Karnataka Times
Trending Stories, Viral News, Gossips & Everything in Kannada

Suresh Raina: ಹಾರ್ದಿಕ್ ಪಾಂಡ್ಯ ಅಲ್ಲ ಬುಮ್ರಾ ಅಲ್ಲ! ರೈನಾ ಪ್ರಕಾರ ಈ 24 ವರ್ಷದ ಹುಡುಗ ನೆಕ್ಸ್ಟ್ ಇಂಡಿಯಾದ ಕ್ಯಾಪ್ಟನ್ ಆಗಬೇಕಂತೆ!

advertisement

ಭಾರತೀಯ ಕ್ರಿಕೆಟ್ ತಂಡದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೋಹಿತ್ ಶರ್ಮ(Rohit Sharma) ಹೆಚ್ಚೆಂದರೆ ಈ ವರ್ಷ ಭಾರತೀಯ ಕ್ರಿಕೆಟ್ ತಂಡದ ಕಪ್ತಾನನಾಗಿ ಕಾಣಿಸಿಕೊಳ್ಳಬಹುದು. ಈ ಬಾರಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ನಡೆಯುವಂತಹ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ರೋಹಿತ್ ಶರ್ಮ ತಂಡವನ್ನು ಮುನ್ನಡೆಸಲಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ ಹಾಗೂ ಒಬ್ಬ ನಾಯಕನಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಇತ್ತೀಚಿಗೆ ನಡೆದಿರುವ ಏಕದಿನ ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ರೋಹಿತ್ ಶರ್ಮ ಅತ್ಯುತ್ತಮ ನಾಯಕತ್ವದ ಪ್ರದರ್ಶನವನ್ನು ಮಾಡಿದ್ದಾರೆ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲಿ ಕೂಡ ತಮ್ಮ ಪ್ರಭಾವವನ್ನು ತೋರ್ಪಡಿಸಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್ ಅವರ ಸಾರಥ್ಯದಲ್ಲಿ ಉತ್ತಮವಾಗಿ ಸಾಗಬಹುದು ಎನ್ನುವ ನಿರೀಕ್ಷೆ.

ರೋಹಿತ್ ಶರ್ಮ ನಂತರ ನಾಯಕ ಯಾರು?

ರೋಹಿತ್ ಶರ್ಮಾ ಅವರ ನಂತರ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಯಾರು ಆಯ್ಕೆಯಾಗಬೇಕು ಅನ್ನುವ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯಬಹುದು. ಈ ಸಂದರ್ಭದಲ್ಲಿ ಪ್ರಮುಖವಾಗಿ ಕೇಳಿಬರುವಂತಹ ಹೆಸರು ಹಾರ್ದಿಕ ಪಾಂಡ್ಯ ಹಾಗೂ ಜಸ್ಪ್ರೀತ್ ಬೂಮ್ರಾ. ಈಗಾಗಲೇ ಇವರಿಬ್ರೂ ಕೂಡ ಭಾರತೀಯ ಕ್ರಿಕೆಟ್ ತಂಡದ ಪಾರ್ಟ್ ಟೈಮ್ ನಾಯಕರಾಗಿ ತಂಡವನ್ನು ಮುನ್ನಡೆಸಿ ಉತ್ತಮ ಫಲಿತಾಂಶವನ್ನು ಪಡೆದುಕೊಂಡಿರುವ ಕಾರಣದಿಂದಾಗಿಯೇ ಇವರನ್ನು ಭವಿಷ್ಯದ ನಾಯಕರು ಎಂಬುದಾಗಿ ಕೂಡ ಪ್ರತಿಬಿಂಬಿಸಲಾಗುತ್ತಿದೆ. ಆದರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವಂತಹ ಸುರೇಶ್ ರೈನ (Suresh Raina)ಅವರ ಲೆಕ್ಕಾಚಾರದಲ್ಲಿ ಮಾತ್ರ ಮತ್ತೊಬ್ಬ ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕರಾದ ಉತ್ತಮ ಎಂಬುದಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಆಟಗಾರ ಯಾರು ಅನ್ನೋದನ್ನ ತಿಳಿಯೋಣ ಬನ್ನಿ.

advertisement

Image Source: Zee Business

ರೈನಾ (Suresh Raina) ಪ್ರಕಾರ ಇವರೇ ನಾಯಕ ಆಗಬೇಕಂತೆ!

ಈಗಾಗಲೇ ಭಾರತೀಯ ಕ್ರಿಕೆಟ್ ತಂಡವನ್ನು ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಕೆ ಎಲ್ ರಾಹುಲ್ ಹಾಗೂ ರಿಶಬ್ ಪಂತ್ ಕೂಡ ನಾಯಕರಾಗಿ ಮುಂದುವರಿಸಿರುವಂತಹ ಅನುಭವವನ್ನು ಹೊಂದಿದ್ದಾರೆ ಆದರೆ ಭಾರತೀಯ ಕ್ರಿಕೆಟ್ ತಂಡದ ಟೀಮ್ ಮ್ಯಾನೇಜ್ಮೆಂಟ್ ಒಂದು ವೇಳೆ ಶುಭಮನ್ ಗಿಲ್ ಅವರನ್ನು ಭಾವಿಸಿದ ನಾಯಕನನ್ನಾಗಿ ಆಯ್ಕೆ ಮಾಡಿದರೆ ಖಂಡಿತವಾಗಿ ಅದೊಂದು ಆಶ್ಚರ್ಯಕರ ನಿರ್ಧಾರವಾಗಿರಲಿದೆ ಹಾಗೂ ಈ ಫಾರ್ಮೆಟ್ ನಲ್ಲಿ ಗಿಲ್ (Shubhman Gill) ಉತ್ತಮ ನಾಯಕತ್ವದ ಪ್ರದರ್ಶನವನ್ನು ಕೂಡ ತೋರ್ಪಡಿಸಬಹುದೇ ಎನ್ನುವಂತಹ ನಂಬಿಕೆ ನನ್ನಲ್ಲಿದೆ ಅನ್ನೋದಾಗಿ ಗಿಲ್ ಅವರ ಪರವಾಗಿ ರೈನ(Suresh Raina) ಬ್ಯಾಟಿಂಗ್ ಮಾಡಿದ್ದಾರೆ. ಐಪಿಎಲ್ ನಲ್ಲಿ ಕೂಡ ಗುಜರಾತ್ ತಂಡದ ಪರವಾಗಿ ನಾಯಕನಾಗಿ ಈಗ ಗಿಲ್ ಕಾಣಿಸಿಕೊಳ್ಳುತ್ತಿದ್ದು ಒಬ್ಬ ಯುವ ನಾಯಕನನ್ನು ಈಗಿನಿಂದಲೇ ಬೆಳೆಸಬೇಕು ಎನ್ನುವಂತಹ ನಿರ್ಧಾರವನ್ನು ಭಾರತೀಯ ಟೀಮ್ ಮ್ಯಾನೇಜ್ಮೆಂಟ್ ಮಾಡಿದರೆ ಗಿಲ್ ನಾಯಕನಾಗಬಹುದು.

advertisement

Leave A Reply

Your email address will not be published.