Karnataka Times
Trending Stories, Viral News, Gossips & Everything in Kannada

KSRTC: ಶಬರಿಮಲೆ ಹೋಗುವ ಜನರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ.

advertisement

ರಾಜ್ಯದಲ್ಲಿ ಹಬ್ಬಗಳು ಸಮೀಪಿಸುತ್ತಿದ್ದಂತೆಯೇ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ದಟ್ಟಣೆಯನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಯು ವಿಶೇಷ ಬಸ್‌ಗಳನ್ನು ಬಿಡುತ್ತಲೇ ಬಂದಿದೆ. ಅದೇ ರೀತಿ ಇದೀಗ ಶಬರಿಮಲೆ ಭಕ್ತರಿಗಾಗಿ ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಸೇವೆಯನ್ನು ಕಲ್ಪಿಸಿದೆ. ಹಾಗಾದರೆ ಪ್ರಯಾಣಿಕರು ಯಾವಾಗಿನಿಂದ ಈ ಸೇವೆಯನ್ನು ಪಡೆಯಬಹುದು ಹಾಗೂ ದರ, ಸಮಯಗಳ ವಿವರವನ್ನು ಇಲ್ಲಿ ನೀಡಿದ್ದೀವೆ.

KSRTC ಯು ಶಬರಿಮಲೆ ಭಕ್ತರಿಗಾಗಿ ಬೆಂಗಳೂರಿನಿಂದ ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿಲಕ್ಕಲ್‌ಗೆ ಡಿಸೆಂಬರ್ 1 ರಿಂದ ವೋಲ್ವೋ ಬಸ್ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ. ಇನ್ನು ಟಿಕೆಟ್ ದರ ಪ್ರತಿ ಪ್ರಯಾಣಿಕರಿಗೆ 1,600 ರೂಪಾಯಿ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

advertisement

ಈ ವೋಲ್ವೋ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಟು ಮರುದಿನ ಬೆಳಗ್ಗೆ 6:45ರ ಸುಮಾರಿಗೆ ನಿಲಕ್ಕಲ್‌ಗೆ ತಲುಪಲಿದೆ. ನಂತರ ಸಂಜೆ 6 ಗಂಟೆಗೆ ನಿಲಕ್ಕಲ್‌ನಿಂದದ ಹೊರಡಲಿದೆ ಎನ್ನುವ ಮಾಹಿತಿಯನ್ನು ಕೆಎಸ್ಆರ್‌ಟಿಸಿ ನೀಡಿದೆ.

advertisement

Leave A Reply

Your email address will not be published.