Karnataka Times
Trending Stories, Viral News, Gossips & Everything in Kannada

Indian Railways: ಡಿಸೆಂಬರ್ ನಿಂದ ಫೆಬ್ರವರಿಯವರಿಗೆ ರದ್ದುಗೊಳ್ಳಲಿದೆ ಈ ರೈಲುಗಳು; ಈ ಮಾರ್ಗವಾಗಿ ಪ್ರಯಾಣಿಸುವವರು ತಿಳಿದುಕೊಳ್ಳಿ!

advertisement

ಇನ್ನೇನು ಚಳಿಗಾಲ ಆರಂಭವಾಯಿತು. ಇದು ನಮ್ಮ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ರಸ್ತೆ ಸಾರಿಗೆ ಹಾಗೂ ವಾಯು ಸಾರಿಗೆ ಮತ್ತು ರೈಲ್ವೆ ಸಾರಿಗೆಯ ಮೇಲು ಕೂಡ ಪರಿಣಾಮ ಬೀರುತ್ತದೆ ಇದೇ ಕಾರಣಕ್ಕೆ ಕೆಲವು ಕಡೆ ಡಿಸೆಂಬರ್ ತಿಂಗಳಿನಿಂದ ಫೆಬ್ರವರಿ ವರೆಗೆ ರೈಲ್ವೆ ಮಾರ್ಗವನ್ನು ಮುಚ್ಚಲಾಗುತ್ತದೆ ಈ ಮಾರ್ಗದಲ್ಲಿ ಪ್ರಯಾಣಿಸುವವರು ನಾಲ್ಕು ತಿಂಗಳುಗಳ ಕಾಲ ಪ್ರಯಾಣಕ್ಕೆ ಬೇರೆ ಮಾರ್ಗವನ್ನೇ ಆಯ್ದು ಕೊಳ್ಳಬೇಕು ಹಾಗಾದ್ರೆ ಯಾವ ರೈಲ್ವೆ ಪ್ರಯಾಣ ಸ್ಥಗಿತಗೊಳ್ಳಲಿದೆ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಚಳಿಗಾಲದ ಮಂಜಿನಿಂದಾಗಿ ಮುಂಚಿತವಾಗಿಯೇ ಯೋಚಿಸಿ ಕೆಲವು ರೈಲ್ವೆ ಮಾರ್ಗವನ್ನು ಮುಚ್ಚಲಾಗುತ್ತದೆ. ಉದಾಹರಣೆಗೆ ಈಶಾನ್ಯ ರೈಲ್ವೆ ವಲಯದಿಂದ ಚಲಿಸುವ ಛಪ್ರಾ ದುರ್ಗ (Chhapra Durg Railways) – ಛಪ್ರಾ ಸಾರನಾಥ್ ಎಕ್ಸ್ಪ್ರೆಸ್ (Chhapra Sarnath Express) ಅನ್ನು ಸದ್ಯ ರದ್ದು ಪಡಿಸಲಾಗುತ್ತಿದೆ.

ಡಿಸೆಂಬರ್ ನಿಂದ ಫೆಬ್ರವರಿವರೆಗೆ ಈ ರೈಲ್ವೆ ವಿಚಾರ ಸ್ಥಗಿತ:

ಛಪ್ರಾ ದುರ್ಗ (Chhapra Durg Railways) – ಛಪ್ರಾ ಸಾರನಾಥ್ ಎಕ್ಸ್ಪ್ರೆಸ್ (Chhapra Sarnath Express) ಅನ್ನು ಈಶಾನ್ಯ ರೈಲ್ವೆಯ ಭಾಗದಲ್ಲಿ ಮಂಜಿನಿಂದಾಗಿ ಡಿಸೆಂಬರ್ 2203 ರಿಂದ ಫೆಬ್ರುವರಿ 29 204ರ ವರೆಗೆ ಬೇರೆ ಬೇರೆ ದಿನಾಂಕಗಳಲ್ಲಿ ಪ್ರಯಾಣ ಸ್ಥಗಿತಗೊಳಿಸುವಂತೆ ರೈಲ್ವೆ ಇಲಾಖೆ ಸೂಚನೆ ನೀಡಿದೆ. ಹಾಗಾಗಿ ಯಾವ ಮಾರ್ಗದಲ್ಲಿ ಯಾವ ದಿನಾಂಕ ಸ್ಥಗಿತಗೊಳ್ಳಲಿದೆ ಎಂಬುದನ್ನು ತಿಳಿದುಕೊಳ್ಳಿ.

Train NO. 15159 ಚಾಪ್ರಾ-ದುರ್ಗ್ ಸಾರನಾಥ್ ಎಕ್ಸ್‌ಪ್ರೆಸ್:

advertisement

ಡಿಸೆಂಬರ್ ತಿಂಗಳಿನಲ್ಲಿ ರೈಲು ಪ್ರಯಾಣ ರದ್ದು ಪಡಿಸಲಾದ ದಿನಗಳು: ದಿನಾಂಕ 02, 04, 06, 09,11, 13, 16, 18, 20, 23, 25, 27, 30. ಅಂದರೆ ಒಂದು ದಿನ ಬಿಟ್ಟು ಒಂದು ದಿನ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಜನವರಿ ತಿಂಗಳಿನಲ್ಲಿ ರೈಲು ಪ್ರಯಾಣ ರದ್ದು ಪಡಿಸಲಾದ ದಿನಗಳು: 01, 03, 06, 08, 10, 13, 15, 17, 20, 22, 24, 27, 29, 31 ತಿಂಗಳ 15 ದಿನ ಪ್ರಯಾಣ ಸ್ಥಗಿತಗೊಳ್ಳಲಿದೆ.
ಫೆಬ್ರವರಿ ತಿಂಗಳಿನಲ್ಲಿ ರೈಲು ಪ್ರಯಾಣ ರದ್ದು ಪಡಿಸಲಾದ ದಿನಗಳು: 03, 05, 07, 10, 12, 14, 17, 19, 21, 24, 26, 28 ಇಷ್ಟು ದಿನ ಪ್ರಯಾಣಕ್ಕೆ ಅನುಮತಿ ಇಲ್ಲ.

Train No. 15160 ದುರ್ಗ್-ಛಾಪ್ರಾ ಸಾರನಾಥ್ ಎಕ್ಸ್‌ಪ್ರೆಸ್:

ಡಿಸೆಂಬರ್ ತಿಂಗಳಿನಲ್ಲಿ ರೈಲು ಪ್ರಯಾಣ ರದ್ದು ಪಡಿಸಲಾದ ದಿನಗಳು: 03, 05, 07, 10, 12, 14, 17, 19, 21, 24, 26, 28, 31 ಈ ದಿನಾಂಕ ಹೊರತುಪಡಿಸಿ ಉಳಿದ ದಿನ ಪ್ರಯಾಣಕ್ಕೆ ಅನುಮತಿ ಇದೆ.
ಜನವರಿ ತಿಂಗಳಿನಲ್ಲಿ ರೈಲು ಪ್ರಯಾಣ ರದ್ದು ಪಡಿಸಲಾದ ದಿನಗಳು: 02, 04, 07, 09, 11, 14, 16, 18, 21, 23, 25, 28, 30 ಇಷ್ಟು ದಿನಗಳು ಪ್ರಯಾಣಕ್ಕೆ ನಿಶಿದ್ಧ.
ಫೆಬ್ರವರಿ ತಿಂಗಳಿನಲ್ಲಿ ರೈಲು ಪ್ರಯಾಣ ರದ್ದು ಪಡಿಸಲಾದ ದಿನಗಳು: 01, 04, 06, 08, 11, 13, 15, 18, 20, 22, 25, 27, 29  ಒಟ್ಟಾರೆಯಾಗಿ ತಿಂಗಳ ಹದಿನೈದು ದಿನ ಪ್ರಯಾಣ ಮಾಡಬಹುದಾಗಿದ್ದರೆ ಇನ್ನು ಹದಿನೈದು ದಿನ ರೈಲು ಪ್ರಯಾಣ ಸ್ಥಗಿತಗೊಳಿಸಲಾಗುತ್ತದೆ. ಅತಿಯಾದ ಮಂಜಿನ ಸಮಸ್ಯೆ ಇದ್ದರೆ ಈ ದಿನಾಂಕಗಳಲ್ಲಿ ವ್ಯತ್ಯಾಸವೂ ಆಗಬಹುದು.

advertisement

Leave A Reply

Your email address will not be published.