Karnataka Times
Trending Stories, Viral News, Gossips & Everything in Kannada

Maruti Suzuki Cars: ಜನವರಿಯಿಂದ ದುಬಾರಿಯಾಗಲಿದೆ ಮಾರುತಿ ಕಾರುಗಳ ದರ, ಕಾರಣ ಬಹಿರಂಗ.

advertisement

ಭಾರತೀಯರ ಮೆಚ್ಚಿನ ಕಾರ್ ಮಾರುತಿ ಸುಜುಕಿ ಕಂಪನಿಯ ಕಾರುಗಳ (Maruti Suzuki Cars) ಬೆಲೆ 2024ರ ಜನವರಿ 1ರಿಂದ ಹೆಚ್ಚಳವಾಗಲಿದೆ. ಈ ಬೆಲೆ ಏರಿಕೆಯ ವಿಚಾರವನ್ನು ಮಾರುತಿ ಸುಜುಕಿ ಕಂಪನಿಯು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE)ಗೆ ಸಲ್ಲಿಸಿದ ದಾಖಲೆಗಳಲ್ಲಿ ತಿಳಿಸಿದೆ. ಅನಿವಾರ್ಯ ಒತ್ತಡಗಳ ಕಾರಣ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ವಿವರಿಸಿದೆ.

ಹಣದುಬ್ಬರ ಮತ್ತು ಕಚ್ಚಾ ಸರಕುಗಳ ಬೆಲೆ ಹೆಚ್ಚಳದಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಈ ವೆಚ್ಚದ ಒತ್ತಡ ಸರಿದೂಗಿಸುವುದಕ್ಕಾಗಿ 2024ರ ಜನವರಿಯಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ಕಂಪನಿಯು ಯೋಜಿಸಿದೆ. ಕಂಪನಿಯು ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹೆಚ್ಚಳವನ್ನು ಸರಿದೂಗಿಸಲು ಗರಿಷ್ಠ ಪ್ರಯತ್ನಗಳನ್ನು ಈಗಾಗಲೇ ಮಾಡಿದೆ. ಆದಾಗ್ಯೂ, ಅನಿವಾರ್ಯವಾಗಿ ಸ್ವಲ್ಪ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಬೇಕಾಗುತ್ತದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.

Alto K10, S-Presso, Eeco, Celerio, WagonR, Ignis, Swift, Baleno, Dzire, Ciaz, Fronx , Brezza, Jimny, Grand Vitara, Ertiga, XL6 ಮತ್ತು Invicto ನಂತಹ ಮಾದರಿಗಳನ್ನು ಮಾರುತಿ ಸುಜುಕಿ ಮಾರಾಟ ಮಾಡುತ್ತದೆ.

advertisement

ಮಾರುತಿ ಸುಜುಕಿ (Maruti Suzuki) ಇಂಡಿಯಾ ತನ್ನ ಮಾರುತಿ ಆಲ್ಟೋ ಕಾರಿನಿಂದ ಹಿಡಿದು ಮಲ್ಟಿ-ಯುಟಿಲಿಟಿ ವೆಹಿಕಲ್ ಇನ್ವಿಕ್ಟೋವರೆಗೆ 3.99 ಲಕ್ಷ ರೂಪಾಯಿ ಮತ್ತು 28.42 ಲಕ್ಷ ರೂಪಾಯಿ ಬೆಲೆಯ ವಾಹನಗಳ ಶ್ರೇಣಿಯನ್ನು ಮಾರಾಟ ಮಾಡುತ್ತಿದೆ. ಈ ವಾಹನಗಳ ಮೇಲೆ ಬೆಲೆ ಏರಿಕೆ ಪ್ರಮಾಣವನ್ನು ಕಂಪನಿಯು ನಿರ್ದಿಷ್ಟವಾಗಿ ಇನ್ನೂ ಹೇಳಿಲ್ಲ. ಈ ಬೆಲೆ ಏರಿಕೆಯಿಂದ ಮಾದರಿಗೆ ವ್ಯತ್ಯಯವಾಗಲಿದೆ ಎಂದಷ್ಟೆ ಕಂಪೆನಿ ತಿಳಿಸಿದೆ.

ಮಾರುತಿ ಸುಜುಕಿ ಕಂಪನಿಯು ಏಪ್ರಿಲ್ 1ರಂದು ತನ್ನ ಎಲ್ಲ ಮಾದರಿ ವಾಹನಗಳ ಬೆಲೆಯನ್ನು ಹೆಚ್ಚಳ ಮಾಡಿತ್ತು. ಇದಕ್ಕೂ ಮೊದಲು ಈ ವರ್ಷ ಜನವರಿಯಲ್ಲಿ ಕೂಡ ತನ್ನ ಎಲ್ಲ ವಾಹನಗಳ ಬೆಲೆಗಳನ್ನು ಶೇಕಡ 1.1 ಹೆಚ್ಚಳ ಮಾಡಿತ್ತು.

ಇದೇ ವೇಳೆ, ಅಕ್ಟೋಬರ್ 2023ರಲ್ಲಿ ಮಾರುತಿ ಸುಜುಕಿ ಇಂಡಿಯಾ ತನ್ನ ವಾಹನಗಳ ಮಾರಾಟದಲ್ಲಿ ಗರಿಷ್ಠ ಮಾಸಿಕ ಮಾರಾಟದ ದಾಖಲೆ ಬರೆದಿದೆ. ಅಕ್ಟೋಬರ್‌ನಲ್ಲಿ ಮಾರುತಿ ಸುಜುಕಿಯ 1,99,217 ವಾಹನಗಳನ್ನು ಮಾರಾಟ ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡ 19 ಬೆಳವಣಿಗೆ ಎಂದು ಕಂಪನಿ ಹೇಳಿದೆ.

advertisement

Leave A Reply

Your email address will not be published.