Karnataka Times
Trending Stories, Viral News, Gossips & Everything in Kannada

Arecanut: ಹೊಸ ಅಡಿಕೆ ತೋಟ ಮಾಡುವವರು ಮುಗಿಬೀಳುತ್ತಿದ್ದಾರೆ ಈ ವಿಶೇಷ ತಳಿ ಸಸಿಗೆ! ಭರ್ಜರಿ ಇಳುವರಿ

advertisement

ಇಂದು ಅಡಿಕೆ ಕೃಷಿಗಳಿಗೆ (Arecanut Cultivation) ರೈತರು ಹೆಚ್ಚಿನ ಆಸಕ್ತಿಯನ್ನು ತೋರ್ಪಡಿಸುವ ಮೂಲಕ ಅಧಿಕವಾಗಿ ಅಡಿಕೆ ಕೃಷಿಯನ್ನು ಅವಲಂಬಿಸಿ ಕೊಂಡಿದ್ದಾರೆ. ಅಡಿಕೆ‌ಗಿಡಗಳ ಪೋಷಣೆ ಸರಿಯಾಗಿ ಮಾಡಿದರೆ ಹೆಚ್ಚಿನ ಲಾಭವನ್ನು ಕೂಡ ಗಳಿಸಬಹುದು. ಬಹುತೇಕ ರೈತರು ಇಂದು ಈಗಾಗಲೇ ತೆಂಗಿನ ಬೇಸಾಯದೊಟ್ಟಿಗೆ ಮಿಶ್ರ ಬೆಳೆಯಾಗಿ ಅಡಿಕೆಗೆ ಒತ್ತು ನೀಡುವ ಮೂಲಕ ಲಾಭ ಗಳಿಸುತ್ತಿದ್ದಾರೆ.

ಶತ ಮಂಗಳ ಅಡಿಕೆ:

ಶತಮಂಗಳ ಜಾತಿಯ ಅಡಿಕೆ ಗಿಡ ವರ್ಷಕ್ಕೆ 4.2 ಕೆಜಿ ಚಾಲಿ ಅಡಿಕೆ ಇಳುವರಿ (Arecanut Yield) ದೊರೆಯಲಿದ್ದು ಫಸಲು ಹೆಚ್ಚಾಗಿ ದೊರೆಯಲಿದೆ. ಇಂದು ರ್ಷದಿಂದ ವರ್ಷಕ್ಕೆ ಈ ತಳಿ ನಾಟಿ ಮಾಡುವವರ ಸಂಖ್ಯೆ ಯಂತು ಬಹಳಷ್ಟು ಹೆಚ್ಚಾಗಿದೆ ಎನ್ನಬಹುದು. ಈ ಅಡಿಕೆ (Arecanut) ಹೆಚ್ಚಿನ ಇಳುವರಿ ನೀಡುವ ಜೊತೆಗೆ ಲಾಭದಾಯಕ ಸಸಿ ಕೂಡ ಆಗಿದೆ. ಶತಮಂಗಳ ಗಿಡದ ಗರಿಗಳು‌ ಸ್ವಲ್ಪ ಮಟ್ಟಿಗೆ ತಿರುಗಲಿದ್ದು ಮಂಗಳ ಗಿಡಕ್ಕಿಂತಲೂ ಹತ್ತಿರದ ಗಂಟುಗಳು ಇದರಲ್ಲಿ ದೊರೆಯುತ್ತದೆ.

ಎಷ್ಟು ಇಳುವರಿ ನೀಡಲಿದೆ?

 

Image Source: PepperHub

 

advertisement

ಶತಮಂಗಳ ಅಡಿಕೆ (Arecanut) ಗಿಡವು 3.98 ಕೆ.ಜಿ. ಇಳುವರಿ ನೀಡುವ ತಳಿಯಾಗಿದ್ದು ಕರಾವಳಿ ಭಾಗದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಮರಗಳು ಹೆಚ್ಚಿನ ಇಳುವರಿಯನ್ನು ನೀಡುವುದರ ಜೊತೆಗೆ ಈ ಅಡಿಕೆ ಮರಗಳು ಮಧ್ಯಮ ದಪ್ಪದ ಕಾಂಡವನ್ನು ಹೊಂದಿದ್ದು ಮಧ್ಯಮ ಎತ್ತರದ ತಳಿ ಕೂಡ ಇದು ಆಗಿದೆ. ಇದರಲ್ಲಿ‌ ದುಂಡಾಕಾರದ ಅಡಿಕೆ ಬೆಳೆಯಲಿದ್ದು ನೋಡಲು ಕೂಡ ಆಕರ್ಷಿತ ಆಗಿದೆ. ಇದರಲ್ಲಿ ಹಣ್ಣಡಿಕೆಯಿಂದ ಹೆಚ್ಚಾಗಿ ಗೋಟು ಅಡಿಕೆ ಸಿಗುವ ಪ್ರಮಾಣ ಈ ತಳಿಯಲ್ಲಿ ಹೆಚ್ಚು‌ಆಗಿದೆ.

ಇಂದು ಹೊಸ ಅಡಿಕೆ ತೋಟ (Arecanut Plantation) ಮಾಡುವವರು ಈ ತಳಿಯ ಗಿಡಗಳಿಗೆ ಹೆಚ್ಚಿನ ಬೇಡಿಕೆ ನೀಡುತ್ತಾರೆ. ಇದು ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಮತ್ತು ದೀರ್ಘ‌ಕಾಲದ ತನಕ ಫಸಲು ನೀಡಲಿದೆ. ಉಳಿದ ತಳಿಗಿಂತ ಇದು ದುಪ್ಪಟ್ಟು ಇಳುವರಿ ಕೊಡುತ್ತದೆ. ಉಳಿದ ಅಡಿಕೆ ತಳಿಗಳ ಫಸಲಿಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚು ಇಳುವರಿ ನೀಡುವ ಗುಣಮಟ್ಟ ಹೊಂದಿದೆ.

ಮಂಗಳ ಅಡಿಕೆ:

 

Image Source: Tv9

 

ಅದೇ ರೀತಿ ಇಂದು ಮಂಗಳ ಅಡಿಕೆ ತಳಿ ಕೂಡ ಪ್ರಸ್ತುತ ಪ್ರಚಲಿತದಲ್ಲಿದೆ.ಮಂಗಳ ತಳಿ ಎನ್ನುವುದು ಅದು ಇತರ ತಳಿಯಂತೆ ಬಹಳ ಎತ್ತರ ಬೆಳೆಯುದಿಲ್ಲ. ಮರಗಳು ಗಿಡ್ಡ ರೀತಿಯಲ್ಲಿ ಬೆಳೆಯಲಿದ್ದು ಹೆಚ್ಚಿನ ಫಸಲನ್ನು ನೀಡಲಿದೆ. ಇದು ವರ್ಷಕ್ಕೆ ಹೆಚ್ಚೆಂದರೆ 1 ಅಥವಾ 1.5 ಅಡಿ ಎತ್ತರಕ್ಕೆ ಬೆಳೆಯಲಿದ್ದು ಇದರಲ್ಲಿ‌ಕೂಡ ಹೆಚ್ಚಿನ ಇಳುವರಿ ಯನ್ನು ಪಡೆದುಕೊಳ್ಳಲು ಸಾಧ್ಯ ವಿದೆ

advertisement

Leave A Reply

Your email address will not be published.