Karnataka Times
Trending Stories, Viral News, Gossips & Everything in Kannada

Gruha Lakshmi Money: ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದ ಎಲ್ಲಾ ಮಹಿಳೆಯರಿಗೆ ಬಿಗ್ ಅಪ್ಡೇಟ್! ಸರ್ಕಾರದ ಅಧಿಕೃತ ಘೋಷಣೆ

advertisement

ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ರಾಜ್ಯ ಸರಕಾರದಲ್ಲಿ ದೊಡ್ಡ ಮಟ್ಟಿಗೆ ಯಶಸ್ಸು ಪಡೆದಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಇದ್ದ ಪಂಚ ಗ್ಯಾರೆಂಟಿ ಪೈಕಿ ಈ ಒಂದು ಯೋಜನೆ ಕೂಡ ಒಂದಾಗಿ ಸೇರಿದೆ. ರಾಜ್ಯದ ಮಹಿಳೆಯರಿಗೆ ತಿಂಗಳಿಗೆ 2000 ರೂಪಾಯಿ ನಂತೆ ಕಂತಿನ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದು ಬಳಿಕ ಹಣ ಸಹ ಬಿಡುಗಡೆ ಮಾಡಲಾಯಿತು. ಹೀಗಾಗಿ ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್ ಸರಕಾರ ವರದಾನವನ್ನೇ ನೀಡುತ್ತಿದೆ.

ಗೃಹಲಕ್ಷ್ಮೀಯಿಂದ ಫ್ರಿಜ್ ಖರೀದಿ:

ಸರಕಾರದ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಮೂಲಕ ಮಹಿಳೆಯರಿಗೆ ಆರ್ಥಿಕ ಪ್ರೋತ್ಸಾಹ ಧನ ನೀಡಿ ಬೆಂಬಲಿಸುತ್ತಲಿದೆ. ಒಂದು ಕಡೆ ಶಕ್ತಿ ಯೋಜನೆ ಇನ್ನೊಂದೆಡೆ ಗೃಹಲಕ್ಷ್ಮೀ ಯೋಜನೆ ಮಹಿಳೆಯರಿಗೆ ಬಹಳ ಸಹಕಾರಿ ಆಗುತ್ತಿದೆ. ಕಳೆದ 8 ತಿಂಗಳಿಂದ ಈ ಒಂದು ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಯ ಅಡಿಯಲ್ಲಿ ಹಣ ಮಂಜೂರು ಮಾಡಲಾಗಿದೆ. ಇದೇ ಹಣ ಕೂಡಿಟ್ಟು ಇತ್ತೀಚೆಗಷ್ಟೇ ಓರ್ವ ಮಹಿಳೆ ಫ್ರಿಜ್ ಕೂಡ ಕೊಂಡಿದ್ದು ದೊಡ್ಡ ಮಟ್ಟಿಗೆ ಸುದ್ದಿ ಆಗಿತ್ತು. ಇದೀಗ ಗೃಹಲಕ್ಷ್ಮೀ ಯೋಜನೆಯ ಹಳೆ ಬಾಕಿ ಕಂತಿನ ಜೊತೆಗೆ ಈ ಬಾರಿಯ ಕಂತಿನ ಹಣ ಯಾವಾಗ ಬರುತ್ತೆ ಎಂಬ ಮಾಹಿತಿ ಇಲ್ಲಿದೆ.

ಎಷ್ಟು ಹಣ ಬಂದಿದೆ?

 

Image Source: Asiana Times

 

advertisement

ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಅಡಿಯಲ್ಲಿ ಕಳೆದ 8 ಕಂತಿನ ಹಣ ಬಂದಿದ್ದು ಒಟ್ಟು 8 ಕಂತಿನಿಂದ 16,000 ಮೊತ್ತ ಮಹಿಳೆಯರಿಗೆ ಸಿಕ್ಕಿದೆ.ಆದರೆ ಅನೇಕರಿಗೆ ಸಮಸ್ಯೆ ಇರುವ ಕಾರಣಕ್ಕೆ ಹಣ ಮಂಜೂರು ಆಗಿಲ್ಲ. ಅನೇಕರು ಬ್ಯಾಂಕ್ ಖಾತೆ ಸಮಸ್ಯೆ ಇರುವ ಕಾರಣಕ್ಕೆ ಅನೇಕರು ಅಂಚೆ ಇಲಾಖೆಯ ಖಾತೆಯನ್ನು ಬದಲಾಯಿಸಿದ್ದಾರೆ. ಇಂತವರು ಚಿಂತೆ ಮಾಡಬೇಕಿಲ್ಲ ಹಳೆ ಬಾಕಿ ಕಂತನ್ನು ಬಿಡುಗಡೆ ಮಾಡುವ ದಿನಾಂಕವನ್ನು ಸರಕಾರ ತಿಳಿಸಿದೆ. ಅದೇ ರೀತಿ ಗೃಹಲಕ್ಷ್ಮೀ ಯೋಜನೆ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಬಹಳಷ್ಟು ಚಿಂತನೆ ನಡೆಸಿದೆ.

ಸಮಸ್ಯೆ ಇದೆ:

ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಇದುವರೆಗೆ ಪೂರ್ತಿ ಕಂತು ಬಂದ ವರ್ಗ ಒಂದೆಡೆಯಾದರೆ ಒಂದು ಕಂತಿನ ಹಣ ಬಂದಿಲ್ಲ ಹಾಗೂ ಭಾಗಶಃ ಬಂದಿದೆ ಅನ್ನೊರ ವರ್ಗವನ್ನು ನಾವು ಕಾಣಬಹುದು. ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಆಗದೇ ಇದ್ದರೆ, ಆಧಾರ್ ಕಾರ್ಡ್ EKYC ಮಾಡಿಸದೇ ಇದ್ದರೆ ಅಥವಾ ಬ್ಯಾಂಕಿನ ಖಾತೆ ಸಮಸ್ಯೆ ಇದ್ದರೆ ಆಗ ನಿಮಗೆ ಹಣ ಬರಲ್ಲ ಅದರ ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಸರಕಾರ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಜನರಿಗೆ ಸಮಸ್ಯೆ ಮನದಟ್ಟು ಮಾಡಲಾಗುತ್ತಿದೆ.

ಯಾವಾಗ ಹಣ ಬರುತ್ತೆ?

 

Image Source: News Next Live

 

ಗೃಹಲಕ್ಷ್ಮೀ ಯೋಜನೆಯ 5,6,7,8 ನೇ ಕಂತಿನ ಹಣ (Gruha Lakshmi Money) ಬರಲು ಬಾಕಿ ಇದ್ದವರಿಗೆ ಎಪ್ರಿಲ್ ತಿಂಗಳ 20ನೇ ತಾರೀಖಿನಂದು ಹಣ ಒಟ್ಟಿಗೆ ಬರಲಿದೆ, ಅದೇ ರೀತಿ ಈ ಬಾರಿಯ 8 ಕಂತಿನ ಹಣ ಬಾಕಿ ಇದ್ದವರಿಗೆ ಎಪ್ರಿಲ್ 25ರ ಒಳಗೆ ಹಣ ಬ್ಯಾಂಕ್ ಖಾತೆ ಅಥವಾ ಪೋಸ್ಟ್‌ ಆಫೀಸ್‌ ಖಾತೆಗೆ (Post Office Account) ಬರಲಿದೆ ಎಂದು ರಾಜ್ಯ ಸರಕಾರದ ಮೂಲಗಳು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.

advertisement

Leave A Reply

Your email address will not be published.