Karnataka Times
Trending Stories, Viral News, Gossips & Everything in Kannada

Arecanut: ಅಡಿಕೆ ಕೃಷಿ ಜೊತೆ ಕಾಳುಮೆಣಸು ಹಾಕುವವರು ಈ 2 ತಪ್ಪು ಮಾಡಲೇಬೇಡಿ!

advertisement

ಕಂಗಿನ (ಅಡಿಕೆ) ಬೆಳೆಗೆ ಇಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಬೆಲೆ ಅಧಿಕವಾಗಿ ಸಿಗುತ್ತಿದ್ದಂತೆ ಅದರ ಮೇಲೆ ಪೂರ್ತಿ ಅವಲಂಬನೆ ಆಗುವ ಅನೇಕ ರೈತರನ್ನು ನಾವು ಕಾಣಬಹುದು. ಅಡಿಕೆ (Arecanut) ಕೃಷಿಯಲ್ಲಿ ಒಂದೇ ಬೆಳೆಗೆ ಅವಲಂಬನೆ ಆಗುದಕ್ಕಿಂತಲೂ ಇದ್ದ ತೋಟದಲ್ಲಿ ಸಮಗ್ರ ಕೃಷಿ ಮಾಡುವುದು ತುಂಬಾ ಅನುಕೂಲ ಆಗಲಿದೆ. ಜೊತೆಗೆ ನಮ್ಮ ಅಗತ್ಯಕ್ಕೆ ತಕ್ಕಂತೆ ಆದಾಯ ಪೂರೈಕೆ ಈ ಸಮಗ್ರ ಕೃಷಿಯಿಂದ ಆಗಲಿದೆ. ಅಡಿಕೆ ತೋಟಕ್ಕೆ ಸಮಗ್ರ ಕೃಷಿ ಯಾವುದೆಂದು ನಾವು ಕಾಣುವುದಾದರೆ ಏಲಕ್ಕಿ, ಕಾಳುಮೆಣಸು, ಬಾಳೆ ಇತರ ಕೃಷಿ ಮಾಡಬಹುದು.

ಹೆಚ್ಚಾಗಿ ರೈತರು ಅಡಿಕೆ ತೋಟಕ್ಕೆ ಕಾಳು ಮೆಣಸಿನ (Pepper) ಬಳ್ಳಿ ಹಬ್ಬಿಸುತ್ತಾರೆ. ಇದು ನಿಮಗೆ ಅಧಿಕ ಲಾಭ ಸಹ ನೀಡುತ್ತದೆ. ಕಾಳು ಮೆಣಸಿನ ಬೆಲೆ ಕಾಲದಿಂದ ಕಾಲಕ್ಕೆ ಅಧಿಕವಾಗೇ ಇದ್ದು ಉತ್ತಮ ಲಾಭ ತಂದುಕೊಡಲಿದೆ. ಹಾಗಾದರೆ ಅದನ್ನು ಕೃಷಿಯಾಗಿ ಪರಿವರ್ತಿಸುವಾಗ ಕೆಲವು ಪ್ರಮುಖ ಸಂಗತಿ ಗಮನಿಸಬೇಕು ಇಲ್ಲವಾದರೆ ಅಡಿಕೆ ಹಾಗೂ ಕಾಳು ಮೆಣಸು ಎರಡು ಕೃಷಿ ಹಾಳಾಗುವ ಸಾಧ್ಯತೆ ಇರಲಿದೆ.

Image Source: PepperHub

ಈ ಬಗ್ಗೆ ಮೊದಲೇ ಗಮನಿಸಿ

advertisement

  • ಅಡಿಕೆ ಹಾಗೂ ಕಾಳು ಮೆಣಸು ರೋಗಕ್ಕೆ ತುತ್ತಾಗದಂತೆ ಮಾಡಲು ಹೋಗಿ ಕೆಮಿಕಲ್ ಪ್ರಮಾಣ ಅಧಿಕವಾಗಿ ಬಳಕೆ ಮಾಡುತ್ತಾರೆ. ಅದು ಉತ್ತಮವಾದ ಕ್ರಮ ಆಗಲಾರದು.
  • ಅಡಿಕೆಗಾಗಿ ಕೆಮಿಕಲ್ ಸ್ಪ್ರೆ ಮಾಡಿದರೆ ಕಾಳು ಮೆಣಸಿನ ಬಳ್ಳಿ ಹಬ್ಬಲಾರದು.
  • ರಾಸಾಯನಿಕ ಬಳಸುವುದಕ್ಕಿಂತಲೂ ಡಾಕ್ಟರ್ ಸಾಯ್ಲ್ ಮತ್ತು ಸಾವಯವ ಗೊಬ್ಬರ ಬಳಕೆ ಮಾಡುವುದು ಬಹಳ ಉತ್ತಮ.
  • ಅಡಿಕೆ ತೋಟಕ್ಕೆ ನೀರು ತುಂಬಾ ಹೆಚ್ಚು ಬಳಸಬಾರದು ಗಿಡ ಒಣಗದಂತೆ ನೀರಿನ ಸಿಂಪಡಣೆ ಮಾಡಿದರೆ ಸಾಕು.
  • ಅಡಿಕೆ ಸಸಿಗೆ ಹಾಕುವ ಸಾವಯವ ಗೊಬ್ಬರವೇ ಕಾಳು ಮೆಣಸಿಗೂ ಕೂಡ ಸಾಕಾಗಲಿದೆ.

ಇಳುವರಿ ಎಷ್ಟು ಸಿಗಲಿದೆ?

ಅಡಿಕೆ (Arecanut) ತೋಟದಲ್ಲೇ ಕಾಳು ಮೆಣಸಿನ ಗಿಡ ಹಾಕಿದರೆ ಒಂದು ಗಿಡದ ಮೇಲೆ 2-3kg ಇಳುವರಿ ಸಿಗಲಿದೆ. ಆರಂಭಿಕ ಹಂತದಲ್ಲಿ ಕಡಿಮೆ ಇಳುವರಿ ಬಂದರೂ ಕಾಲ ಕ್ರಮೇಣ ಇಳುವರಿ ಸರಿಯಾಗಲಿದೆ. ವರ್ಷಕ್ಕೆ ಮೂರು ಬಾರಿ ಕಳೆಯನ್ನು ಕಟಾವು ಮಾಡಿ ಅದನ್ನು ಅಡಿಕೆ ಸಸಿಯ ಬುಡಕ್ಕೆ ಹಾಕಬೇಕು ಇದರಿಂದಾಗಿ ಪೋಷಣೆ ಲಭ್ಯವಾಗಲಿದೆ. ಎರಡನ್ನು ಒಟ್ಟಿಗೆ ಬೆಳೆಯುವುದು ಸೂಕ್ತವೇ ಆದರೆ ಇದರಲ್ಲಿ ಕೆಮಿಕಲ್ ಬಳಕೆ ಮಾಡುವುದರಿಂದ ಇಳುವರಿ ಬರದಂತೆ ಆಗುವ ಸಾಧ್ಯತೆ ಇರಲಿದೆ ಹಾಗಾಗಿ ಈ ಬಗ್ಗೆ ಗಮನ ಹರಿಸಬೇಕು.

Image Source: Agri Farming

ಒಟ್ಟಾರೆಯಾಗಿ ಕೆಮಿಕಲ್ ಎನ್ನುವುದು ಎಲ್ಲಿದ್ದರೂ ಹಾನಿಯೇ ಎನ್ನಬಹುದು.ಕೆಮಿಕಲ್ ಬಳಸಿ ಅಡಿಕೆ ಕೃಷಿ ಮಾಡಿ ಇಳುವರಿ ಕಾಣದ ಅನೇಕ ರೈತರು ಇನ್ನಾದರೂ ಸಾವಯವ ಗೊಬ್ಬರಕ್ಕೆ ಒತ್ತು ನೀಡಬೇಕು. ಈ ಸರಳ ಮಾರ್ಗ ನೀವು ಅನುಸರಿಸಿ ಅಧಿಕ ಲಾಭ ಪಡೆಯಬಹುದು. ಈ ಮೂಲಕ ರಾಸಾಯನಿಕ ಮುಕ್ತ ಜೈವಿಕ ಕೃಷಿ ವಿಧಾನ ಅಳವಡಿಸಿದರೆ ಅಧಿಕ ಇಳುವರಿ ಜೊತೆಗೆ ಲಾಭವನ್ನು ಸಹ ನೀಡಲಿದೆ.

advertisement

Leave A Reply

Your email address will not be published.