Karnataka Times
Trending Stories, Viral News, Gossips & Everything in Kannada

PM Svanidhi Yojana: ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಸಬ್ಸಿಡಿ ಯೊಂದಿಗೆ ಕ್ಯಾಶ್ ಬ್ಯಾಕ್ ಕೂಡ ಸಿಗಲಿದೆ, ಕೂಡಲೇ ಅರ್ಜಿ ಸಲ್ಲಿಸಿ.

advertisement

ಕೇಂದ್ರ ಸರಕಾರದಲ್ಲಿ ಮೋದಿ ಅಲೆ ಬಂದಾಗಿನಿಂದಲೂ ಹಲವಾರು ಜನಪರ ಕಾರ್ಯಕ್ರಮಗಳು ಚಿರಪರಿಚಿತವಾಗುತ್ತಿದೆ. ಅದೇ ರೀತಿ ಕೇಂದ್ರ ಸರಕಾರ ಅನೇಕ ಸಂದಿಗ್ಧ ಪರಿಸ್ಥಿತಿಯನ್ನು ಸಹ ಯಶಸ್ವಿಯಾಗಿ ನಿಭಾಯಿಸಿದ್ದು ಅಂತಹ ಅವಧಿಯಲ್ಲಿ ಕೊರೊನಾ ಕಾಲಘಟ್ಟವನ್ನು ಸಹ ಕಾಣಬಹುದು. ಕೊರೊನಾ ಅವಧಿಯಲ್ಲಿ ಸಹಾಯಧನ, ಆಹಾರ ಮತ್ತು ಆರೋಗ್ಯ ಸೌಲಭ್ಯ ನೀಡಿದ್ದ ಸರಕಾರ ಬಳಿಕ ಪರಿಸ್ಥಿತಿಯನ್ನು ನಿಭಾಯಿಸಿತ್ತು.

ಕೊರೊನಾ ಕಾಲಾವಧಿಯಲ್ಲಿ ಹೆಚ್ಚು ಸಂಕಷ್ಟ ತೊಡಗಿದ್ದವರಲ್ಲಿ ಬೀದಿ ಬದಿ ವ್ಯಾಪಾರಸ್ಥರು ಕೂಡ ಸೇರಿದ್ದಾರೆ. ಸಾಂಕ್ರಾಮಿಕ ರೋಗದಿಂದ ತಮ್ಮ ದೈನಿಕ ಚಟುವಟಿಕೆ ಕೆಲಸ ನಿರ್ವಹಣೆ ಮಾಡಲು ಸಾಧ್ಯವಾಗದೇ ಇರುವ ಬೀದಿ ಬದಿ ವ್ಯಾಪಾರಸ್ಥರ ಸಂಕಷ್ಟಕ್ಕೆ ಪಿಎಂ ಮೋದಿ ಅವರು ಯಾವುದೇ ಹೆಚ್ಚಿನ ದಾಖಲಾತಿ ನೀಡದಿದ್ದರೂ ಸಾಲ ಸೌಲಭ್ಯ ನೀಡುವ ವ್ಯವಸ್ಥೆ ಯೋಜಿಸಿತ್ತು. ಈ ನಿಟ್ಟಿನಲ್ಲಿ ಪಿಎಂ ಸ್ವನಿಧಿ ಯೋಜನೆ (PM Svanidhi Yojana) ಅಡಿಯಲ್ಲಿ ಅನೇಕ ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ವ್ಯವಸ್ಥೆ ಮಾಡಿಕೊಡಲಾಯಿತು.

ಉತ್ತಮ ಸಾಲ ಸೌಲಭ್ಯ ನೀಡುವ ಯೋಜನೆ

advertisement

10 ಸಾವಿರದ ವರೆಗೆ ಯಾವುದೇ ಗ್ಯಾರೆಂಟಿ ಇಲ್ಲದೆ ಸಾಲಸೌಲಭ್ಯ ನೀಡಲು ಸರಕಾರ ಮುಂದಾಗಿದೆ. ಈ ಕಂತು ಮರು ಪಾವತಿಸಿದರೆ ಇನ್ನು ಎರಡು ಕಂತಿನಲ್ಲಿ ಹಣಕಾಸಿನ ಸಾಲ ಸೌಲಭ್ಯ ಸಿಗಲಿದೆ. ಅದರಲ್ಲಿ 7% ಸಬ್ಸಿಡಿ ಸಹ ಸಿಗಲಿದೆ. ನೀವು ಮೊದಲು ಕಂತಿನಲ್ಲಿ ಪಡೆದ ಹಣ ಹಿಂದಿರುಗಿಸಿದರೆ ಎರಡನೇ ಕಂತಿಗೆ 20,000 ಹಾಗೂ ಮೂರನೇ ಕಂತಿಗೆ 50,000 ಸಾಲ ಸೌಲಭ್ಯ ಪಡೆಯಬಹುದು. ಈ ಮೊತ್ತದ ಆಧಾರದ‌ ಮೇಲೆ ಸಬ್ಸಿಡಿ ಸಿಗುವ ಕಾರಣ 1,200 ಕ್ಯಾಶ್ ಬ್ಯಾಕ್ ಸಿಗಲಿದೆ.

ರಾಜ್ಯದಲ್ಲಿ ಈ ನಿಟ್ಟಿನಲ್ಲಿ ಕೆಲ ಅಗತ್ಯ ಕೆಲಸ ನಿರ್ವಹಿಸಬೇಕು. ರಾಜ್ಯದಲ್ಲಿರುವ ಸರಕಾರಿ ಇಲಾಖೆಗಳು ಈ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಅತ್ಯವಶ್ಯವಾಗಿದೆ. ಮಾಹಿತಿ ಕೊರತೆ ಇರುವ ಕಾರಣ ಅನೇಕ ಸಂಸ್ಥೆಗಳು ಈ ಬಗ್ಗೆ ಮಾಹಿತಿ ನೀಡಿದರೂ ಬೀದಿ ಬದಿ ವ್ಯಾಪಾರಸ್ಥರಿಗೆ ಯೋಜನೆ ಅಡಿಯಲ್ಲಿ ಸಾಲಪಡೆಯಬೇಕು ಅಥವಾ ಬೇಡ ಎಂಬಗೊಂದಲ ಇದೆ. ರಾಜ್ಯಗಳು ಅರ್ಹ ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸುವ ಕಾರ್ಯ ಮಾಡಬೇಕು. ಫಲಾನುಭವಿಗಳ ಸಂಖ್ಯೆ ಹೆಚ್ಚಿಸಬೇಕು. ಹೀಗಾಗಿ ಸಾಲ ಒದಗಿಸುವ ಸಂಸ್ಥೆಗಳು, ಕೇಂದ್ರಾಡಳಿತ ಪ್ರದೇಶ ಮತ್ತು ದೂರದರ್ಶನ ಮತ್ತು ರೇಡಿಯೋ ಮೂಲಕ ಜನರಿಗೆ ಈ ಸೌಲಭ್ಯ ಅರಿವು ಮೂಡಿಸುವ ಪ್ರಯತ್ನ ಮಾಡಲಿದ್ದಾರೆ.

ಒಟ್ಟಾರೆಯಾಗಿ ಪಿಎಂ ಸ್ವ ನಿಧಿ ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲ ಆಗಲಿದೆ. ಹಾಗಾಗಿ ನಿಮಗೆ ಇಂತವರು ಪರಿಚಯಸ್ಥರಿದ್ದರೇ ಮಾಹಿತಿಯನ್ನು ಶೇರ್ ಮಾಡಿ. ಈ ಬಗ್ಗೆ ನಿಮಗೆ ಗೊಂದಲ ಇದ್ದರೆ ಸರಕಾರಿ ಪೋರ್ಟಲ್ ಅನ್ನು ಸಂಪರ್ಕಿಸಬಹುದು. ವೆಬ್ಸೈಟ್ https://pmsvanidhi.mohua.gov.in ಸಂಪರ್ಕಿಸುವ ಮೂಲಕ ನೀವು ಈ ಬಗ್ಗೆ ಅಧಿಕ ಮಾಹಿತಿ ಪಡೆಯಬಹುದು.

advertisement

Leave A Reply

Your email address will not be published.