Karnataka Times
Trending Stories, Viral News, Gossips & Everything in Kannada

Apple Company: ಈ ಕೌಶಲ್ಯ ನಿಮ್ಮಲ್ಲಿದ್ರೆ ಆಪಲ್ ಕಂಪನಿಯಲ್ಲಿ ಸುಲಭವಾಗಿ ಕೆಲಸ ಸಿಗುತ್ತೆ!

advertisement

ಇಂದು ಉದ್ಯೋಗ ಅನ್ನೋದು ಬಹಳ ಮುಖ್ಯ. ಪ್ರತಿಯೊಬ್ಬ ವ್ಯಕ್ತಿಗೂ ಸರಿಯಾದ ಕೆಲಸ ಇದ್ದರೆ ಮಾತ್ರ ಸುಂದರವಾದ ಬದುಕು ರೂಪಿಸಿಕೊಳ್ಳಲು ಸಾಧ್ಯ. ಅದರಲ್ಲೂ ಇಂದಿನ ಶಿಕ್ಷಣ ವಂತರು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಲು ಬಯಸುತ್ತಾರೆ.‌ ಅದರಲ್ಲೂ ಜಗತ್ತಿನ ಪ್ರಸಿದ್ಧ ಫೋನ್‌, ಲ್ಯಾಪ್‌ಟಾಪ್‌ ಸೇರಿ ಇನ್ನಿತರ ವಸ್ತುಗಳ ತಯಾರಕ ಸಂಖ್ಯೆ ‌ ಆ್ಯಪಲ್ ಕಂಪನಿ ಬಹಳಷ್ಟು ಫೇಮಸ್ಸು, ಇದು ವಿವಿಧ ವಸ್ತು ಉತ್ಪನ್ನ ತಯಾರಿಕೆಯಲ್ಲಿ ಇದರ ಆವಿಷ್ಕಾರ ಬಹಳಷ್ಟು ಪ್ರಗತಿಯಲ್ಲಿದ್ದು, ಪ್ರತಿ ವರ್ಷ ಹೊಸ ಗ್ಯಾಜೆಟ್‌ಗಳನ್ನು ಮಾರುಕಟ್ಟೆ ಯಲ್ಲಿ ಪರಿಚಯಿಸುತ್ತದೆ. ಇಂತಹ ಸಂಸ್ಥೆ ಗಳಲ್ಲಿ ಕೆಲಸ ಮಾಡುವ ಕನಸು ಬಹಳಷ್ಟು ಜನರದ್ದು ಆಗಿರುತ್ತದೆ. ಆ್ಯಪಲ್‌ ಕಂಪನಿಯಲ್ಲಿ ಕೆಲಸ ಮಾಡಲು ನೀವು ಏನು ಮಾಡ್ಬೇಕು ಗೊತ್ತಾ? ಈ ಬಗ್ಗೆ ಸಿಇಒ ಟಿಮ್ ಕುಕ್ (Tim Cook) ಮಾಹಿತಿ ನೀಡಿದ್ದಾರೆ.

ಅಭಿವೃದ್ಧಿ ಯಾಗಿದೆ

ಇದು ಕಳೆದ ಐದು ವರ್ಷಗಳಲ್ಲಿ ಆಪಲ್‌ನ ನಿವ್ವಳ ಲಾಭದಲ್ಲಿ ಕಂಡು ಬಂದಿರುವ ಅತ್ಯಂತ ವೇಗದ ಬೆಳವಣಿಗೆಯಾಗಿದೆ ಎಂದು ವಿವಿಧ ಮೂಲಗಳ ಮೂಲಕ ತಿಳಿದು ಬಂದಿದೆ. ಮೂಲಗಳ ಪ್ರಕಾರ, ಆಗಸ್ಟ್, ಸೆಪ್ಟೆಂಬರ್ ಸಮಯದಲ್ಲಿ ಭಾರತದಲ್ಲಿ ತಯಾರಿಸಿದ ಫೋನ್ ಮಾರಾಟದಲ್ಲಿ ಆಪಲ್ ಮುಂಚೂಣಿಯಲ್ಲಿದೆ.

ಸಿಇಓ ಹೇಳಿದ್ದೇನು?

advertisement

ಆಪಲ್ ಸಂಸ್ಥೆ (Apple Company)ಯಲ್ಲಿ ಕೆಲಸ ತೊಡಕಿಸಿ ಕೊಳ್ಳುವ ಬಗ್ಗೆ ಮಾತನಾಡಿದ ಕುಕ್ ಅವರು ಆ್ಯಪಲ್‌ನಲ್ಲಿ ಕೆಲಸ ಮಾಡಲು ಉದ್ಯೋಗಿಗಳಿಗೆ ಅಗತ್ಯವಿರುವ ಕೆಲವು ಕೌಶಲ್ಯಗಳು ಬೇಕು. ಕುತೂಹಲ, ಆಸಕ್ತಿ ಸೃಜನಶೀಲತೆ ಮತ್ತು ತಂಡದಲ್ಲಿ ಕ್ರಿಯೇಟಿವ್ ಮೈಂಡ್ ಒಳಗೊಂಡಿರಬೇಕು ಎಂದರು‌. ನಿಮ್ಮ ಕಲ್ಪನೆ ಮತ್ತು ನನ್ನ ಕಲ್ಪನೆಯನ್ನು ಬಳಕೆ ಮಾಡಿಕೊಂಡಾಗ ತಮ್ಮದೇ ಆದ ವೈಯಕ್ತಿಕ ಆಲೋಚನೆಗಳಿಗಿಂತ ಬಹಳಷ್ಟು ಉತ್ತಮವಾಗಿರುತ್ತದೆ. ಇದನ್ನು ಕಂಪನಿ ಕೂಡ ತಿಳಿಸುತ್ತದೆ ಎಂದರು.

ಯಾವ ರೀತಿ ನೇಮಿಸಿಕೊಳ್ಳುತ್ತದೆ?

ಇಂದು ಸಂಸ್ಥೆಯು ಪದವಿ ಇರುವ ಇಲ್ಲದಿರುವ ಎಲ್ಲಾ ವರ್ಗದ ಜನರನ್ನು ನೇಮಿಸಿಕೊಂಡಿದ್ದು ಅವರ ಕೌಶಲ್ಯ ಚಟುವಟಿಕೆಗಳಿಗೆ ಅನುಸರವಾಗಿ ನೇಮಿಸಿಕೊಳ್ಳಲಾಗಿದೆ.ಕಂಪನಿಯು ಎಲ್ಲ ವರ್ಗದ ಜನರನ್ನು ನೇಮಿಸಿಕೊಳ್ಳುತ್ತದೆ ಎಂದರು.ನೇಮಕ ಗೊಳ್ಳುವ ಪ್ರತಿಯೊಬ್ಬರೂ ಕೋಡಿಂಗ್ ಕೌಶಲ್ಯಗಳನ್ನು ಹೊಂದಿರಬೇಕಾಗಿಲ್ಲ ಅಥವಾ ಟೆಕ್ ಮೂಲದಲ್ಲಿ ಕೆಲಸ ಮಾಡಲು ಎಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕಾಗಿಲ್ಲ ಇಲ್ಲಿ ಅನೇಕ ಅವಕಾಶ ಗಳಿದ್ದು,ಸೃಜನಶೀಲ ವ್ಯಕ್ತಿ ಯನ್ನು ಆ್ಯಪಲ್ ಸಂಸ್ಥೆ ಹುಡುಕುತ್ತದೆ ಎಂದು ಮಾಹಿತಿ ನೀಡಿದರು.

advertisement

Leave A Reply

Your email address will not be published.