Karnataka Times
Trending Stories, Viral News, Gossips & Everything in Kannada

Hajj Pilgrimage: ಈ ರೀತಿ ಹಜ್ ಯಾತ್ರೆಯನ್ನು ಮಾಡೋ ಹಾಗಿಲ್ಲ! ದುಬೈ ಸರ್ಕಾರದ ಹೊಸ ರೂಲ್ಸ್

advertisement

ಇಸ್ಲಾಂ ಧರ್ಮದ ಪ್ರಕಾರ ನಿಮಗೆ ಯಾರಿಗೂ ತಿಳಿದಿರಬಹುದು ಹಜ್ ಯಾತ್ರೆ ಮಾಡೋದು ಅತ್ಯಂತ ಪವಿತ್ರ ಹಾಗೂ ಒಳ್ಳೆಯ ಕೆಲಸ ಎಂಬುದಾಗಿ ಪರಿಗಣಿಸಲಾಗುತ್ತದೆ. ಸೌದಿಯ ಹಜ್ ಹಾಗೂ ಉಮ್ರಾ ಸಚಿವಾಲಯ ಇದೇ ಕಾರಣಕ್ಕಾಗಿ ನಸ್ಕ್ ಹಜ್ ಕಾರ್ಡ್ (Nusuk Hajj card) ಹಣ್ಣು ಜಾರಿಗೆ ತಂದಿದ್ದು ಇದರ ಮೂಲಕ ಯಾರು ಕೂಡ ಅಕ್ರಮವಾಗಿ ಇಲ್ಲಿಗೆ ಪ್ರವೇಶ ಮಾಡದೇ ಇರಲಿ ಎನ್ನುವ ಕಾರಣಕ್ಕಾಗಿ ಅದನ್ನು ತಡೆಯಲು ಹಾಗೂ ಕಂಟ್ರೋಲ್ ಮಾಡಲು ಈ ಕಾರ್ಡ್ ಅನ್ನು ಜಾರಿಗೆ ತರಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಈ ಕಾರ್ಡ್ ಅನ್ನು ಹಜ್ ಯಾತ್ರೆ (Hajj Pilgrimage) ಯನ್ನು ಅತ್ಯಂತ ಸುಲಭ ಮಾಡಿಸಲು ಹಾಗೂ ಯಾರೂ ಕೂಡ ಅಕ್ರಮವಾಗಿ ಬಾರದೆ ಇರಲಿ ಎನ್ನುವ ಕಾರಣಕ್ಕಾಗಿ ಇದನ್ನ ತಯಾರಿಸಲಾಗಿದೆ. ಈ ಕಾರ್ಡ್ ಅನ್ನು ಬರುವಂತಹ ಜನಜಂಗುಳಿಯಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೇ ಇರಲಿ ಎನ್ನುವ ಕಾರಣಕ್ಕಾಗಿ ಹಾಗೂ ಇದನ್ನು ಒಂದು ರೀತಿಯಲ್ಲಿ ಗುರುತು ಪತ್ರದ ರೀತಿಯಲ್ಲಿ ಉಪಯೋಗಿಸಲಿ ಎನ್ನುವ ಕಾರಣಕ್ಕಾಗಿ ಜಾರಿಗೆ ತರಲಾಗಿದೆ. ಒಂದು ವೇಳೆ ಯಾರೇ ಆಗಲಿ ಅಕ್ರಮ ವಿಧಾನದಿಂದ ಪ್ರವೇಶ ಮಾಡಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈ ತೆಗೆದುಕೊಳ್ಳಲಾಗುತ್ತದೆ.

ಅಕ್ರಮ ಯಾತ್ರಿಗಳ ಮೇಲೆ ಬೀಳಲಿದೆ ಲಗಾಮು:

 

Image Source: NDTV

 

advertisement

ಈ ಕಾರ್ಡ್ ಎನ್ನುವುದು ಡಿಜಿಟಲ್ ಹಾಗೂ ಪ್ರಿಂಟ್ ಎರಡು ರೂಪದಲ್ಲಿ ಕೂಡ ಸಿಗಬಹುದಾಗಿದೆ. ಹಜ್ ಯಾತ್ರೆಗಾಗಿ ಬರುವ ಅಕ್ರಮ ಯಾತ್ರೆಗಳನ್ನು ಕಂಟ್ರೋಲ್ ಮಾಡುವ ಕಾರಣಕ್ಕಾಗಿ ಈ ಕಾರ್ಡ್ (Nusuk Hajj card) ಅನ್ನು ಜಾರಿಗೆ ತರಲಾಗಿದೆ ಎಂಬುದಾಗಿ ಅಲ್ಲಿನ ಸಚಿವಾಲಯಗಳು ಹೇಳಿವೆ. ಹಜ್ ಯಾತ್ರೆ (Hajj Pilgrimage) ಯ ಸಂದರ್ಭದಲ್ಲಿ ಈ ಕಾರ್ಡ್ ನಲ್ಲಿ ಇರುವಂತಹ QR ಸ್ಕ್ಯಾನ್ ಕೋಡ್ ಮೂಲಕ ನಿಯಮಗಳನ್ನು ಪಾಲನೆ ಮಾಡುವಂತೆ ಹೇಳಲಾಗುತ್ತದೆ.

ಪ್ರತಿಯೊಬ್ಬ ಹಜ್ ಯಾತ್ರಿಯ ಬಳಿ ಈ ಕಾರ್ಡ್ ಕಡ್ಡಾಯವಾಗಿರಬೇಕು:

 

Image Source: KSAexpats.com

 

ಈ ಕಾರ್ಡ್ ಯಾತ್ರಿಕರ ಸಾಕಷ್ಟು ಉಪಯೋಗಗಳಿಗಾಗಿ ನೆರವಾಗುತ್ತದೆ ಹಾಗೂ ಪ್ರಮುಖವಾಗಿ ಅವರ ಗುರುತಿನ ಪತ್ರದ ರೂಪದಲ್ಲಿ ಕೆಲಸ ಮಾಡುತ್ತಿದೆ. ಯಾತ್ರಿಗಳ ಮಹತ್ವಪೂರ್ಣ ವಿವರಗಳನ್ನು ರೆಕಾರ್ಡ್ ಮಾಡುವುದಕ್ಕೆ ಸೌದಿ ಸರ್ಕಾರಕ್ಕೆ ಇದು ಸಹಾಯಕವಾಗಲಿದೆ. ಅವರ ವೈಯಕ್ತಿಕ ಡೇಟಾಗಳನ್ನು ಕೂಡ ಇದು ಸಂಗ್ರಹಿಸಿಕೊಳ್ಳುತ್ತದೆ.

ಈ ಪುಣ್ಯ ಸ್ಥಳಕ್ಕೆ ಮುಸ್ಲಿಮರು ಕಾಲಿಡುವುದಕ್ಕಿಂತ ಮುಂಚೆ ಈ ಕಾರ್ಡ್ಗಳನ್ನು ಪಡೆದುಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದನ್ನು ಕೂಡ ಸಂಬಂಧ ಪಟ್ಟಂತಹ ಸಚಿವಾಲಯ ಈಗಾಗಲೇ ಸೂಚನೆ ನೀಡಿದೆ. ಒಂದು ವೇಳೆ ಯಾರಾದ್ರೂ ಹಜ್ ಯಾತ್ರೆ ಏನು ಮಾಡುವಂತಹ ಇಚ್ಛೆಯನ್ನು ಹೊಂದಿದ್ದರೆ ಈ ವಿವರಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಅದರ ಅನ್ವಯ ನಡೆದುಕೊಳ್ಳುವುದು ಉತ್ತಮವಾಗಿದೆ.

advertisement

Leave A Reply

Your email address will not be published.