Karnataka Times
Trending Stories, Viral News, Gossips & Everything in Kannada

LIC Pension Plan: ಒಮ್ಮೆ ಠೇವಣಿ ಮಾಡಿದರೆ 50,000 ಪಿಂಚಣಿ ಪಡೆಯಬಹುದು; ಎಲ್ ಐ ಸಿ ಯ ಬೆಸ್ಟ್ ಉಳಿತಾಯ ಪ್ಲಾನ್!

advertisement

ಎಲ್ಲಾ ಕ್ಷೇತ್ರದಲ್ಲಿಯೂ ದುಡಿಯುವವರಿಗೆ ಸಂಬಳ ಬರಬಹುದು ಆದರೆ ಎಲ್ಲರಿಗೂ ಪಿಂಚಣಿ (Pension) ಸೌಲಭ್ಯ ಇರುವುದಿಲ್ಲ ನಮಗೆಲ್ಲ ಗೊತ್ತಿರುವ ಹಾಗೆ ಸರ್ಕಾರೀ ಕೆಲಸದಲ್ಲಿ ಇದ್ದವರಿಗೆ ಸುಲಭವಾಗಿ ಪಿಂಚಣಿ ಸಿಗುತ್ತದೆ. ಆದರೆ ಖಾಸಗಿ ಕೆಲಸ ಮಾಡುವವರಿಗೆ ಪಿಂಚಣಿ ಸಿಗುವುದಿಲ್ಲ. ಹಾಗಾಗಿ ನೀವು ಯಾವಾಗ ದುಡಿಯುತ್ತೀರೋ ಆಗಿನಿಂದಲೇ ಉಳಿತಾಯ ಮಾಡಲು ಆರಂಭಿಸಿದರೆ 50 ರಿಂದ ಒಂದು ಲಕ್ಷ ರೂಪಾಯಿಗಳವರೆಗೂ ಕೂಡ ಪಿಂಚಣಿ ಪಡೆಯಬಹುದು ಇದಕ್ಕಾಗಿ ಎಲ್ಐಸಿ (LIC) ಅತ್ಯುತ್ತಮ ಪ್ಲಾನ್ ಆರಂಭಿಸಿದೆ.

LIC Pension Plan:

ಎಲ್ಐಸಿ (LIC) ಗ್ರಾಹಕರಿಗೆ ಬೇರೆ ಬೇರೆ ರೀತಿಯಾದಂತಹ ಉಳಿತಾಯ ಯೋಜನೆಯ ಪ್ಲಾನ್ (LIC Savings Plan) ಗಳನ್ನು ಪರಿಚಯಿಸಿದೆ ಅದರಲ್ಲಿ ಈಗ ಹೆಚ್ಚು ಪ್ರಚಲಿತದಲ್ಲಿರುವ ಪಿಂಚಣಿ ಯೋಜನೆ (LIC Pension Plan) ಕೂಡ ಒಂದು. ಯೋಜನೆಯಲ್ಲಿ ನೀವು ಒಟ್ಟು ಮೊತ್ತದ ಹಣವನ್ನು ಠೇವಣಿ ಮಾಡಿದರೆ 40 ವರ್ಷ ವಯಸ್ಸಿನಿಂದಲೇ ಪಿಂಚಣಿ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿದೆ ಪಾಲಿಸಿಯನ್ನ ಸರಳ ಪಿಂಚಣಿ ಯೋಜನೆ ಎಂದು ಹೇಳಲಾಗುತ್ತದೆ.

Simple Pension Plan:

ಸರಳ ಪಿಂಚಣಿ ಯೋಜನೆ (Simple Pension Plan) ಸಿಂಗಲ್ ಪ್ರೀಮಿಯಂ ಪ್ಲಾನ್ ಆಗಿದೆ ಅಂದ್ರೆ ನೀವು ಒಂದೇ ಬಾರಿ ಹಣವನ್ನು ಡೆಪಾಸಿಟ್ ಇಡಬೇಕು ನೀವು ಇಟ್ಟ ಈ ಹಣ ನಿಮ್ಮ ಮುಂದಿನ ಭವಿಷ್ಯಕ್ಕೆ ದೊಡ್ಡ ಮೊತ್ತದ ಹಣವಾಗಿ ಬದಲಾಗಲಿದೆ.

advertisement

Simple Pension Scheme Specialties:

ಕನಿಷ್ಠ 40 ವರ್ಷ ವಯಸ್ಸಾಗಿದ್ದು ಗರಿಷ್ಠ 80 ವರ್ಷ ವಯಸ್ಸಾಗಿದ್ದರೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಇಡೀ ಜೀವನಕ್ಕೆ ಪಿಂಚಣಿ ಲಭ್ಯವಾಗುತ್ತದೆ. ಸರಳ್ ಪಿಂಚಣಿ ಆರಂಭಿಸಿದ ದಿನಾಂಕದಿಂದ 6 ತಿಂಗಳ ಬಳಿಕ ಯಾವಾಗ ಬೇಕಾದರೂ ನಿಮ್ಮ ಪಾಲಿಸಿ ಸರೆಂಡರ್ ಮಾಡಬಹುದು. ಈ ಪಾಲಿಸಿ ಏಕ ಪ್ರೀಮಿಯಂ ಯೋಜನೆ (Premium Plan) ಆಗಿದ್ದು ನೀವು ತಿಂಗಳಿಗೆ ಕನಿಷ್ಠ 1000 ಗಳನ್ನು ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.

ಪಿಂಚಣಿಯ ಮೊತ್ತ:

ನೀವು ಎಷ್ಟು ಪಿಂಚಣಿ ಪಡೆಯಬೇಕು ಎಂಬುದು ನೀವು ಎಷ್ಟು ಠೇವಣಿ ನೀಡುತ್ತೀರಿ ಎನ್ನುವ ಹಣದ ಆಧಾರದ ಮೇಲೆ ನಿರ್ಧಾರಿತವಾಗುತ್ತದೆ. ನೀವು ಕನಿಷ್ಠ ಸಾವಿರ ರೂಪಾಯಿಗಳ ಪಿಂಚಣಿಯನ್ನು ಕೂಡ ಪಡೆದುಕೊಳ್ಳಬಹುದು. 40 ವರ್ಷಕ್ಕೆ ನೀವು 10 ಲಕ್ಷ ಒಂದೇ ಪ್ರೀಮಿಯಂ ಠೇವಣಿ ಮಾಡಿದರೆ ನಿಮಗೆ ವಾರ್ಷಿಕವಾಗಿ 50,250 ಗಳನ್ನು ಪಡೆದುಕೊಳ್ಳಬಹುದು. ಬದುಕಿರುವವರೆಗೂ ಇದೇ ಮೊತ್ತ ಮುಂದುವರಿಯುತ್ತದೆ. ಆದರೆ ಮಧ್ಯಂತರದಲ್ಲಿ ನಿಮಗೆ ಠೇವಣಿ ಇಟ್ಟ ಹಣ ಹಿಂಪಡೆಯಬೇಕು ಎನಿಸಿದರೆ 5% ನಷ್ಟು ಕಡಿತಗೊಳಿಸಿ ನಿಮ್ಮ ಹಣವನ್ನು ಹಿಂತಿರುಗಿ ಕೊಡಲಾಗುತ್ತದೆ.

ಸರಳ ಪಿಂಚಣಿ ಯೋಜನೆಯಲ್ಲಿ ಸಿಗುತ್ತೆ, ಸಾಲ ಸೌಲಭ್ಯ:

ಇನ್ನು ಎಲ್ಐಸಿಯ ಸರಳ ಪಿಂಚಣಿ ಯೋಜನೆ ನೀವು ಆಯ್ದುಕೊಂಡರೆ ನಿಮಗೆ ಇದರ ಹೆಚ್ಚುವರಿ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದು. ಉದಾಹರಣೆಗೆ ಯಾವುದೇ ಗಂಭೀರ ಕಾಯಿಲೆ ಇದ್ದಾಗ ಚಿಕಿತ್ಸೆಗೆ ಹಣ ಬೇಕು ಎಂದಿದ್ದರೆ ನೀವು ಈ ಪಿಂಚಣಿ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ಪಾಲಿಸಿ ಸೆರೆಂಡರ್ ಮಾಡಿದರೆ ಮೂಲ ಬೆಲೆಯ 95% ನಷ್ಟು ಹಣವನ್ನು ಹಿಂಪಡೆದುಕೊಳ್ಳಬಹುದು. ಪಾಲಿಸಿ ಆರಂಭಿಸಿದ ಆರು ತಿಂಗಳ ನಂತರ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾಗಿ ಅತಿ ಹೆಚ್ಚು ಪ್ರಯೋಜನಗಳನ್ನು ಹೊಂದಿರುವ ಈ ಪಿಂಚಣಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದು ಉತ್ತಮ.

advertisement

Leave A Reply

Your email address will not be published.