Karnataka Times
Trending Stories, Viral News, Gossips & Everything in Kannada

TRAI: ಆಗಸ್ಟ್ 1 ರಿಂದ ಯಾವುದೇ ಸಿಮ್ ನಿಂದ ಫೋನ್ ಕಾಲ್ ಮಾಡುವವರಿಗೆ ಹೊಸ ರೂಲ್ಸ್!

advertisement

ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತ ದೇಶದಲ್ಲಿ ಆನ್ಲೈನ್ ಫ್ರಾಡ್ ಗಳು ಹೆಚ್ಚಾಗುತ್ತಿದೆ. ಇನ್ನು ಪ್ರಮುಖವಾಗಿ ಈ ರೀತಿ ಮೋಸ ಮಾಡುವ ಸಂದರ್ಭದಲ್ಲಿ ಫ್ರಾಡ್ಗಳು ಮೊಬೈಲ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ ಅಂದರೆ ಮೊಬೈಲ್ ನಂಬರ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಈ ಕೆಲಸಕ್ಕೆ ಕಡಿವಾಣ ಹಾಕಬೇಕು ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈಗ TRAI ಸಂಸ್ಥೆಯ ಜೊತೆಗೂಡಿ ಹೊಸ ನಿಯಮಗಳನ್ನು ಜಾರಿಗೆ ತರುವುದಕ್ಕೆ ಮುಂದಾಗಿದೆ. ಸರ್ಕಾರ ಇದೆ ಕಾರಣಕ್ಕಾಗಿ ನೂರು ದಿನಗಳ ಪ್ಲಾನ್ ಅನ್ನು ರಚಿಸಿದ್ದು ಇದರ ಅನ್ವಯ ಈ ರೀತಿ ಮಾಡುವಂತಹ ಕಳ್ಳರನ್ನು ಹಿಡಿಯುವುದಕ್ಕೆ ಹೊರಟಿದೆ.

TRAI ನಿಂದ ಜಾರಿಗೆ ಬಂತು ನೋಡಿ ಹೊಸ ನಿಯಮ

ಈ ಮೂಲಕ ವಿಚಾರಣೆಯಲ್ಲಿ ಸಿಕ್ಕಿ ಹಾಕಿಕೊಳ್ಳುವಂತಹ ನಂಬರ್ ಗಳನ್ನು ಯಾವುದೇ ಅನುಮಾನವಿಲ್ಲದೆ ಬ್ಲಾಕ್ ಮಾಡಲಾಗುತ್ತದೆ. TRAI ಸಂಸ್ಥೆ ಈ ರೀತಿಯ ಫ್ರಾಡ್ಗಳು ಆಗಬಾರದು ಎನ್ನುವ ಕಾರಣಕ್ಕಾಗಿ ಇವುಗಳ ವಿರುದ್ಧ ದೂರು ಸಲ್ಲಿಸಲು ನೋಡಲ್ ಏಜೆನ್ಸಿಯನ್ನು ಕೂಡ ನಿರ್ಮಾಣ ಮಾಡಲಿದೆ. ಇದನ್ನು ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಏಜೆನ್ಸಿ ಎಂದು ಕರೆಯಲಾಗುತ್ತದೆ. ಈ ಮೂಲಕ ಸಮಯ ಇರುವಾಗಲೇ ಇಂತಹ ನಂಬರ್ ಗಳನ್ನು ಬ್ಲಾಕ್ ಮಾಡುವಂತಹ ಕೆಲಸವನ್ನು ಮಾಡಲಾಗುತ್ತದೆ.

advertisement

Image Source: TNAU Online

ಕಾಲಿಂಗ್ ನೇಮ್ ಪ್ರಸೆಂಟೇಷನ್ ಅನ್ನು ಸರ್ಕಾರ 100 ದಿನಗಳ ಒಳಗಾಗಿ ಪ್ರಾರಂಭ ಮಾಡುವಂತಹ ವಾಗ್ದಾನವನ್ನು ಕೂಡ ಈ ಮೂಲಕ ಮಾಡಿದೆ. ಆಗಸ್ಟ್ 1 ರಿಂದ ಕಾಲರ್ ಐಡಿ ನಿಯಮವನ್ನು ಸರ್ಕಾರ ಜಾರಿಗೆ ತರಲಿದೆ. ಈ ವರ್ಷ ಈ ರೀತಿ ಇರುವಂತಹ 13 ಮಿಲಿಯನ್ಗಳಿಗಿಂತಲೂ ಅಧಿಕ ಸಿಮ್ ಕಾರ್ಡ್ ಗಳನ್ನು ಬ್ಲಾಕ್ ಮಾಡಲಾಗಿದೆ ಎನ್ನುವಂತಹ ಮಾಹಿತಿಗಳು ಹೊರ ಬಂದಿದೆ. ಈ ಮೂಲಕ ಇದನ್ನ ಯಾವ ರೀತಿಯಲ್ಲಿ ಆನ್ಲೈನ್ ಫ್ರಾಡ್ಗಳು ಬಳಸಿಕೊಳ್ಳುತ್ತಿದ್ದಾರೆ ಅನ್ನೋದನ್ನ ನೀವು ತಿಳಿದುಕೊಳ್ಳಬಹುದಾಗಿದೆ. ಇದರ ಜೊತೆಗೆ 70 ಸಾವಿರಕ್ಕೂ ಅಧಿಕ ಪ್ರೈವೇಟ್ ಆಫ್ ಸೆಲ್ ಮಷೀನ್ ಅನ್ನು ಡಿಸ್ ಕನೆಕ್ಟ್ ಮಾಡಲಾಗಿದೆ.

ಇದರ ಜೊತೆಗೆ 1.56 ಲಕ್ಷ ಹ್ಯಾಂಡ್ಸೆಟ್ಗಳ ಫ್ರಾಡ್ ಅನ್ನು ಕೂಡ ಪತ್ತೆಹಚ್ಚಲಾಗಿದೆ. 2 ಲಕ್ಷಕ್ಕಿಂತ ಹೆಚ್ಚಿನ ಬೇಕು ಎಸ್ಎಂಎಸ್ ಜಾಲವನ್ನು ಕೂಡ ಬ್ಲಾಕ್ ಮಾಡಲಾಗಿದೆ. TRAI ಹೇಳಿರುವಂತಹ ಮಾಹಿತಿಗಳ ಪ್ರಕಾರ ಇನ್ಮುಂದೆ ಯಾರಿಂದಲೇ ಕಾಲ್ ಬಂದ್ರು ಕೇವಲ ಅವರು ನಂಬರ್ ಮಾತ್ರ ಹೊಲದೇ ಅವರ ಹೆಸರು ಕೂಡ ನಿಮ್ಮ ಸ್ಕ್ರೀನ್ ಮೇಲೆ ಬರಲಿದೆ ಇದು ಆಗಸ್ಟ್ ಒಂದರಿಂದ ಜಾರಿ ಆಗಲಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ.

advertisement

Leave A Reply

Your email address will not be published.