Karnataka Times
Trending Stories, Viral News, Gossips & Everything in Kannada

VVS Laxman: 2024 T20 ವಿಶ್ವಕಪ್ ನಲ್ಲಿ ಕೊಹ್ಲಿ ಬದಲು ಈ ಬೆಂಕಿ ಆಟಗಾರನನ್ನು ಹುಡುಕಿಕೊಂಡ ಕೋಚ್ VVS ಲಕ್ಷ್ಮಣ್

advertisement

ಟೀಮ್ ಇಂಡಿಯಾ ವಿಶ್ವಕಪ್ ಸೋಲಿನ ನಡುವೆಯೂ ಇನ್ನು ಹಲವು ಮ್ಯಾಚ್ ಗಳನ್ನು ಆಡುತ್ತಿದೆ ಇದೀಗ ವಿರಾಟ್ ಕೊಹ್ಲಿ ಬದಲಿಗೆ ಟಿ-20, 2024 ಆಟವನ್ನು ಆಡುವವರು ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಹೊಸದಾಗಿ ಪ್ರಮುಖ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ (VVS Laxman) ಆಯ್ಕೆಗೊಂಡಿದ್ದು ಇದೀಗ ಕಿಂಗ್ ಕೊಹ್ಲಿಯಂತೆ (King Kohli) ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಮತ್ತೊಬ್ಬ ಅದ್ಬುತ ಆಟಗಾರನನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ ಹಾಗಾದ್ರೆ ಆ ಆಟಗಾರ ಯಾರು ಎನ್ನುವ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆಮಾಡಿದೆ!

2024ರ ಟಿ 20 ವಿಶ್ವಕಪ್ ಆಟಕ್ಕೆ ಕೊಹ್ಲಿ (Virat Kohli) ಗೆ ಮ್ಯಾಚ್ ಆಗುವಂತಹ ಮತ್ತೊಬ್ಬ ಆಟಗಾರನನ್ನ ಹುಡುಕುವುದು ದೊಡ್ಡ ಸವಾಲೇ ಸರಿ. ಕಿಂಗ್ ಕೊಹ್ಲಿಯಂತೆ ಮೂರನೇ ಕ್ರಮಾಂಕದಲ್ಲಿ ಆಡಲು, ಟೀಮ್ ಇಂಡಿಯಾ (Team India) ದ ಮಾಜಿ ಕ್ರಿಕೆಟರ್ ಹಾಲಿ ಕೋಚ್ ಆಗಿರುವ VVS ಲಕ್ಷ್ಮಣ್ ಮತ್ತೊಬ್ಬ ಆಟಗಾರರನ್ನು ಆಯ್ಕೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಬದಲಿಗೆ ಆಯ್ಕೆಯಾದ ಆಟಗಾರ ಯಾರು?

ವಿರಾಟ್ ಕೊಹ್ಲಿ  ಅವರು ಮುಂದಿನ ಟಿ20 ವಿಶ್ವಕಪ್ ಆಡಲು ಸಾಧ್ಯವಲ್ಲ, ಅವರ ಬದಲಿ ವಿ ವಿ ಎಸ್ ಲಕ್ಷ್ಮಣ್ ಆಟಗಾರರನ್ನು ಹುಡುಕಿದ್ದು, ಅವರು ವಿರಾಟ್ ಕೊಹ್ಲಿ ಜಾಗಕ್ಕೆ ಯಶಸ್ವಿ ಜೇಸ್ವಾಲ್ (Yashasvi Jaiswal) ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

 

advertisement

ಮೂರನೇ ಕ್ರಮಾಂಕದ ಆಟಗಾರರಾಗಿ ಯಶಸ್ವಿ ಜೈಸ್ವಾಲ್ ಆಯ್ಕೆ:

2024ರ ಟಿ 20 ವಿಶ್ವಕಪ್ ಮ್ಯಾಚ್ ನಲ್ಲಿ ಟೀಮ್ ಇಂಡಿಯಾದ ಭಾಗವಾಗಿ ವಿರಾಟ್ ಕೊಹ್ಲಿ (Virat Kohli) ಮುಂದುವರೆಯುವುದಿಲ್ಲ ಹಾಗಾಗಿ ಈ ಮೂರನೇ ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಆಗಿ ಕೊಹ್ಲಿ ಜಾಗಕ್ಕೆ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರನ್ನು ಆಯ್ಕೆ ಮಾಡಲಾಗಿದೆ. ಅನುಭವ ಹೊಂದಿರುವ ಯಶಸ್ವಿ ಜೈಸ್ವಾಲ್ ವಿರಾಟ್ ಬದಲು ಸೂಕ್ತವಾದ ಆಯ್ಕೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಟೀಮ್ ಇಂಡಿಯಾ ಕಡೆಯಿಂದ ಯಾವುದೇ ಹೊಸ ಅಪ್ಡೇಟ್ ಸಿಕ್ಕಿಲ್ಲ ಆದರೆ ಬಹುತೇಕ ವಿರಾಟ್ ಕೊಹ್ಲಿ ಬದಲು ಯಶಸ್ವಿ ಜೈಸ್ವಾಲ್ ಆಡುತ್ತಾರೆ ಎನ್ನುವುದು ಖಚಿತವಾಗಿದೆ.

ಟಿ 20ಯಲ್ಲಿ ಯಶಸ್ವಿ ಅವರ ದಾಖಲೆಗಳು:

ಯಶಸ್ವಿ ಜೈಸ್ವಾಲ್ ಅವರು 2023ರ ಐಪಿಎಲ್ ನಲ್ಲಿ ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಬಳಿಕ ಸಾಕಷ್ಟು ಮ್ಯಾಚ್ ಗಳನ್ನು ಆಡಿರುವ ಯಶಸ್ವಿ ಜೈಸ್ವಾಲ್ ಎಲ್ಲಾ ಪಂದ್ಯಗಳಲ್ಲಿಯೂ ಕೂಡ ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿಸಿ ದಾಖಲೆ ಮೆರೆದಿದ್ದಾರೆ.

ಯಶಸ್ವಿ ಜೈಸ್ವಾಲ್ ಅವರ ಆಟದ ಬಗ್ಗೆ ಹೇಳುವುದಾದರೆ ಇಲ್ಲಿಯವರೆಗೆ 10 ಪಂದ್ಯಗಳನ್ನು ಆಡಿದ್ದಾರೆ ಅವುಗಳಲ್ಲಿ 9 ಇನ್ನಿಂಗ್ಸ್ ನಲ್ಲಿ ಒಂದು ಶತಕ ಹಾಗೂ ಎರಡು ಅರ್ಥಶತಕಗಳನ್ನು ಪಡೆದುಕೊಂಡಿದ್ದು, ಒಟ್ಟು 360 ರನ್ನಗಳನ್ನು ಪಡೆದಿದ್ದಾರೆ. ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ಯಶಸ್ವಿ ಜೈಸ್ವಾಲ್ ಮುಂದೆ ಬರಲಿರುವ 2024 ಟಿ20 ವಿಶ್ವಕಪ್ ಪಂದ್ಯದಲ್ಲಿ ಯಾವ ರೀತಿ ಬ್ಯಾಟ್ಮ್ಯಾನ್ಶಿಪ್ (Batsmanship) ವಹಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

advertisement

Leave A Reply

Your email address will not be published.