Karnataka Times
Trending Stories, Viral News, Gossips & Everything in Kannada

SBI Credit Card: SBI ಅಲ್ಲಿರುವ ವಿವಿಧ ಬಗೆಯ ಕ್ರೆಡಿಟ್ ಕಾರ್ಡ್‌ಗಳು ಮತ್ತು ಅದರ ವಾರ್ಷಿಕ ಶುಲ್ಕಗಳು.

advertisement

ನಮ್ಮ ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ವಿವಿಧ ರೀತಿಯ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತದೆ. ಬ್ಯಾಂಕಿನಿಂದ ಕ್ರೆಡಿಟ್ ಕಾರ್ಡ್‌ಗಳಲ್ಲಿ ಗ್ರಾಹಕರಿಗೆ ಅನೇಕ ರೀತಿಯ ರಿಯಾಯಿತಿಗಳು ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಸಹ ನೀಡಲಾಗುತ್ತದೆ. ಆದರೆ ಈ ಕ್ರೆಡಿಟ್ ಕಾರ್ಡ್‌ಗಳ ಬಳಕೆಗಾಗಿ ಬ್ಯಾಂಕ್ ತನ್ನ ಗ್ರಾಹಕರಿಂದ ಕೆಲವು ಶುಲ್ಕಗಳನ್ನು ಸಹ ವಿಧಿಸುತ್ತದೆ. ಕ್ರೆಡಿಟ್ ಕಾರ್ಡ್ ಸಂಬಂಧಿತ ನಿಯಮಗಳು ಮತ್ತು ಸೇವೆಗಳಿಗಾಗಿ ಗ್ರಾಹಕರಿಗೆ ಈ ಶುಲ್ಕಗಳನ್ನು ವಿಧಿಸಲಾಗುತ್ತದೆ.

ಎಸ್‌ಬಿಐ ಕ್ರೆಡಿಟ್ ಕಾರ್ಡ್‌ (SBI Credit Card)ನಲ್ಲಿ ವಾರ್ಷಿಕ ಶುಲ್ಕ ಮತ್ತು ನವೀಕರಣ ಶುಲ್ಕ ಎರಡನ್ನೂ ಪಾವತಿಸಬೇಕಾಗುತ್ತದೆ. ವಾರ್ಷಿಕ ಶುಲ್ಕವನ್ನು ಒಮ್ಮೆ ಪಾವತಿಸಬೇಕಾದರೆ, ನವೀಕರಣ ಶುಲ್ಕವನ್ನು ಪ್ರತಿವರ್ಷ ಪಾವತಿಸಬೇಕಾಗುತ್ತದೆ. ಎಸ್‌ಬಿಐನ ಕ್ರೆಡಿಟ್ ಕಾರ್ಡ್ಗಳಲ್ಲಿ ಹಲವು ಬಗೆಗಳಿವೆ. ನಿಮ್ಮ ಅಗತ್ಯತೆಗಳನ್ನು ನೋಡಿಕೊಂಡು ಅದನ್ನು ನೀವು ಪಡೆಯಬಹುದು.

1. ಕ್ಯಾಶ್ಬ್ಯಾಕ್ SBI ಕಾರ್ಡ್(Cashback SBI Card)

ಕಾರ್ಡ್‌ನ ವಾರ್ಷಿಕ ಶುಲ್ಕ: 999 ರೂಪಾಯಿ
ಕ್ಯಾಶ್‌ಬ್ಯಾಕ್ ಮತ್ತು ಆನ್‌ಲೈನ್ ಶಾಪಿಂಗ್‌ಗೆ ಈ ಕಾರ್ಡ್ ಸೂಕ್ತವಾಗಿದೆ.

2. BPCL SBI ಕಾರ್ಡ್ (BPCL SBI Credit Card)

ಕಾರ್ಡ್‌ನ ವಾರ್ಷಿಕ ಶುಲ್ಕ: 499 ರೂಪಾಯಿ
ವಾಹನಗಳಿಗೆ ಇಂಧನಗಳನ್ನು ಹಾಕಿಸಲು ಬಳಸಲು ಸೂಕ್ತವಾಗಿದೆ.

3. ಯಾತ್ರಾ SBI ಕ್ರೆಡಿಟ್ ಕಾರ್ಡ್ (Yatra SBI Credit Card)

ಕಾರ್ಡ್‌ನ ವಾರ್ಷಿಕ ಶುಲ್ಕ: 499 ರೂಪಾಯಿ
ದೂರದ ಹಾಗೂ ಹತ್ತಿರದ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಹ ಕಾರ್ಡ್ ಇದು.

advertisement

4. ನೇಚರ್ ಬಾಸ್ಕೆಟ್ SBI ಕಾರ್ಡ್ ಎಲೈಟ್ (Nature’s Basket SBI Card Elite)

ಕಾರ್ಡ್‌ನ ವಾರ್ಷಿಕ ಶುಲ್ಕ: 4,999 ರೂಪಾಯಿ
ಮನೆಯ ಹಾಗೂ ಅಂಗಡಿಯ ದಿನಸಿ ಶಾಪಿಂಗ್‌ಗೆ ಈ ಕಾರ್ಡ್ ಸೂಕ್ತವಾಗಿದೆ.

5. SBI ಸಿಂಪಲ್ ಕಾರ್ಡ್ (SBI Simple Card)

ಕಾರ್ಡ್‌ನ ವಾರ್ಷಿಕ ಶುಲ್ಕ: 499 ರೂಪಾಯಿ
ಊಟ, ಚಲನಚಿತ್ರಗಳು, ದಿನಸಿ ಮತ್ತು ಡಿಪಾರ್ಟ್‌ಮೆಂಟ್ ಸ್ಟೋರ್‌ಗಳಿಗೆ ಸೂಕ್ತವಾಗಿದೆ.

6. IRCTC SBI ಪ್ಲಾಟಿನಂ ಕಾರ್ಡ್(IRCTC SBI Platinum Card)

ಕಾರ್ಡ್‌ನ ವಾರ್ಷಿಕ ಶುಲ್ಕ: 500 ರೂಪಾಯಿ
ರೈಲ್ವೆ ಟಿಕೆಟ್‌ಗಳಿಗೆ ಸೂಕ್ತವಾಗಿದೆ.

7. SBI ಕಾರ್ಡ್ (SBI Card)

ಕಾರ್ಡ್‌ನ ವಾರ್ಷಿಕ ಶುಲ್ಕ: 499 ರೂಪಾಯಿ
ಆನ್‌ಲೈನ್ ಖರ್ಚಿಗೆ ಈ ಕಾರ್ಡ್ ಬಳಸಲು ಉತ್ತಮವಾಗಿದೆ.

advertisement

Leave A Reply

Your email address will not be published.