Karnataka Times
Trending Stories, Viral News, Gossips & Everything in Kannada

Driving Licence: ಬೆಳ್ಳಂಬೆಳಿಗ್ಗೆ RTO ಹೊಸ ಘೋಷಣೆ! ಇಂತಹ ವಾಹನಗಳನ್ನು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಓಡಿಸಬಹುದು

advertisement

ಭಾರತದ ರೋಡುಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ವಾಹನ ಇರಲಿ ಅದು ದ್ವಿಚಕ್ರ ಆಗಿರಲಿ ಅಥವಾ ಕಾರ್ ಆಗಿರಲಿ ಪ್ರತಿಯೊಬ್ಬರು ಕೂಡ ಡ್ರೈವಿಂಗ್ ಲೈಸನ್ಸ್(Driving Licence) ಇಲ್ಲದೆ ವಾಹನವನ್ನು ಚಲಾವಣೆ ಮಾಡುವ ಹಾಗಿಲ್ಲ. ಒಂದು ವೇಳೆ ಮಾಡಿದ್ದೆ ಆದಲ್ಲಿ ಟ್ರಾಫಿಕ್ ಪೊಲೀಸರಿಗೆ ನೀವು ಫೈನ್ ಅನ್ನೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇದೇ ಸಂದರ್ಭದಲ್ಲಿ ನಾವು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ನೀವು ವಾಹನವನ್ನು ಓಡಾಡಿಸಿದರೆ ಯಾವುದೇ ಫೈನ್ ಬೀಳೋದಿಲ್ಲ ಅಂತ ಹೇಳಿದರೆ ನೀವು ನಗದೇ ಇರೋದಕ್ಕೆ ಚಾನ್ಸೇ ಇಲ್ಲ. ಆದರೆ ನೀವು ಈ ವಿಚಾರವನ್ನು ತಿಳಿದುಕೊಳ್ಳಲು ಬೇಕಾಗಿದ್ದು ತಪ್ಪದೆ ಲೇಖನವನ್ನು ಕೊನೆಯವರೆಗೂ ಓದಿ.

ಈ ವಾಹನಗಳಿಗೆ ಡ್ರೈವಿಂಗ್ ಲೈಸೆನ್ಸ್ (Driving Licence) ಬೇಕಾಗಿಲ್ಲ

ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಹಾಗೂ ಪೆಟ್ರೋಲ್ ಬೆಲೆಯ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತ ದೇಶದಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ ಅಂತ ಹೇಳಬಹುದು. ಎಲೆಕ್ಟ್ರಿಕ್ ವಾಹನಗಳು ಅತ್ಯಂತ ಕಡಿಮೆ ಖರ್ಚಿನಲ್ಲಿ ಓಡಿಸಬಹುದಾದ ವಾಹನಗಳಾಗಿದ್ದು ಪ್ರತಿಯೊಬ್ಬರು ಕೂಡ ಈ ರೀತಿಯ ವಾಹನಗಳನ್ನು ಖರೀದಿ ಮಾಡೋದಕ್ಕೆ ಪ್ರಾರಂಭ ಮಾಡಿದ್ದಾರೆ. ಇನ್ನು ಒಂದು ವೇಳೆ ನೀವು ಸಾಮಾನ್ಯವಾಗಿ ನಾರ್ಮಲ್ ವಾಹನಗಳಲ್ಲಿ ಓಡಾಟ ನಡೆಸುವ ಸಂದರ್ಭದಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಟ್ರಾಫಿಕ್ ಪೊಲೀಸ್ ಅಥವಾ ನಾರ್ಮಲ್ ಪೋಲಿಸ್ ಕೈಗೆ ಸಿಕ್ಕಿಹಾಕಿಕೊಂಡಲ್ಲಿ ಆ ಸಂದರ್ಭದಲ್ಲಿ ನೀವು ಕನಿಷ್ಠ ಪಕ್ಷ 5,000ಗಳ ವರೆಗೆ ಫೈನ್ ಕಟ್ಟ ಬೇಕಾದಂತಹ ಪರಿಸ್ಥಿತಿ ಕೂಡ ಈಗ ನಿರ್ಮಾಣವಾಗುತ್ತಿದೆ. ಇದೇ ಕಾರಣಕ್ಕಾಗಿ ಯಾವತ್ತೂ ಕೂಡ ನೀವು ವಾಹನದಲ್ಲಿ ಹೊರಗೆ ಹೋಗಬೇಕಾದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ಮರೆಯದೇ ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಿ.

Image Source: Hindustan Times

advertisement

ಯಾವೆಲ್ಲ ಎಲೆಕ್ಟ್ರಿಕ್ ವಾಹನಗಳಿಗೆ ಡ್ರೈವಿಂಗ್ ಲೈಸನ್ಸ್ ಬೇಡ?

MORTH ಸಂಸ್ಥೆ ಹೇಳಿರುವ ಮಾಹಿತಿಯ ಪ್ರಕಾರ ಯಾವ ವಾಹನಗಳು 25 km ಗಿಂತ ಕಡಿಮೆ ಸ್ಪೀಡ್ನಲ್ಲಿ ಚಲಾಯಿಸುವಂತಹ ತಂತ್ರಜ್ಞಾನದ ಜೊತೆಗೆ ಮಾರುಕಟ್ಟೆಗೆ ಕಾಲಿಟ್ಟಿದ್ದಾವೋ ಅವುಗಳಿಗೆ ಡ್ರೈವಿಂಗ್ ಲೈಸನ್ಸ್ ಬೇಕಾದ ಅಗತ್ಯ ಇಲ್ಲ ಅಂತ ಹೇಳಲಾಗಿದೆ. ಹೀಗಾಗಿ ನಿಯಮಗಳ ಪ್ರಕಾರ ಒಂದು ವೇಳೆ ನೀವು 25 ಕಿ.ಮೀ ಗಿಂತ ಕಡಿಮೆ ಸ್ಪೀಡ್ನಲ್ಲಿ ಚಲಾವಣೆ ಆಗುವಂತಹ ಎಲೆಕ್ಟ್ರಿಕ್ ವಾಹನವನ್ನು ಹೊಂದಿದ್ದರೆ ಯಾವುದೇ ರೀತಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ರಿಜಿಸ್ಟ್ರೇಷನ್ ಬೇಕಾಗಿಲ್ಲ. RTO ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕಾದ ಅಗತ್ಯ ಕೂಡ ಇಲ್ಲ ಅನ್ನೋದನ್ನ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಇನ್ನು ದ್ವಿಚಕ್ರ ವಾಹನಗಳ ವಿಚಾರಕ್ಕೆ ಬರೋದಾದ್ರೆ 50 ಸಿಸಿ ಗಿಂತ ಕಡಿಮೆ ಎಂಜಿನ್ ಹೊಂದಿರುವಂತಹ 50 ಕಿಲೋ ಮೀಟರ್ ಗಳಿಗಿಂತ ಟಾಪ್ ಸ್ಪೀಡ್ ಕಡಿಮೆ ಇದ್ರೆ ಆ ಸಂದರ್ಭದಲ್ಲಿ ಕೂಡ ಯಾವುದೇ ರೀತಿಯ ಡ್ರೈವಿಂಗ್ ಲೈಸೆನ್ಸ್ ಬೇಕಾಗಿರುವುದಿಲ್ಲ.

  •  ಈ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳುವ ಮೊದಲ ವಾಹನ ಅಂದ್ರೆ ದ್ವಿಚಕ್ರ ವಾಹನ ಹೀರೋ ಎಲೆಕ್ಟ್ರಿಕ್ ಡ್ಯಾಶ್. ಒಂದು ಫುಲ್ ಚಾರ್ಜ್ ನಲ್ಲಿ ಇದು ನಿಮಗೆ 60 ಕಿಲೋಮೀಟರ್ಗಳ ವರೆಗೆ ಬಿಡುತ್ತದೆ 25 km ಟಾಪ್ ಸ್ಪೀಡ್ ಆಗಿದೆ. 64, 990 ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ದೊರಕುತ್ತದೆ.
  •  Okinawa ಎಲೆಕ್ಟ್ರಿಕ್ ಸ್ಕೂಟರ್ ಕೂಡ ಒಂದಾಗಿದೆ. ಇದು ಭಾರತದಲ್ಲಿ 61,998 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ದೊರಕುತ್ತದೆ. ಇದರಲ್ಲಿ 7 ವೇರಿಯಂಟ್ ಸ್ಕೂಟರ್ ಗಳನ್ನು ನೀವು ಕಾಣಬಹುದಾಗಿದೆ.
  •  ಹೀರೋ ಎಲೆಕ್ಟ್ರಿಕ್ ಫ್ಲಾಶ್ ಎಲ್ ಎಕ್ಸ್ 54,640 ರೂಪಾಯಿಗಳ ಎಕ್ಸ್ ಶೋರೂಮ್ ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ದೊರಕಲಿದೆ. ಸಿಂಗಲ್ ಚಾರ್ಜ್ ನಲ್ಲಿ 85km ಗಳ ರೆಂಜು ನೀಡುವಂತಹ ಈ ಸ್ಕೂಟರ್ ನಿಮಗೆ 25 km ಗಳ ಟಾಪ್ ಸ್ಪೀಡ್ ನೀಡುತ್ತದೆ. ಇದು ಫುಲ್ ಚಾರ್ಜ್ ಆಗಬೇಕು ಅಂದರೆ ನಾಲ್ಕರಿಂದ ಐದು ಗಂಟೆಗಳ ಕಾಲ ಚಾರ್ಜ್ ಮಾಡಬೇಕು.

advertisement

Leave A Reply

Your email address will not be published.