Karnataka Times
Trending Stories, Viral News, Gossips & Everything in Kannada

Gruha Lakshmi Money: ಗೃಹಲಕ್ಷ್ಮಿ 7, 8 , 9 ನೇ ಕಂತಿನ ಹಣ ಬಾರದೇ ಇದ್ದವರಿಗೆ ಬಿಗ್ ಅಪ್ಡೇಟ್!

advertisement

ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆ ಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಕೂಡ ಒಂದಾಗಿದ್ದು ಮಹಿಳೆಯರಿಗೆ ಈ ಯೋಜನೆ ಬಹಳಷ್ಟು ಸಹಕಾರಿ ಯಾಗುತ್ತಿದೆ. ಪ್ರತಿ ಮನೆಯ ಹಿರಿಯ ಮಹಿಳೆಗೆ ಎರಡು ಸಾವಿರ ಮೊತ್ತ ಜಮೆ ಯಾಗುವ ಮೂಲಕ ಆರ್ಥಿಕ ಬೆಂಬಲ ನೀಡುತ್ತಿದೆ. ಅದರ ಜೊತೆ ಶಕ್ತಿ ಯೋಜನೆಯ ಮೂಲಕವು ಮಹಿಳೆಯರು ಬಸ್ ನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದು ಈ ಮೂಲಕ ಗ್ಯಾರಂಟಿ ಯೋಜನೆಗಳು ಹೆಚ್ಚು ಪ್ರಚಲಿತ ದಲ್ಲಿದೆ. ಇನ್ನೇನು ಲೋಕಸಭೆ ಚುನಾವಣೆ ಕೂಡ ನಡೆಯಲಿದ್ದು ಕೇಂದ್ರದಲ್ಲೂ ಮಹಿಳಾ ಪರವಾದ ‌ಯೋಜನೆಗಳನ್ನು ಹಮ್ಮಿಕೊಳ್ಳುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.

ಗೃಹಲಕ್ಷ್ಮಿ ಎಂಟನೇ ಕಂತಿನ ಹಣ:

 

Image Source: Asiana Times

 

ಈಗಾಗಲೇ ಏಳು ಕಂತಿನ ವರೆಗೆ ಹಣ (Gruha Lakshmi Money) ಬಿಡುಗಡೆಯಾಗಿದ್ದುಎಂಟನೇ ಕಂತಿನ‌‌ ಹಣವು ಅರ್ಧದಷ್ಟು ಮಹಿಳೆಯರಿಗೆ ಬಿಡುಗಡೆಯಾಗಿದೆ. ಈಗಾಗಲೇ ಸರಕಾರ ಎಲ್ಲ ಜಿಲ್ಲೆಗಳಿಗೂ ಬಿಡುಗಡೆ ಮಾಡಿದ್ದು ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ. ಅದೇ ರೀತಿ ಎಂಟನೇ ಕಂತಿನ ಹಣವೂ ಈ ತಿಂಗಳ ಒಳಗೆ ನೊಂದಣಿ ಮಾಡಿದ ಪ್ರತಿ ಮಹಿಳೆಯರಿಗೆ ಜಮೆಯಾಗಲಿದೆ.

ಎಲ್ಲಾ ಕಂತಿನ ಹಣ ಒಟ್ಟಿಗೆ ಜಮೆ:

 

advertisement

Image Source: Deccan Herald

 

ಈಗಾಗಲೇ ಕೆಲವು ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ರೂ ಒಂದು ಕಂತಿನ ಹಣ ಬಂದಿಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಸರಕಾರವು ಸ್ಪಷ್ಟನೆ ಯನ್ನು ನೀಡಿದ್ದು ಹಣ ಬಾರದೇ ಇರೋ ಮಹಿಳೆಯರು ಏನು ಮಾಡಬೇಕು ಎಂಬ ಸಲಹೆ ಯನ್ನು ನೀಡಿದೆ. ಮಹಿಳೆಯರ ದಾಖಲೆಗಳು ಸರಿ ಇದ್ದಲ್ಲಿ ಎಲ್ಲ ಕಂತಿನ ಹಣ (Gruha Lakshmi Money) ಕೂಡ ಒಟ್ಟಿಗೆ ಜಮೆಯಾಗಲಿದೆ ಎನ್ನುವ ಸ್ಪಷ್ಟನೆ ಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಖೆಯ ಸಚಿವೆ ಸ್ಪಷ್ಟನೆ ಯನ್ನು ನೀಡಿದ್ದಾರೆ

ಒಂಭತ್ತನೆಯ ಕಂತಿನ ಹಣ?

ಈಗಾಗಲೇ ನೊಂದಣಿ ಮಾಡಿದ ಮಹಿಳೆಯರಿಗೆ ಎಂಟು ಕಂತಿನ ವರೆಗೆ ಹಣ ಜಮೆಯಾಗಿದ್ದು ಒಂಭತ್ತನೆಯ ಕಂತಿನ ಹಣಕ್ಕಾಗಿ ಹೆಚ್ಚಿನ ಮಹಿಳೆಯರು ಕಾಯ್ತಾ ಇದ್ದಾರೆ. ಇನ್ನೇನು ಚುನಾವಣೆ ಕೂಡ ಆರಂಭ ವಾಗಲಿದ್ದು ನೀತಿ ಸಂಹಿತೆ ಜಾರಿ ಯಲ್ಲಿ ಇರುವುದರಿಂದ ಹಣ ಜಮೆ ಯಾಗಲಿದೆಯಾ ಎನ್ನುವ ಪ್ರಶ್ನೆ ಕಾಡಿದ್ದು ಒಂಭತ್ತನೆಯ ಹಣವೂ ಸರಕಾರ ಸದ್ಯ ದಲ್ಲೇ ಬಿಡುಗಡೆ ಯಾಗಲಿದೆ ಎನ್ನುವ ಮಾಹಿತಿ ನೀಡಿದೆ

ಹಣ ಬಾರದೇ ಇದ್ದಲ್ಲಿ ಹೀಗೆ ಮಾಡಿ:

ಒಂದು ಕಂತಿನ ಗೃಹಲಕ್ಷ್ಮಿ ಹಣ (Gruha Lakshmi Money) ಬಂದಿಲ್ಲ ಎಂದಾದರೆ ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ (Aadhaar Card) ಅನ್ನು ಅಪ್ಡೇಟ್ ಮಾಡಿಸಿಕೊಳ್ಳಿ. ಅದೇ ರೀತಿ ನಿಮ್ಮ ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಇತ್ಯಾದಿ ಗಳಿಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿಸಿಕೊಳ್ಳಿ. ಹೀಗೆ ಮಾಡಿದ್ದಲ್ಲಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ (Gruha Lakshmi Money) ಬಿಡುಗಡೆಯಾಗಲಿದೆ.

advertisement

Leave A Reply

Your email address will not be published.