Karnataka Times
Trending Stories, Viral News, Gossips & Everything in Kannada

Bank Privatization: ಬ್ಯಾಂಕ್ ನ ಹೊಸ ಬದಲಾವಣೆ ಗ್ರಾಹಕರ ಮೇಲೆ ಪರಿಣಾಮ ಬೀರಲಿದ್ಯಾ?

advertisement

ಬ್ಯಾಂಕ್ ಖಾಸಗೀಕರಣಕ್ಕೆ (Bank Privatization) ಸಂಬಂಢ್ಸಿದಂತೆ ಮಹತ್ವದ ಸುದ್ದಿಯನ್ನು RBI ನೀಡಿದೆ. ಇನ್ನು ಮುಂದೆ ಬ್ಯಾಂಕ್ ನ ತನ್ನ ಶೇರ್ ವಾಪಸ್ ತೆಗೆದುಕೊಳ್ಳಲು ಸರ್ಕಾರದ ನಿರ್ಧರಿಸಿದೆ ಎನ್ನಲಾಗಿದೆ. ಬ್ಯಾಂಕಿಂಗ್ ವಲಯದ ನಿಯಂತ್ರಕ ಭಾರತೀಯ ರಿಸರ್ವ್ ಬ್ಯಾಂಕ್ (RBI), ಐಡಿಬಿಐ ಬ್ಯಾಂಕಿನ (IDBI Bank) ಖಾಸಗಿಕರಣದ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಈ ಬ್ಯಾಂಕಿನ ಸಂಭಾವ್ಯ ಖರೀದಿದಾರರ ತನಿಖೆಯನ್ನು ಡಿಸೆಂಬರ್ 23ರ ಒಳಗೆ ಆರ್ ಬಿ ಐ ಪೂರ್ಣಗೊಳಿಸುವ ಸಾಧ್ಯತೆ ಇದೆ. ಈ ಪ್ರಕ್ರಿಯೆ ಪೂರ್ಣಗೊಂಡಾಗ ಐಡಿಬಿಐ ಬ್ಯಾಂಕಿನಲ್ಲಿರುವ ಸರಕಾರದ ಪಾಲನ್ನು ಮಾರಾಟ ಮಾಡುವ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

Bank Privatization:

ಒಂದು ವರದಿಯ ಪ್ರಕಾರ ಐಡಿಬಿಐ ಬ್ಯಾಂಕಿನಲ್ಲಿ ಶೇರುಗಳನ್ನು ಹೊಂದಿರುವ ಕೇಂದ್ರ ಸರ್ಕಾರ (Central Govt) ಮತ್ತು LIC ತನ್ನ ಪಾಲನ್ನು ಮಾರಾಟ ಮಾಡಲು ಬಯಸುತ್ತವೆ. ಬ್ಯಾಂಕಿನಲ್ಲಿ ಕೇಂದ್ರ ಸರಕಾರವು 45.48ರಷ್ಟು ಮತ್ತು LIC 49.24 ರಷ್ಟು ಪಾಲನ್ನು ಹೊಂದಿದೆ. ಈ ಬ್ಯಾಂಕನ್ನು ಖರೀದಿಸಲು Kotak Mahindra Bank ಸಿ ಎಸ್ ಬಿ ಬ್ಯಾಂಕ್ (CBS Bank) ಖರೀದಿಸಲು ಪ್ರಾಥಮಿಕ ಬಿಡ್ಗಳನ್ನು ಸಲ್ಲಿಸಿವೆ. ಇವುಗಳು ಬಿಡ್ ಗಳನ್ನು ಸಲ್ಲಿಸಿದ ನಂತರ RBI ಏಪ್ರಿಲ್ 23 ರಲ್ಲಿ ಸಂಭಾವ್ಯ ಖರೀದಿದಾರರನ್ನು ಪರೀಕ್ಷಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಯಾವುದೇ ಬ್ಯಾಂಕ್ ಖಾಸಗಿಕರಣ ಗೊಳಿಸುವಾಗ ಖರೀದಿದಾರರ ಸಾಮರ್ಥ್ಯವನ್ನು ಪರಿಗಣಿಸಿ ಖರೀದಿದಾರರನ್ನು ನಿರ್ಣಯಿಸಲು RBI ಹನ್ನೆರಡರಿಂದ 18 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.

advertisement

ಸಂಭಾವ್ಯ ಖರೀದಿದಾರರ ತನಿಖೆಯನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಆರ್ ಬಿ ಐ ಸರ್ಕಾರಕ್ಕೆ ತಿಳಿಸಿದೆ. ತನಿಖೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಂದರೆ ಜನವರಿ, ಫೆಬ್ರವರಿ ಅವಧಿಯಲ್ಲಿ ಸರ್ಕಾರವು ಐಡಿಬಿಐ ಬ್ಯಾಂಕಿನಲ್ಲಿ (IDBI Bank) ಶೇರುಗಳನ್ನು ಖರೀದಿಸಲು ಬಿಡ್ ಗಳನ್ನು ಆಹ್ವಾನಿಸುವ ಸಾಧ್ಯತೆ ಇದೆ ಮತ್ತು ಮಾರ್ಚ್ 24ರ ವೇಳೆಗೆ ಬ್ಯಾಂಕಿನ ಖಾಸಗಿಕರಣದ ಹಾದಿಯನ್ನು ಸುಗಮಗೊಳಿಸುತ್ತದೆ. ಸರಕಾರ ತನ್ನ ಪಾಲಿನ ಶೇರುಗಳನ್ನು ಮಾರುವ ಮೂಲಕ 51,000 ಕೋಟಿ ರೂಪಾಯಿಗಳನ್ನು ಪಡೆಯುವ ಗುರಿಯನ್ನು ಹೊಂದಿದೆ.

ಆರ್ ಬಿ ಐ ಖರೀದಿದಾರರ ತನಿಖೆ ಪೂರ್ಣಗೊಳಿಸಿದ ನಂತರ ಬ್ಯಾಂಕನ್ನು ಖರೀದಿಸಲು ಮುಂದಾದ ಬ್ಯಾಂಕುಗಳೊಂದಿಗೆ ಗೌಪ್ಯವಾಗಿ ಇರಿಸಿದ ದಾಖಲೆಗಳನ್ನು ಹಂಚಿಕೊಳ್ಳುತ್ತದೆ. ಈ ದಾಖಲೆಗಳಲ್ಲಿ ಉದ್ಯೋಗಿಗಳ ಪಿಂಚಣಿ ಕಾರ್ಪಸ್ ವೈದ್ಯಕೀಯ ಮತ್ತು ವಿಮಾ ದಾಖಲೆಗಳು ಸೇರಿರುತ್ತವೆ.

Benefit of Bank Privatization:

ಸರಕಾರವು ತನ್ನ ಸಂಪನ್ಮೂಲಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರ್ವಜನಿಕ ಕಂಪನಿಗಳನ್ನು ಖಾಸಗಿಕರಣ ಗೊಳಿಸಲು ಮುಂದಾಗುತ್ತದೆ. ಹಾಗೆಯೇ ಈ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗಿಕರಣಗೊಳಿಸುವ ಮೂಲಕ ಆರ್ಥಿಕ ಸಂಪನ್ಮೂಲಗಳನ್ನು ಗಳಿಸುವುದು ಮಾತ್ರವಲ್ಲದೇ ಆಡಳಿತಾತ್ಮಕ ಜವಾಬ್ದಾರಿಯ ಹೊಣೆಯಿಂದ ಸರಕಾರವು ಮುಕ್ತವಾಗುತ್ತದೆ.

ಇಂತಹ ಖಾಸಗಿಕರಣ ನೀತಿಯನ್ನು ಸಾಮಾನ್ಯವಾಗಿ ಸಂಸ್ಥೆಗಳ ಸಿಬ್ಬಂದಿಗಳು ವಿರೋಧಿಸುತ್ತಾರೆ. ಯಾಕೆಂದರೆ ಖಾಸಗಿಕರಣದ ನಂತರ ಉದ್ಯೋಗಿಗಳ ಸ್ವಾಯತ್ತತೆಗೆ ಧಕ್ಕೆ ಉಂಟಾಗುತ್ತದೆ. ಖಾಸಗಿ ವಲಯದ ಖರೀದಿದಾರರು ವಿಧಿಸುವ ಶರತುಗಳನ್ನು ಒಪ್ಪಿಕೊಂಡು ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ.

advertisement

Leave A Reply

Your email address will not be published.