Karnataka Times
Trending Stories, Viral News, Gossips & Everything in Kannada

YES Bank: ಯಸ್ ಬ್ಯಾಂಕ್ ನಲ್ಲಿ ಖಾತೆ ಇರುವ ಗ್ರಾಹಕರಿಗೆ ಸಿಹಿಸುದ್ದಿ.

advertisement

ಜನರಿಗೆ ಭವಿಷ್ಯತ್ತಿನ ಭದ್ರತೆಗಾಗಿ ಉಳಿತಾಯ ಮಾಡುವ ಮನೋಭಾವನೆ ಹೆಚ್ಚಾದಂತೆ ಉಳಿತಾಯ ಮಾಡುವ ಕ್ಷೇತ್ರಗಳು ಕೂಡ ಹೆಚ್ಚುತ್ತಲಿದೆ. ಇಂದು ಸರಕಾರಿ ಮತ್ತು ಖಾಸಗಿ ಬ್ಯಾಂಕುಗಳು ಮಾತ್ರವಲ್ಲದೇ ಸಂಘ ಸಂಸ್ಥೆಗಳು ಕೂಡ ಉಳಿತಾಯ ಯೋಜನೆಗಳ ಸಾಲಿನಲ್ಲಿ ಸೇರಿಕೊಂಡಿದೆ. ಇಂದು ಖಾಸಗಿ ಮತ್ತು ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಹಲವು ಸ್ಥಿರ ಠೇವಣಿಗಳ ಆಫರ್ ಅನ್ನು ನೀಡುತ್ತಿದ್ದು ಇದರಿಂದಾಗಿ ಉಳಿತಾಯ ಮಾಡುವ ಗ್ರಾಹಕರಿಗೆ ಬಹಳ ಅನುಕೂಲ ಆಗಿದೆ ಎನ್ನಬಹುದು.

ಯಸ್ ಬ್ಯಾಂಕ (YES Bank) ನ ಸ್ಥಿರ ಠೇವಣಿ ಮೇಲಿನ ಬಡ್ಡಿ ದರ ಪರಿಷ್ಕರಣೆ ಮಾಡಲಾಗುತ್ತಿದೆ‌. ಹೀಗಾಗಿ ಈ ಬ್ಯಾಂಕಿನ ಸ್ಥಿರ ಠೇವಣಿ ಮೇಲಿನ ಬಡ್ಡಿದರ ಈ ಹಿಂದಿಗಿಂತಲೂ ಅಧಿಕ ಆಗಲಿದೆ. ಎರಡು ಕೋಟಿಗಿಂತ ಕಡಿಮೆ ಇರುವ ಸ್ಥಿರ ಠೇವಣಿಯ ಮೇಲಿನ ಬಡ್ಡಿದರ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಇದು ಸಾಮಾನ್ಯ ನಾಗರಿಕರಿಗೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಪ್ರೋತ್ಸಾಹಿಸುವ ನೆಲೆಯಲ್ಲಿ ಬಹಳ ಅನುಕೂಲ ಆಗಿದೆ.

ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ

ಯಸ್ ಬ್ಯಾಂಕಿನಲ್ಲಿ 7 ದಿನದಿಂದ 10ವರ್ಷದ ಅವಧಿ ವರೆಗೆ 3.25% ನಿಂದ 7.25% ವರೆಗೆ ಬಡ್ಡಿದರ ಸಿಗಲಿದೆ. ಹಿರಿಯ ನಾಗರಿಕರಿಗೆ ಬ್ಯಾಂಕಿನಲ್ಲಿ FD ಮಾಡಲು 3.75% ನಿಂದ 8.25%ವರೆಗೆ ಬಡ್ಡಿ ದರ ನೀಡಲಾಗುವುದು. ಅಷ್ಟು ಮಾತ್ರದಲ್ಲದೆ. ಹೆಚ್ಚುವರಿ ಬಡ್ಡಿಸಹ ಇರಲಿದೆ‌. ಅಂದರೆ ಸಾಮಾನ್ಯ ನಾಗರಿಕರಿಗೆ ಹೋಲಿಸಿದರೆ ಹಿರಿಯ ನಾಗರಿಕರಿಗೆ 0.50%. ದಷ್ಟು ಬಡ್ಡಿ ದರ ಸಿಗಲಿದೆ.

advertisement

ಸಾಮಾನ್ಯ ನಾಗರಿಕರಿಗೆ ಹೇಗಿದೆ ಸೌಲಭ್ಯ

ಸಾಮಾನ್ಯ ನಾಗರಿಕರಿಗೆ ಹಿರಿಯ ನಾಗರಿಕರಿಗಿಂತ ಸ್ವಲ್ಪ ಮಟ್ಟಿಗೆ ಸೌಲಭ್ಯ ಕಡಿಮೆ ಎಂದು ಹೇಳಬಹುದು. ಸಾಮಾನ್ಯ ನಾಗರಿಕರಿಗೆ ಒಂದು ವರ್ಷದ FD ಮೇಲೆ 7.25% ಬಡ್ಡಿದರ ಸಿಗಲಿದೆ. ಅದೇ ರೀತಿ 18ರಿಂದ 24ತಿಂಗಳ FD ಮೇಲೆ 7.75% ಬಡ್ಡಿದರ ಸಿಗಲಿದೆ. ಈ ಮೂಲಕ ಈ ನೂತನ ಬಡ್ಡಿದರ ನಿಯಮವನ್ನು ನವೆಂಬರ್ 21, 2023 ರಿಂದ ಜಾರಿಗೆ ತರಲಾಗುತ್ತಿದೆ.

ಇತರ ಬ್ಯಾಂಕಿನ ಬಡ್ಡಿದರ

ದೇಶದ ಅತೀ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವ SBI ಬ್ಯಾಂಕಿನಲ್ಲಿ 7 ದಿನದಿಂದ 10 ವರ್ಷದ ಅವಧಿ ವರೆಗೆ 3% ನಿಂದ 7.1% ವರೆಗೆ ಬಡ್ಡಿದರ ಸಿಗಲಿದೆ. ICICI ಬ್ಯಾಂಕಿನಲ್ಲಿ ಬಡ್ಡಿದರವು 7 ದಿನದಿಂದ 10ವರ್ಷದ ಅವಧಿ ವರೆಗೆ 3% ನಿಂದ 7.1% ವರೆಗೆ ಬಡ್ಡಿದರ ವಿಧಿಸಿದ್ದು, ಗ್ರಾಹಕರಿಗೆ ಸಾಕಷ್ಟು ಅನುಕೂಲ ಆಗಿದೆ. HDFC ಬ್ಯಾಂಕಿನಲ್ಲಿ 7 ದಿನದಿಂದ 10ವರ್ಷದ ಅವಧಿ ವರೆಗೆ 3% ನಿಂದ 7.20% ವರೆಗೆ ಬಡ್ಡಿದರ ನೀಡಲಾಗುತ್ತಿದೆ.

advertisement

Leave A Reply

Your email address will not be published.