ ತಿಳಿದು ಪರಿಹರಿಸುವ ಕಾರ್ಯ ಮಾಡಬೇಕು ಒಟ್ಟಿನಲ್ಲಿ ಡಿಸೆಂಬರ್ ತಿಂಗಳ ಅಂತ್ಯದ ಒಳಗೆ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಗೃಹಲಕ್ಷ್ಮಿ ಹಣ ತಲುಪಿದೆ ಎನ್ನುವಂತಾಗಬೇಕು ಎನ್ನುವುದು ಸರ್ಕಾರದ ಉದ್ದೇಶ.

ಪೆಂಡಿಂಗ್ ಹಣ ಜಮಾ:

ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ ತಿಂಗಳಲ್ಲಿಯೇ ಸಾಕಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಆದರೆ ನವೆಂಬರ್ ವರೆಗೆ ಮೂರು ಕಂತಿನ ಹಣ ಜಮಾ ಆದರೂ ಹಲವರ ಖಾತೆಗೆ ಹಣ ಬಂದಿಲ್ಲ ಈ ಹಿನ್ನೆಲೆಯಲ್ಲಿ ಪೆಂಡಿಂಗ್ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು ಈಗಾಗಲೇ ಕೆಲವು ಮಹಿಳೆಯರಿಗೆ ನಾಲ್ಕು ಸಾವಿರ ರೂಪಾಯಿಗಳು ಜಮಾ ಆಗಿವೆ. ಇದೇ ರೀತಿ ಒಂದೇ ಒಂದು ಕಂತಿನ ಹಣವು ಬಾರದೇ ಇದ್ದ ಮಹಿಳೆಯರಿಗೆ ಡಿಸೆಂಬರ್ ತಿಂಗಳ ಒಳಗೆ 6,000 ರೂ.ಗಳನ್ನು ಸರ್ಕಾರ ಜಮಾ ಮಾಡಲಿದೆ. ಒಂದು ವೇಳೆ ಹಣ ಜಮಾ ಆಗಿರುವ ಎಸ್ಎಂಎಸ್ ಬಾರದೇ ಇದ್ದಲ್ಲಿ ನೀವು ನೇರವಾಗಿ ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದು.

advertisement

Leave A Reply

Your email address will not be published.