Karnataka Times
Trending Stories, Viral News, Gossips & Everything in Kannada

Aadhar Card: ಈ ರೀತಿಯಾಗಿ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಲಾಕ್ ಮಾಡಿ ವಂಚನೆಯಿಂದ ತಪ್ಪಿಸಿಕೊಳ್ಳಿ.

advertisement

ಇಂದು ಆಧಾರ್ ಕಾರ್ಡ್ ಅನ್ನೋದು ಮುಖ್ಯ ದಾಖಲೆ ಯಾಗಿದ್ದು, ಯಾವುದೇ ಕಛೇರಿಗಳಲ್ಲಿ ಮೊದಲು ಕೇಳುವುದೇ ಆಧಾರ್ ಕಾರ್ಡ್ ಮಾಹಿತಿ‌. ಹಾಗಾಗಿ ಇಂದು ಆಧಾರ್ ಕಾರ್ಡ್ (Aadhar Card) ಅನ್ನೋದು ಚಿಕ್ಕ ಮಗುವಿನಿಂದ ಹಿಡಿದು ಹಿರಿಯವರೆಗೂ ಬಹಳ ಮುಖ್ಯ. ಅದೇ ರೀತಿ ಸರಕಾರದ ಯಾವುದಾದರೂ ಸೌಲಭ್ಯ ಪಡೆಯಬೇಕಾದರೂ ಆಧಾರ್ ಕಾರ್ಡ್ ಬಹಳ ಮುಖ್ಯವಾಗುತ್ತದೆ. 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಬೇರೆ ಬೇರೆ ರೀತಿಯ ಪ್ರಕ್ರಿಯೆಗೆ ಬಳಕೆ ಮಾಡಲಾಗುತ್ತದೆ. ಆದರೆ ಇಂದು ನಿಮ್ಮ ಆಧಾರ್ ಅನ್ನು ಬಳಸಿಕೊಂಡು ದುರುಪಯೋಗ ಮಾಡಿಕೊಳ್ಳುವ ಘಟನೆಗಳು ಹೆಚ್ಚಾಗಿ ನಡೆದಿದೆ. ಹಾಗಾಗಿ ಯಾರ ಜೊತೆಯೂ ನಿಮ್ಮ ಆಧಾರ್ ಕಾರ್ಡ್ ಮಾಹಿತಿ ಯನ್ನು ಹಂಚಿಕೊಳ್ಳುವಾಗ ಜಾಗೃತರಾಗಿರಿ‌.

ನವೀಕರಿಸಲು ಮರೆಯದಿರಿ

ಆಧಾರ್‌ ಕಾರ್ಡ್‌ ಮಾಡಿಸಿದರೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಇದನ್ನು ಅಪ್ಡೇಟ್‌ ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮೂಲಕ ಪ್ರತಿ 10 ವರ್ಷಗಳಿಗೊಮ್ಮೆ ತಮ್ಮ ಆಧಾರ್ ವಿವರಗಳನ್ನು ನವೀಕರಿಸಲು ಸಲಹೆಯನ್ನು ನೀಡುತ್ತದೆ. ಆಧಾರ್ ಕಾರ್ಡ್‌ ಅನ್ನು ಉಚಿತವಾಗಿ ಅಪ್‌ಡೇಟ್ ಮಾಡುವ ಸೌಲಭ್ಯ ಕೂಡ ನೀಡಿದೆ.ಈಗಾಗಲೇ ಈ ದಿನಾಂಕವನ್ನು ಯುಐಡಿಎಐ (UIDAI) ಹಲವಾರು ಬಾರಿ ವಿಸ್ತರಣೆ ಮಾಡುತ್ತಾ ಬಂದಿದೆ. ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಡಿಸೆಂಬರ್ 14ರವರೆಗೆ ಉಚಿತವಾಗಿ ಅಪ್‌ಡೇಟ್ ಮಾಡಲು ಅವಕಾಶ ನೀಡಿದ್ದು ಜನರು ಈ ಸೌಲಭ್ಯ ವನ್ನು ಬಳಸಿಕೊಳ್ಳಬಹುದಾಗಿದೆ. ತಮ್ಮ‌ ಹೆಸರು, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ಮನೆಯ ವಿಳಾಸ ಮಾಹಿತಿ ಮೊದಲಾದ ಮಾಹಿತಿಯನ್ನು ಅಪ್ಡೇಟ್‌ ಮಾಡಲು ಅವಕಾಶ ಇದೆ.

ವಂಚನೆಯ ವಹಿವಾಟು

advertisement

ಇಂದು ಆಧಾರ್ ಕಾರ್ಡ್ ಮೂಲಕ ವಂಚನೆಯ ವಹಿವಾಟುಗಳು ಹೆಚ್ಚಾಗಿವೆ. ಆಧಾರ್ ಬಯೋಮೆಟ್ರಿಕ್ ಡೇಟಾ (Biometric Data) ವನ್ನು ದುರುಪಯೋಗಪಡಿಸಿ ಹಣ ಕದಿಯುವ ಖದೀಮರು ಹೆಚ್ಚಾಗಿದ್ದಾರೆ. ನಾಗರಿಕರು ತಮ್ಮ ಬಯೋಮೆಟ್ರಿಕ್ ಡೇಟಾವನ್ನು ಸುರಕ್ಷಿತವಾಗಿರಿಸುವ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ ವಾಗುತ್ತದೆ.

ಲಾಕ್ ಮಾಡಬಹುದು

ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದು ಕೂಡ ಮುಖ್ಯ ವಾಗುತ್ತದೆ. ಆಧಾರ್ ಕಾರ್ಡ್‌ದಾರರು ಫಿಂಗರ್‌ ಪ್ರಿಂಟ್‌ಗಳು, ಐರಿಸ್ ಸ್ಕ್ಯಾನ್‌ಗಳು, ವೈಯಕ್ತಿಕ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ರಕ್ಷಿಸಿಕೊಳ್ಳಲು ನೀವು ಆಧಾರ್ ಲಾಕ್ ಮಾಡಬಹುದಾಗಿದೆ.

ಲಾಕ್ ಮಾಡುವುದು ಹೇಗೆ?

UIDAI ವೆಬ್‌ಸೈಟ್ ಗೆ ಭೇಟಿ ಕೊಟ್ಟು ನಿಮ್ಮ ಆಧಾರ್ ಖಾತೆಗೆ ಲಾಗಿನ್ ಮಾಡಿ‌.ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ, ನಂತರದಲ್ಲಿ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದ್ದು, ಇಲ್ಲಿ ನೀವು ನನ್ನ ಆಧಾರ್ ಎಂಬಲ್ಲಿ ಕ್ಲಿಕ್ ಕೊಟ್ಟಲ್ಲಿ ಬಯೋಮೆಟ್ರಿಕ್ಸ್ ಅನ್ನು ಲಾಕ್/ಅನ್‌ಲಾಕ್ ಮಾಡುವ ಆಯ್ಕೆ ಇರುತ್ತದೆ. ನೀವು ಲಾಕ್ ಮಾಡಲು ಲಾಕ್ ಬಯೋಮೆಟ್ರಿಕ್ಸ್ ಅನ್ನು ಕ್ಲಿಕ್ ಮಾಡುವ ಮೂಲಕ ಈ ವಿಧಾನ‌ ಅನುಸರಿಸಬಹುದಾಗಿದೆ.

advertisement

Leave A Reply

Your email address will not be published.