Karnataka Times
Trending Stories, Viral News, Gossips & Everything in Kannada

Railway Ticket: ಒಂದೇ ರೈಲ್ವೆ ಟಿಕೆಟ್ ನಲ್ಲಿ 56 ದಿನ ಪ್ರಯಾಣಿಸಬಹುದು; ಇಂದಿನಿಂದಲೇ ಬುಕಿಂಗ್ ಆರಂಭ!

advertisement

ನೀವು ಭಾರತೀಯ ರೈಲ್ವೆಯಲ್ಲಿ ಹೆಚ್ಚಾಗಿ ಪ್ರಯಾಣಿಸುವವರಾಗಿದ್ದರೆ ಈ ಸುದ್ದಿ ನಿಮಗಾಗಿ. ಯಾಕೆಂದರೆ ರೈಲ್ವೆ ಸರ್ಕ್ಯುಲರ್ ಜರ್ನಿ ಟಿಕೆಟ್ (Railway Circular Journey Ticket) ಎನ್ನುವ ವಿಶೇಷ ಟಿಕೆಟ್ ಅನ್ನು ಬಿಡುಗಡೆ ಮಾಡಲಾಗಿದ್ದು ಈ ಮೂಲಕ ಪ್ರಯಾಣಿಕರು ಅತಿ ಹೆಚ್ಚು ಬೆನಿಫಿಟ್ ಪಡೆದುಕೊಳ್ಳಬಹುದು.

ಅತಿ ಅಗ್ಗದ ಹಾಗೂ ಸುರಕ್ಷಿತ ಮಾರ್ಗವಾಗಿರುವ ರೈಲ್ವೆ ಮಾರ್ಗದಲ್ಲಿ ಪ್ರತಿದಿನ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಹಳ ವೇಗವಾಗಿ ತಲುಪಬಹುದಾದ ಎಕ್ಸ್ಪ್ರೆಸ್ ರೈಲ್ವೆ ಮಾರ್ಗಗಳು ಕೂಡ ಇತ್ತೀಚಿನ ದಿನಗಳಲ್ಲಿ ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ರೈಲ್ವೆ ಪ್ರಯಾಣ ಮಾಡುವವರಿಗೆ ಕೆಲವು ವಿಶೇಷ ಸೌಲಭ್ಯಗಳನ್ನು ಕೂಡ ರೈಲ್ವೆ ಇಲಾಖೆ (Railway Department) ನೀಡುತ್ತದೆ ಇದರ ಬಗ್ಗೆ ಹೆಚ್ಚಿನವರಿಗೆ ಅರಿವು ಇರುವುದಿಲ್ಲ ಇಂತಹ ಒಂದು ಅತ್ಯದ್ಭುತ ಸೇವೆಯ ಬಗ್ಗೆ ನಾವು ನಿಮಗೆ ತಿಳಿಸಿ ಕೊಡುತ್ತಿದ್ದೇವೆ.

ರೈಲ್ವೇಸ್ ಸರ್ಕ್ಯುಲರ್ ಜರ್ನಿ ಟಿಕೆಟ್ (Railway Circular Journey Ticket):

ರೈಲ್ವೆ ನಿಲ್ದಾಣದಲ್ಲಿ ಒಂದು ಟಿಕೆಟ್ (Railway Ticket) ಪಡೆದುಕೊಂಡು ಒಂದು ಬಾರಿ ಮಾತ್ರ ರೈಲಿನಲ್ಲಿ ಪ್ರಯಾಣಿಸಬಹುದು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ರೈಲ್ವೆ ಇದೀಗ ಹೊಸ ಸೇವೆಯನ್ನು ಆರಂಭಿಸಿದ್ದು ರೈಲ್ವೆ ಸರ್ಕ್ಯುಲರ್ ಜರ್ನಿ (Railway Circular Journey) ಎನ್ನುವ ವಿಶೇಷ ಟಿಕೆಟ್ ಬಿಡುಗಡೆ ಮಾಡಿದೆ ಇದರಲ್ಲಿ ಪ್ರಯಾಣಿಕರು 8 ವಿವಿಧ ನಿಲ್ದಾಣಗಳಿಂದ 56 ದಿನಗಳ ವರೆಗೆ ಒಂದೇ ಒಂದು ಟಿಕೆಟ್ ಮೂಲಕ ಪ್ರಯಾಣಿಸಬಹುದಾಗಿದೆ. ತೀರ್ಥಕ್ಷೇತ್ರಕ್ಕೆ ಅಥವಾ ಪ್ರವಾಸಕ್ಕೆ ಹೋಗುವವರಿಗೆ ಈ ಟಿಕೆಟ್ ಹೆಚ್ಚು ಅನುಕೂಲಕರವಾಗಲಿದೆ.

advertisement

ದರವು ಕಡಿಮೆ:

ನೀವು ಸಾಮಾನ್ಯ ಟಿಕೆಟ್ (Railway Ticket) ಖರೀದಿಸುವುದಕ್ಕಿಂತ ಈ ರೀತಿ ಸರ್ಕ್ಯುಲರ್ ಟಿಕೆಟ್ ಖರೀದಿಸಿದರೆ ವೆಚ್ಚವೂ ಕೂಡ ಕಡಿಮೆ ಆಗುತ್ತದೆ ಎನ್ನಬಹುದು ಸಾಮಾನ್ಯ ಟಿಕೆಟ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬೇರೆ ಬೇರೆ ಟಿಕೆಟ್ ತೆಗೆದುಕೊಂಡಾಗ ಅದರ ವೆಚ್ಚ ಜಾಸ್ತಿ ಆಗುತ್ತದೆ ಆದರೆ ನೀವು ಒಟ್ಟು 56 ದಿನಗಳ ವರೆಗೆ ಪ್ರಯಾಣಿಸಬಹುದಾದ ವಿಶೇಷ ಟಿಕೆಟ್ ತೆಗೆದುಕೊಂಡಾಗ ನಿಮಗೆ ಡಿಸ್ಕೌಂಟ್ ಕೂಡ ಸಿಗುತ್ತದೆ.

ಯಾವ ರೀತಿ ಪ್ರಯಾಣ ಮಾಡಬಹುದು?

ರೈಲಿನ ಸರ್ಕ್ಯುಲರ್ ಟಿಕೆಟ್ (Railway Circular Journey Ticket) ಅಥವಾ ವೃತ್ತಾಕಾರದ ಪ್ರಯಾಣಕ್ಕೆ ಟಿಕೆಟ್ ಪಡೆದುಕೊಂಡರೆ ಯಾವ ರೀತಿ ಪ್ರಯಾಣ ಬೆಳೆಸಬಹುದು ಎಂಬುದನ್ನು ನೋಡೋಣ. ಉದಾಹರಣೆಗೆ ಉತ್ತರ ರೈಲ್ವೆಯಿಂದ ನವದೆಹಲಿ ಹಾಗೂ ಕನ್ಯಾಕುಮಾರಿಗೆ ವೃತ್ತಾಕಾರವಾಗಿ ಪ್ರಯಾಣಿಸುತ್ತೀರಿ ಎಂದು ಭಾವಿಸಿ ಆಗ ನಮಗೆ ಪ್ರಯಾಣ ಆರಂಭವಾಗುತ್ತದೆ ಹಾಗೂ ನವದೆಹಲಿಯಲ್ಲಿ ಈ ಪ್ರಯಾಣ ಕೊನೆಗೊಳ್ಳುತ್ತದೆ. ಮಧ್ಯದಲ್ಲಿ ನೀವು ಮಥುರದಿಂದ ಮುಂಬೈ ಸೆಂಟ್ರಲ್, ಮರ್ಮಗೋವಾ, ಬೆಂಗಳೂರು, ಮೈಸೂರು, ಉದಕಮಂಡಲಮ್, ತಿರುವನಂತಪುರಂ, ಕನ್ಯಾಕುಮಾರಿ ಇಷ್ಟು ಸ್ಥಳಗಳನ್ನು ಸುತ್ತಾಡಿ ಬರಬಹುದು.

ಒಮ್ಮೆ ಟಿಕೆಟ್ ಖರೀದಿಸಿ 56 ದಿನ ಪ್ರಯಾಣಿಸಿ:

ನೀವು ಒಮ್ಮೆ ಟಿಕೆಟ್ ಖರೀದಿ ಮಾಡಿದರೆ 56 ದಿನಗಳವರೆಗೆ ಮಾನ್ಯತೆ ಪಡೆದುಕೊಂಡಿರುತ್ತದೆ. ಈ ಟಿಕೇಟ್ ಪಡೆದುಕೊಳ್ಳಲು ನೀವು ನೇರವಾಗಿ ಕೌಂಟರ್ ಗೆ ಹೋಗಿ ಟಿಕೆಟ್ ಪಡೆದುಕೊಳ್ಳಲು ಸಾಧ್ಯವಿಲ್ಲ ಇದಕ್ಕಾಗಿ ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ. ನಂತರ ನಿಲ್ದಾಣದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರ ಮಾರ್ಗದರ್ಶನದಲ್ಲಿ ನಿಮಗೆ ಟಿಕೆಟ್ ನೀಡಲಾಗುತ್ತದೆ. ಹಾಗಾಗಿ ಪದೇ ಪದೇ ಟಿಕೆಟ್ ಕೌಂಟರ್ ನಲ್ಲಿ ನಿಲ್ಲದೆ 56 ದಿನಗಳ ವರೆಗೆ ಒಮ್ಮೆ ಟಿಕೆಟ್ ಖರೀದಿಸಿ ದೇಶಾದ್ಯಂತ ಪ್ರಯಾಣ ಬೆಳೆಸಬಹುದು.

advertisement

Leave A Reply

Your email address will not be published.