Karnataka Times
Trending Stories, Viral News, Gossips & Everything in Kannada

Arecanut Cultivation: ಹತ್ತು ವರ್ಷದಿಂದ ಗೊಬ್ಬರ ಬಳಸದ ತೋಟ, ಒಂದೊಂದು ಅಡಿಕೆ ಗೊನೆಯಿಂದ 10 ಕೆಜಿ ಇಳುವರಿ! ಹೀಗಿದೆ ಟ್ರಿಕ್ಸ್

advertisement

ಅಡಿಕೆ‌ ಕೃಷಿ (Arecanut Cultivation) ಯನ್ನು ಸರಿಯಾಗಿ ರೈತನು ಅಳವಡಿಸಿಕೊಂಡರೆ ಹೆಚ್ಚಿನ‌ಲಾಭವನ್ನು ಪಡೆಯಲು ಸಾಧ್ಯವಿದೆ. ಇಂದು ಬಹುತೇಕ ಎಲ್ಲಾ ಪ್ರದೇಶದಲ್ಲೂ ಅಡಿಕೆ ಸಾಮಾನ್ಯವಾಗಿ ಬಿಟ್ಟಿದೆ‌‌.ಮಾರುಕಟ್ಟೆಯ ಯಲ್ಲಿ ಬೆಲೆ ಇದೆಯೋ ಇಲ್ಲವೋ? ರೈತರಂತು ಈ ಅಡಿಕೆ ಬೆಳೆಸುವುದನ್ನು ಬಿಟ್ಟಿಲ್ಲ. ಇಂದು ಈ ಅಡಿಕೆ ಬೆಳೆಯಿಂದ ಗುಟ್ಕಾ, ಪಾನ್, ಸುಪಾರಿ ತಯಾರಿಕೆಗೆ ಹೆಚ್ಚು ಬೇಡಿಕೆ ಇರುವುದರಿಂದ ‌ಹೊರ ದೇಶಗಳಿಗೆ‌ ಹೆಚ್ಚು ರವಾನೆಯಾಗಲಿದೆ.

ಒಮ್ಮೆ ಬೆಲೆ ‌ಇಳಿಕೆಯಾದರೂ ಮತ್ತೆ ಮಾರುಕಟ್ಟೆ ಯಲ್ಲಿ ಉತ್ತಮ ಬೆಲೆ ಕಾಯ್ದು ಕೊಳ್ಳಲಿದೆ ಹಾಗಾಗಿ ಅಡಿಕೆಗೆ (Arecanut) ಬೇಡಿಕೆ ಹೆಚ್ಚಿದೆ ಎಂದೇ ಹೇಳಬಹುದು.‌ಆದರೆ ಅಡಿಕೆ ಬೆಳೆಯಲ್ಲಿ ಲಾಭ ಗಳಿಸಬೇಕಾದರೆ ತೋಟದ ಪೋಷಣೆ ಕೂಡ ಸರಿಯಾಗಿ‌ ಮಾಡಬೇಕು.ಇಲ್ಲೊಬ್ಬ ರೈತರು ಕಡಿಮೆ ನಿರ್ವಹಣೆ ಯೊಂದಿಗೆ ಹೆಚ್ಚು ಇಳುವರಿ ಪಡೆದಿದ್ದಾರೆ. ಇದು ಹೇಗೆ ಸಾಧ್ಯ. ಯಾವ ರೀತಿ ಅಡಿಕೆ ಬೆಳೆಸಬೇಕು ಎಂಬ ಮಾಹಿತಿ ಇಲ್ಲಿದೆ.

ಸಾವಯವ ಕೃಷಿ ಮಾಡಿ:

ಇಂದು ಮಾರುಕಟ್ಟೆ ಯಲ್ಲಿ ನಾನಾ ರೀತಿಯ ‌ಕೆಮಿಕಲ್ ಗೊಬ್ಬರ, ರಸಾಯನಿಕ ದ್ರವ ಇತ್ಯಾದಿ ಮಾರುಕಟ್ಟೆಗೆ‌ ಬಂದಿದೆ. ಇದರಿಂದ ತೋಟದಲ್ಲಿ ಒಮ್ಮೆ ಇಳುವರಿ ಹೆಚ್ಚಾಗಬಹುದು. ನಂತರದ ಸಮಯದಲ್ಲಿ ನಿಮ್ಮ ತೋಟದ ಇಳುವರಿ‌ ಕುಂಠಿತ ವಾಗಲಿದೆ.‌ ತೋಟದ ಬೇರುಗಳಿಗೆ ಈ ರಸಾಯನಿಕ ಗೊಬ್ಬರ ಬಹಳ ಹಾನಿಕಾರಕ ‌ಇದರಿಂದ ಹರಳು‌ ಉದುರುವುದು, ಬೇರು ಕಟ್ ಆಗುವು ದು‌ ಇತ್ಯಾದಿ ಸಮಸ್ಯೆ ಆಗಲಿದೆ.ಹಾಗಾಗಿ ಕೃಷಿ ಮಾಡುವ ಮೊದಲು ರಸಾಯನಿಕ ಗೊಬ್ಬರ ಬಳಸದೇ ಸಾವಯವ ಗೊಬ್ಬರ ‌ಕ್ಕೆ‌ಹೆಚ್ಚಿನ ಪ್ರಶಾಸ್ತ್ಯವನ್ನು ನೀಡಿ.

 

advertisement

Image Source: Deccan Herald

 

ತೋಟ ಹಸಿರಾಗಿದ್ದು ಎರೆಹುಳು ಹೆಚ್ಚಳವಾಗಿದೆ:

ಇಂದು ರಸಾಯನಿಕ ಕೃಷಿ ಮಾಡುವ ರೈತರು ಈ ಮಾಹಿತಿ ತಿಳಿಯಲೇಬೇಕು. ಈ ರೈತನು ಕೇವಲ ಸಾವಯವ ಕೃಷಿ ಮಾಡುವ ಮೂಲಕ ಹೆಚ್ಚು ಇಳುವರಿಯನ್ನು ಪಡೆದುಕೊಂಡಿದ್ದಾರೆ. ಮಣ್ಣಿನ ಫಲವತ್ತತೆ ಚೆನ್ನಾಗಿದ್ದು ಅಡಿಕೆಗೆ ಜೀವಾಮೃತ ಮತ್ತು ಡಾ ಸಾಯಿಲ್ (Dr. Soil) ಬಳಕೆ ಮಾಡುತ್ತಾರೆ.‌ಮಣ್ಣಿನಲ್ಲಿ ಎರೆಹುಳು ಹೆಚ್ಚಳ ವಾಗಿದ್ದು ಒಂದು ಅಡಿಕೆ (Arecanut) ಗೊನೆಯಲ್ಲಿ ಹತ್ತು ಕೆಜಿ ಇಳುವರಿ‌ ಪಡೆದುಕೊಂಡಿದ್ದಾರೆ. ತೋಟದಲ್ಲಿ ಇರುವ ಕಸ,ಸೊಪ್ಪು ಇತ್ಯಾದಿಗಳನ್ನು ತೋಟಕ್ಕೆ ಗೊಬ್ಬರ ವಾಗಿ ಬಳಕೆ ಮಾಡುತ್ತಾರೆ. ಯಾವುದೇ ರೀತಿಯ ಕುರಿ ಗೊಬ್ಬರ, ಇತರ‌ ಗೊಬ್ಬರ ಬಳಕೆ ಮಾಡಿಲ್ಲ.

ಮಣ್ಣು ಮೃದು ವಾಗಿದೆ:

ಈ ತೋಟದಲ್ಲಿ ಮಣ್ಣು ಬಹಳಷ್ಟು ಮೃದು ವಾಗಿದ್ದು ಮಣ್ಣಿನ ತೇವಾಂಶ ಉತ್ತಮ ವಾಗಿದೆ.‌ ಎರೆಹುಳ ಗಳ ಸಂಖ್ಯೆ ‌ಹೆಚ್ಚಾಗಿದ್ದು ಮಣ್ಣಿನ ಪೋಷಣೆ ದೃಢ ವಾಗಿದ್ದು ಗಿಡಗಳಿಗೆ ಬಹಳಷ್ಟು ಒಳಿತಾಗಿದೆ ಎಂದು ಇಲ್ಲಿನ ರೈತರು ಹೇಳುತ್ತಾರೆ. ಇನ್ನು ಅಡಿಕೆ‌ಗಿಡಗಳಿಗೆ ಹೆಚ್ಚಿನ ಪ್ರಮಾಣದ ನೀರು ಬೇಕು ಎನ್ನುವುದು ನಮ್ಮ ಕಲ್ಪನೆಯಷ್ಟೆ. ಒಮ್ಮೆ ನಮ್ಮ ನಮ್ಮ ತೋಟವನ್ನು ಸರಿಯಾಗಿ ಬೆಳೆಸಿದರೆ ಯಾವ ಕಾಲಕ್ಕೆ ನೀರು ಹಾಕಬೇಕು ಎಂಬುದನ್ನು ನಾವೇ ನಿರ್ಧಾರ ಮಾಡಬೇಕು.ಮಣ್ಣಿನ ಫಲವತ್ತತೆ ನೋಡಿ ನೀರು ನೀಡಬೇಕು.

advertisement

Leave A Reply

Your email address will not be published.