Karnataka Times
Trending Stories, Viral News, Gossips & Everything in Kannada

LIC: ಪ್ರತಿದಿನ ಕೇವಲ 72 ರೂ. ಉಳಿಸಿ ಪ್ರತಿ ತಿಂಗಳು 28,000 ರೂ. ಪಿಂಚಣಿ ಪಡೆಯಿರಿ, ಅದ್ಭುತ ಯೋಜನೆ ನಿಮಗಾಗಿ

advertisement

ನಾವು ಹೂಡಿಕೆ ಎಂದಾಗ ಕಡಿಮೆ ಹೂಡಿಕೆ ಮಾಡಿ ಎಲ್ಲಿ ಅಧಿಕ ಹಣವನ್ನು ಪಡೆಯಲು ಸಾಧ್ಯವೆಂದು ನೋಡುತ್ತೇವೆ. ಹಾಗಿದ್ದಾಗ ನಮಗೆ ಇರುವ ಬೆಸ್ಟ್ ಆಯ್ಕೆಗಳಲ್ಲಿ ಎಲ್‌ಐಸಿ ಕೂಡಾ ಒಂದಾಗಿದೆ. ದೇಶದ ಪ್ರಮುಖ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ ಎಲ್ಲ ವರ್ಗಕ್ಕೆ ವಿಮೆ ಹಾಗೂ ಉಳಿತಾಯ ಆಯ್ಕೆಗಳನ್ನು ನೀಡುತ್ತದೆ. ಹಿರಿಯ ನಾಗರಿಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಎಲ್ಐಸಿ ಹಲವು ಯೋಜನೆಗಳನ್ನು ಹೊರತಂದಿದೆ. ಅದರಲ್ಲಿ ಒಂದು LIC ಜೀವನ್ ನಿಧಿ ಯೋಜನೆ. ಇದು ಸಾಂಪ್ರದಾಯಿಕ ಪಿಂಚಣಿ ಯೋಜನೆಯಾಗಿದ್ದು, ಇದು ಉಳಿತಾಯ ಮತ್ತು ಆದಾಯ ಎರಡನ್ನೂ ನೀಡುತ್ತದೆ.

ಜೀವನ್ ನಿಧಿ ಯೋಜನೆ ಎಂದರೇನು?

ನಿವೃತ್ತಿಯ ನಂತರದಲ್ಲಿ ನೆಮ್ಮದಿಯ ಜೀವನಕ್ಕಾಗಿ ಎಲ್ ಐ ಸಿ ಈ ಯೋಜನೆಯನ್ನು ಪರಿಚಯಿಸಿದೆ.20 ವರ್ಷದಿಂದ 58 ವರ್ಷದೊಳಗಿನ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇನ್ನು ಹಣ ಪಡೆಯುವ ವಯಸ್ಸು 55 ವರ್ಷದಿಂದ 65 ವರ್ಷಗಳವರೆಗೆ ಇರುತ್ತದೆ. ಇದರಲ್ಲಿ, ಏಕ ಮತ್ತು ನಿಯಮಿತ ಪ್ರೀಮಿಯಂ ಪಾವತಿಯ ಆಯ್ಕೆ ಲಭ್ಯವಿದೆ.

advertisement

5 ವರ್ಷಗಳ ಹೂಡಿಕೆಗಾಗಿ ಪಾಲಿಸಿಯಲ್ಲಿ ಖಾತರಿಯ ಸೇರ್ಪಡೆ ಲಭ್ಯವಿದೆ.  ಈ ಯೋಜನೆಯಲ್ಲಿ ಬೋನಸ್ 6ನೇ ವರ್ಷದಿಂದ ಅನ್ವಯವಾಗುತ್ತದೆ. ಅಪಘಾತ ಸಾವು ಮತ್ತು ಅಂಗವೈಕಲ್ಯ ಸವಾರರ ಸೌಲಭ್ಯವೂ ಇದರಲ್ಲಿ ಲಭ್ಯವಿದೆ. ಪಿಂಚಣಿ ಮೊತ್ತದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಆದರೆ ಇದು ಪಾವತಿಸಿದ ಪ್ರೀಮಿಯಂ ಮತ್ತು 1/3 ಮೆಚ್ಯೂರಿಟಿ ಮೊತ್ತವು ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80C ಮತ್ತು 10 (10A) ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಹೊಂದಿದೆ.

ಪ್ರತಿದಿನ 72ರೂಪಾಯಿ ಉಳಿಸಿ ಮುಂದೆ ತಿಂಗಳ ಪಿಂಚಣಿ 28 ಸಾವಿರ ರೂಪಾಯಿ ಪಡೆಯೋದು ಹೇಗೆ?

ಹೂಡಿಕೆದಾರರು ವಾರ್ಷಿಕ, ಮಾಸಿಕ, ಅರ್ಧವಾರ್ಷಿಕ ಮತ್ತು ತ್ರೈಮಾಸಿಕ ವಿಧಾನಗಳಲ್ಲಿ ಪ್ರೀಮಿಯಂ ಪಾವತಿಸಬಹುದು. ಪ್ರತಿನಿತ್ಯ 72 ರೂಪಾಯಿ ಅಂದರೆ ತಿಂಗಳಿಗೆ 2,255 ರೂಪಾಯಿ ಹಾಗೂ 3 ತಿಂಗಳಿಗೆ 6766 ರೂಪಾಯಿ ಪಾವತಿಸಿ, ಅರ್ಧ ವಾರ್ಷಿಕವಾಗಿ 13,393 ರೂಪಾಯಿ ವಾರ್ಷಿಕವಾಗಿ 26,503 ಪಾವತಿಸಿದರೆ 10 ಲಕ್ಷ ರೂಪಾಯಿಗಳ ಜೀವ ವಿಮೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರತಿನಿತ್ಯ 72 ರೂಪಾಯಿಗಳ ಹೂಡಿಕೆ ಮೇಲೆ ಯೋಜನೆಯ ಮುಕ್ತಾಯದ ಅವಧಿಯ ನಂತರ ಪ್ರತಿ ತಿಂಗಳು 28,000 ರೂಪಾಯಿ ಪಡೆಯಬಹುದಾಗಿದೆ.

advertisement

Leave A Reply

Your email address will not be published.